ಬಾಲಿವುಡ್ ನ ಹಿರಿಯ ನಟ ಬಿಗ್ ಬಿ ಅಮಿತಾಬ್ ಬಚ್ಚನ್ ಈ ವಯಸ್ಸಿನಲ್ಲೂ ಬಿಡುವಿಲ್ಲದೆ ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರೆ. ಅದೆಷ್ಟರ ಮಟ್ಟಿಗೆ ಅಂದರೆ ಅಮಿತಾಬ್ ಗೆ ಊಟ ಮಾಡಲು ಸಮಯ ಸಿಗುತ್ತಿಲ್ಲವಂತೆ. ಈ ಬಗ್ಗೆ ಸ್ವತಃ ಅಮಿತಾಬ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ದಿನದ ಒಂಬತ್ತು ಗಂಟೆ ಕೆಲಸ ಮಾಡುವೆ. ಕಾರಲ್ಲೇ ಊಟ ಮಾಡಿದೆ ಎಂದೆಲ್ಲ ಅಮಿತಾಬ್ ಬರೆದುಕೊಂಡಿದ್ದಾರೆ. ಸದ್ಯ ಅಮಿತಾಬ್ ಕಿರುತೆರೆಯ ಅತ್ಯಂತ ಜನಪ್ರಿಯ ಶೋ ಕೌನ್ ಬನೇಗಾ ಕರೋಡ್ಪತಿ ಸೀಸನ್ 16ರ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಇದರ ವೇಳಾ ಪಟ್ಟಿಯ ಪ್ರಕಾರ 81ನೇ ವಯಸ್ಸಲ್ಲೂ ಬಿಗ್ ಬಾಸ್ ಸರಿ ಸುಮಾರು ಒಂಬತ್ತು ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದಾರೆ. ಈ ಮಾಹಿತಿಯನ್ನೂ ಅವರೇ ಹೇಳಿದ್ದಾರೆ.
ಕರೋಡ್ಪತಿ ಸೆಟ್ ನಲ್ಲಿರುವ ಫೋಟೋವನ್ನೂ ಅವರು ಶೇರ್ ಮಾಡಿಕೊಂಡಿದ್ದು, ಕಾರಿನಲ್ಲೇ ಪ್ರಶ್ನೆಗಳನ್ನು ಓದುತ್ತಿದ್ದಾರೆ. ಅಲ್ಲಿಯೇ ಊಟ ಮಾಡುತ್ತಿದ್ದಾರೆ. ಜೊತೆಗೆ ಟ್ರಾವೆಲ್ ಮಾಡ್ತಾ, ಕಾರ್ಯಕ್ರಮದ ವಿವರವನ್ನೂ ಪಡೆದುಕೊಳ್ತಿದ್ದಾರೆ. ಈ ವಯಸ್ಸಿನಲ್ಲೂ ಅಮಿತಾಬ್ ಅವರಿಗೆ ಕೆಲಸದ ಮೇಲಿರುವ ಪ್ರೀತಿಯನ್ನು ಕಂಡು ಅಭಿಮಾನಿಗಳು ವಾವ್ ಅಂತಿದ್ದಾರೆ.