ಕಿಚ್ಚ ಸುದೀಪ್ ನಿರೂಪಣೆಯಲ್ಲಿ ಮೂಡಿ ಬರುವ ‘ಬಿಗ್ ಬಾಸ್ ಕನ್ನಡ ಸೀಸನ್ 11’ಕ್ಕೆ ಗ್ರ್ಯಾಂಡ್ ಓಪನಿಂಗ್ ಸಿಕ್ಕಿದೆ. ಸೋಷಿಯಲ್ ಮೀಡಿಯಾದಲ್ಲಿ ಸುದ್ದು ಮಾಡಿದವರು, ಕಿರುತೆರೆ ನಟ, ನಟಿಯರು ಬಿಗ್ ಬಾಸ್ ಮನೆಗೆ ಎಂಟ್ರಿಕೊಡ್ತಿದ್ದಾರೆ. ಈ ಬಾರಿ ನರಕ-ಸ್ವರ್ಗ ಕಾನ್ಸೆಪ್ಟ್ನಲ್ಲಿ ಬಿಗ್ ಬಾಸ್ ಮೂಡಿ ಬಂದಿದ್ದು, ಮೊದಲ ದಿನವೇ ವೀಕ್ಷಕರಿಗೆ ಬ್ಯಾಡ್ ನ್ಯೂಸ್ ಸಿಕ್ಕಿದೆ.
‘ಬಿಗ್ ಬಾಸ್ ಕನ್ನಡ’ ಈ ಬಾರಿ ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಪ್ರಸಾರ ಕಾಣುತ್ತಿದೆ. ಈ ಹಿಂದಿನ ಕೆಲವು ವರ್ಷ ‘ಬಿಗ್ ಬಾಸ್’ಗೆ 24 ಗಂಟೆ ಲೈವ್ ನೀಡಲಾಗುತ್ತಿತ್ತು. ಈ ಬಾರಿ ಅದನ್ನು ತೆಗೆಯಲಾಗಿದೆ. ಎಪಿಸೋಡ್ಗಿಂತ ಮೊದಲೇ ಬಿಗ್ ಬಾಸ್ ನೋಡಬಹುದು ಎಂದು ಪ್ಲ್ಯಾನ್ ಮಾಡಿದ್ದವರಿಗೆ ಬೇಸರ ಆಗಿದೆ.
ಕಳೆದ ವರ್ಷ ‘ಬಿಗ್ ಬಾಸ್’ ಲೈವ್ ನೀಡಿದಾಗ ಕೆಲವು ತೊಂದರೆಗಳು ಎದುರಾಗಿದ್ದವು. ವೀಕ್ಷಕರಿಗೆ ಎಲ್ಲವೂ ತಿಳಿಯಬಾರದು ಎನ್ನುವ ಕಾರಣಕ್ಕೆ ಪ್ರಮುಖ ಸಂಭಾಷಣೆಗಳನ್ನು ಮ್ಯೂಟ್ ಮಾಡಾಗುತ್ತಿತ್ತು. ಅಲ್ಲದೆ, ಯಾವುದೇ ಟಾಸ್ಕ್ಗಳನ್ನು ಇಲ್ಲಿ ತೋರಿಸುವ ಕೆಲಸ ಆಗುತ್ತಿರಲಿಲ್ಲ. ಇದು ಅನೇಕರಿಗೆ ಬೇಸರ ಮೂಡಿಸಿತ್ತು. ಅನೇಕರು ಇದರ ಬಗ್ಗೆ ಅಪಸ್ವರ ತೆಗೆದಿದ್ದರು. ಈ ಬಾರಿ ಲೈವ್ ಇರುವುದಿಲ್ಲ. ಹೀಗಾಗಿ, ರಾತ್ರಿ ಒಂದೂವರೆ ಗಂಟೆ ತೋರಿಸುವ ಎಪಿಸೋಡ್ನೇ ಎಲ್ಲರೂ ನೋಡಬೇಕಾಗಿದೆ.
‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಈ ಬಾರಿ ಸ್ವರ್ಗ ನರಕ ಕಾನ್ಸೆಪ್ಟ್ನಲ್ಲಿ ಇದೆ. 10 ಜನ ಸ್ವರ್ಗ ಹಾಗೂ 7 ಜನ ನರಕದಲ್ಲಿ ಇದ್ದಾರೆ. ಭವ್ಯಾ ಗೌಡ, ಯಮುನಾ ಶ್ರೀನಿಧಿ, ಧನರಾಜ್ ಆಚಾರ್, ಗೌತಮಿ ಜಾಧವ್, ಅನುಷಾ ರೈ, ಧರ್ಮಕೀರ್ತಿರಾಜ್, ಲಾಯರ್ ಜಗದೀಶ್, ಶಿಶಿರ್, ತ್ರಿವಿಕ್ರಂ, ಹಂಸ, ಮಾನಸಾ, ಗೋಲ್ಡ್ ಸುರೇಶ್, ಐಶ್ವರ್ಯಾ ಸಿಂಧೋಗಿ, ಚೈತ್ರಾ ಕುಂದಾಪುರ್, ಉಗ್ರಂ ಮಂಜು, ಮೋಕ್ಷಿತಾ ಪೈ, ರಂಜಿತ್ ಕುಮಾರ್ ಬಿಗ್ ಬಾಸ್ ಮನೆಯಲ್ಲಿ ಪ್ರೇಕ್ಷಕರನ್ನು ರಂಜಿಸಲಿದ್ದಾರೆ.