ಬಿಗ್ ಬಾಸ್ ಸೀಸನ್ 11 ಆರಂಭವಾದ ಎರಡೇ ವಾರಕ್ಕೆ ಸಾಕಷ್ಟು ವಿವಾದಗಳನ್ನು ಮಾಡಿಕೊಳ್ಳುತ್ತಿದೆ. ಹಿಂದನ ಎಲ್ಲಾ ಸೀಸನ್ ಗಳಿಗೆ ಹೋಲಿಸಿದರೆ ಈ ಸೀಸನ್ ಹೆಚ್ಚು ವಿವಾದಕ್ಕೆ ಕಾರಣವಾಗುತ್ತಿದೆ. ಸ್ಪರ್ಧಿ ಲಾಯರ್ ಜಗದೀಶ್ ಪದೇ ಪದೇ ಕಾಂಟ್ರವರ್ಸಿ ಮಾಡಿಕೊಳ್ಳುತ್ತಿದ್ದಾರೆ. ಈ ಹಿಂದೆ ಬಿಗ್ ಬಾಸ್, ಹೆಣ್ಣು ಮಕ್ಕಳ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರು. ಇದನ್ನು ಇನ್ನುಳಿದ ಎಲ್ಲ ಸದಸ್ಯರು ಖಂಡಿಸಿದ್ದಾರೆ. ಈ ಬಗ್ಗೆ ವಾದ ನಡೆಯುವಾಗ ರಂಜಿತ್ ಅವರು ಜಗದೀಶ್ ಮೇಲೆ ಕೈ ಮಾಡಿದ್ದು, ಇದರಿಂದ ಸಿಟ್ಟಾದ ಬಿಗ್ ಬಾಸ್ ಕಠಿಣ ನಿರ್ಧಾರ ತೆಗೆದುಕೊಂಡಿದ್ದಾರೆ.
ಗುರುವಾರದ (ಅಕ್ಟೋಬರ್ 17) ಸಂಚಿಕೆಯಲ್ಲಿ ಜಗದೀಶ್ ಮತ್ತು ಗೋಲ್ಡ್ ಸುರೇಶ್ ಮಾತನಾಡುತ್ತ ಕುಳಿತಿದ್ದರು. ಆಗ ಹಂಸಾ ಬಗ್ಗೆ ಜಗದೀಶ್ ಅವರು ಒಂದಷ್ಟು ಆರೋಪಗಳನ್ನು ಮಾಡಿದರು. ಮಾತಿನ ಭರದಲ್ಲಿ ಹಂಸಾ ಬಗ್ಗೆ ಜಗದೀಶ್ ಅಸಭ್ಯ ಪದ ಬಳಕೆ ಮಾಡಿದ್ದಾರೆ. ಇದನ್ನು ಗೋಲ್ಡ್ ಸುರೇಶ್ ಅವರು ಕೂಡಲೇ ಖಂಡಿಸಿದ್ದಾರೆ. ಅಲ್ಲಿಂದ ದೊಡ್ಡ ಜಗಳ ಶುರುವಾಗಿದೆ.
ಜಗದೀಶ್ ತುಂಬ ಕೆಟ್ಟ ಮಾತುಗಳನ್ನು ಆಡಿದ್ದರಿಂದ ಇಡೀ ಮನೆಯೇ ಅವರ ವಿರುದ್ಧ ತಿರುಗಿ ಬಿದ್ದಿದೆ. ಚೈತ್ರಾ ಕುಂದಾಪುರ, ಮಾನಸಾ, ಭವ್ಯಾ ಗೌಡ, ಗೌತಮಿ ಜಾದವ್, ಮೋಕ್ಷಿತಾ ಪೈ, ತ್ರಿವಿಕ್ರಮ್, ರಂಜಿತ್, ಉಗ್ರಂ ಮಂಜು ಮುಂತಾದವರು ಜಗದೀಶ್ಗೆ ಪಾಠ ಕಲಿಸಲು ಮುಂದಾಗಿದ್ದಾರೆ. ಈ ವೇಳೆ ಚೈತ್ರಾ ಕುಂದಾಪುರ ಅವರ ವೈಯಕ್ತಿಕ ವಿಚಾರಗಳನ್ನು ಕೂಡ ಜಗದೀಶ್ ಎಳೆದು ತಂದಿದ್ದಾರೆ. ಜಗಳ ನಿಲ್ಲಿಸುವಂತೆ ಸ್ವತಃ ಬಿಗ್ ಬಾಸ್ ಆದೇಶ ನೀಡಿದರೂ ಕೂಡ ಅದಕ್ಕೆ ಕೆಲವರು ಬೆಲೆ ನೀಡಲಿಲ್ಲ.
ಹೆಣ್ಮಕ್ಕಳ ಬಗ್ಗೆ ಜಗದೀಶ್ ಆಡಿದ ಮಾತುಗಳನ್ನು ಖಂಡಿತಾ ಸಹಿಸಲು ಸಾಧ್ಯವಿಲ್ಲ ಎಂದು ಬಿಗ್ ಬಾಸ್ ಅಂತಿಮ ನಿರ್ಧಾರಕ್ಕೆ ಬಂದಿದ್ದಾರೆ. ಅಲ್ಲದೇ, ಜಗದೀಶ್ ಮೇಲೆ ಕೈ ಮಾಡಿದ್ದಕ್ಕಾಗಿ ರಂಜಿತ್ ಅವರ ಮೇಲೂ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ. ‘ಜಗದೀಶ್ ಹಾಗೂ ರಂಜಿತ್ ಈ ಕೂಡಲೇ ಮನೆಯಿಂದ ಹೊರಗೆ ಬನ್ನಿ’ ಎಂದು ಬಿಗ್ ಬಾಸ್ ಹೇಳಿದ್ದಾರೆ. ಮುಖ್ಯದ್ವಾರ ಓಪನ್ ಆಗಿದೆ. ಆದರೆ ಅವರಿಬ್ಬರು ಮನೆಯಿಂದ ಹೊರಬಂದಿದ್ದು ಕಾಣಿಸಿಲ್ಲ. ಜೊತೆಗೆ ಜಗದೀಶ್ ಪತ್ನಿ ಕೂಡ ಜಗದೀಶ್ ಮನೆಗೆ ಬಂದಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಇದು ಕುತೂಹಲಕ್ಕೆ ಕಾರಣವಾಗಿದೆ.
ಜಗದೀಶ್ ಅವರ ವರ್ತನೆಯಿಂದ ಇಡೀ ಮನೆಯೇ ಬೇಸತ್ತಿದ್ದರೂ ಅವರು ಮನೆಯಿಂದ ಹೊರಗೆ ಹೋಗುವುದು ಬೇಡ ಎಂದು ಚೈತ್ರಾ ಕುಂದಾಪುರ ಹೇಳಿದ್ದಾರೆ. ಯಾಕೆಂದರೆ, ಜಗದೀಶ್ ಅವರ ವ್ಯಕ್ತಿತ್ವ ಯಾವ ರೀತಿ ಇದೆ ಎಂಬುದು ಇಡೀ ಕರ್ನಾಟಕಕ್ಕೆ ಗೊತ್ತಾಗಬೇಕು. ಹಾಗಾಗಿ ಅವರನ್ನು ಮನೆಯಲ್ಲೇ ಇರಲು ಬಿಡಬೇಕು ಎಂದು ಅವರು ಹೇಳಿದ್ದಾರೆ. ಭ್ಯವ್ಯಾ ಕೂಡ ಅದೇ ರೀತಿಯ ಅಭಿಪ್ರಾಯ ತಿಳಿಸಿದ್ದಾರೆ. ಮುಂದಿನ ಸಂಚಿಕೆಯಲ್ಲಿ ಏನಾಗಲಿದೆ ಎಂಬ ಕುತೂಹಲ ಶುರುವಾಗಿದೆ.