ಬೆಂಗಳೂರು: ಬನಶಂಕರಿ ದೇವಸ್ಥಾನದಲ್ಲಿ ಮಹತ್ತರ ಬೆಳವಣಿಗೆಯಾಗಿದ್ದು ಇದೀಗಾ ಈ ಅಡಿಕೆ ತಟ್ಟೆಗಳನ್ನ ಬ್ಯಾನ್ ಮಾಡಲಾಗಿದೆ ಕಸದಿಂದ ರಸಮಾಡಲು ಬನಶಂಕರಿ ದೇವಸ್ಥಾನದ ಆಡಳಿತ ಮಂಡಳಿ ಮುಂದಾಗಿದೆ.
ಬನಶಂಕರಿ ದೇವಸ್ಥಾನಕ್ಕೆ ಪ್ರತಿದಿನ ಸಾವಿರಾರು ಜನ ಭಕ್ತಾಧಿಗಳು ಬರ್ತಾರೆ. ಅಲ್ಲದೇ ದೇವಸ್ಥಾನದಲ್ಲಿ ಸಾವಿರಾರು ಜನ ಭಕ್ತಾಧಿಗಳು ಭಕ್ತಿಭಾವದಿಂದ ಹಲವು ನಂಬಿಕೆಗಳನ್ನ ಇಟ್ಕೊಂಡು ತಾಯಿಗೆ ತುಪ್ಪದ ದೀಪಗಳನ್ನ ಹಚ್ಚಿ ಪೂಜೆ ಸಲ್ಲಿಸುತ್ತಾರೆ. ಆದರೆ ಈ ತುಪ್ಪದ ದೀಪವನ್ನ ಹಚ್ಚುವ ಸಲುವಾಗಿ ಭಕ್ತಾಧಿಗಳು ಅಡಿಕೆ ತಟ್ಟೆಗಳನ್ನ ಬಳಕೆ ಮಾಡಿಕೊಳ್ಳುತ್ತಿದ್ರು. ಇನ್ನು, ಈ ಅಡಿಕೆ ತಟ್ಟೆಗಳನ್ನ ಬಳಕೆ ಮಾಡಿ ದೇವಸ್ಥಾನದಲ್ಲಿಯೇ ಬಿಟ್ಟು ಹೋಗುತ್ತಿದ್ರು.
ಇದರಿಂದ ದೇವಸ್ಥಾನದಲ್ಲಿ ಸಾಕಷ್ಟು ಘನತ್ಯಾಜ್ಯ ಉಂಟಾಗುತ್ತಿತ್ತು. ಇದೀಗಾ ಈ ಅಡಿಕೆ ತಟ್ಟೆ ಹಾಗೂ ಪ್ಲಾಸ್ಟಿಕ್ ನಂತಹ ವಸ್ತುಗಳನ್ನ ದೇವಸ್ಥಾನದ ಆಡಳಿತ ಮಂಡಳಿ ಬ್ಯಾನ್ ಮಾಡಿದೆ.
ದೇವಸ್ಥಾನಕ್ಕೆ ಬರುವ ಭಕ್ತಾಧಿಗಳು ಪ್ರತಿದಿನ ಅಡಿಕೆ ತಟ್ಟೆಗಳನ್ನ ಬಳಕೆ ಮಾಡಿಕೊಳ್ಳುತ್ತಿದ್ರು. ಇದರಿಂದ ದೇವಸ್ಥಾನದ ಸುತ್ತಲು ಕಸ ಹೆಚ್ಚಾಗಿ ಕಂಡುಬರುತ್ತಿತ್ತು. ಹೀಗಾಗಿ ದೇವಸ್ಥಾನದ ಆಡಳಿತ ಮಂಡಳಿ ಅಡಿಕೆ ತಟ್ಟೆ ಹಾಗೂ ಪ್ಲಾಸ್ಟಿಕ್ ಬ್ಯಾನ್ ಮಾಡಿದ್ದು, ದೇವಸ್ಥಾನಕ್ಕೆ ಬರುವ ಭಕ್ತಾಧಿಗಳಿಗೆ ಸೂಚಿಸಲಾಗಿದೆ. ಹೀಗಾಗಿ ದೇವಸ್ಥಾನಕ್ಕೆ ಬರುವ ಭಕ್ತಾಧಿಗಳು ಮನೆಯಿಂದಲೇ ಪ್ಲೇಟ್ ಗಳನ್ನ ತಂದು ಪೂಜೆ ಮಾಡುತ್ತಿದ್ದಾರೆ. ಇದರಿಂದ ದೇವಸ್ಥಾನದ ಸುತ್ತಲೂ ಕಸದ ಸಮಸ್ಯೆ ನಿವಾರಣೆಯಾಗಿದೆ. ಇದು ಒಂದು ಕಡೆಯಾದ್ರೆ ಮತ್ತೊಂದು ಕಡೆ ದೇವಸ್ಥಾನದಲ್ಲಿ ಸಂಗ್ರಹಣೆಯಾಗುವ ಕಸದಿಂದ ಗೊಬ್ಬರ ತಯಾರಿಸಲು ದೇವಸ್ಥಾನ ಆಡಳಿತ ಮಂಡಳಿ ಮುಂದಾಗಿದೆ.