ಲಕ್ನೋ: ಸೂಪರ್ ಸಂಡೇನಲ್ಲಿ ಇಂಗ್ಲೆಂಡ್ (England) ವಿರುದ್ಧ ನಡೆಯುತ್ತಿರುವ ಪಂದ್ಯವು ರೋಚಕತೆಯಿಂದ ಕೂಡಿದೆ. 20 ವರ್ಷಗಳ ಬಳಿಕ ಟೀಂ ಇಂಡಿಯಾ (Team India) ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ಮಣಿಸಿ ಹೊಸ ಇತಿಹಾಸ ನಿರ್ಮಿಸುವ ತವಕದಲ್ಲಿದೆ.
ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡ ಇಂಗ್ಲೆಂಡ್ ಬ್ಯಾಟಿಂಗ್ ಮಾಡುವ ಅವಕಾಶವನ್ನು ಟೀಂ ಇಂಡಿಯಾಕ್ಕೆ ಬಿಟ್ಟುಕೊಟ್ಟಿತು. ಉತ್ತಮ ಆರಂಭ ಪಡೆಯುವ ನಿರೀಕ್ಷೆಯಲ್ಲಿದ್ದ ಟೀಂ ಇಂಡಿಯಾ, 11.5 ಓವರ್ಗಳಲ್ಲಿ 40 ರನ್ಗಳಿಗೆ ಪ್ರಮುಖ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೀಡಾಯಿತು. ವಿಶ್ವದಾಖಲೆಯ ಶತಕ ಸಿಡಿಸುವ ಭರವಸೆ ಮೂಡಿಸಿದ್ದ ಕಿಂಗ್ ಕೊಹ್ಲಿ (Virat Kohli) 9 ಎಸೆತಗಳಲ್ಲಿ 1 ರನ್ ಸಹ ಗಳಿಸದೇ ನಿರಾಸೆ ಮೂಡಿಸಿದರು. ಇದು ಭಾರತೀಯ ಅಭಿಮಾನಿಗಳಿಗೆ ಮಾತ್ರವಲ್ಲದೇ ವಿದೇಶಗಳಿಂದ ಬಂದಿದ್ದ ಅಭಿಮಾನಿಗಳಲ್ಲೂ ನಿರಾಸೆ ತರಿಸಿತ್ತು.
ಲಕ್ನೋ ಕ್ರೀಡಾಂಗಣದಲ್ಲಿ ಕಿಂಗ್ ಕೊಹ್ಲಿ ಶತಕ ಸಿಡಿಸುತ್ತಾರೆ ಎಂಬ ಆಸೆಯಿಂದಲೇ ಅಮೆರಿಕದಿಂದ 12,445 ಕಿಮೀ (7,732 ಮೈಲು) ದೂರ ಪ್ರಯಾಣ ಮಾಡಿ ಅಭಿಮಾನಿಯೊಬ್ಬರು ಮ್ಯಾಚ್ ನೋಡಲು ಬಂದಿದ್ದಾರೆ. ಆದ್ರೆ ಕೊಹ್ಲಿ ಒಂದು ರನ್ ಕೂಡ ಗಳಿಸದೇ ಶೂನ್ಯಕ್ಕೆ ಔಟಾಗಿದ್ದು, ಅಮಾನಿಗಳಿಗೆ (Kohli Fans) ಅರಗಿಸಿಕೊಳ್ಳಲಾರದಷ್ಟು ಬೇಸರವಾಗಿದೆ.
2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಇಂಡಿಯಾ ಸ್ಟಾರ್ ಪ್ಲೇಯರ್ ವಿರಾಟ್ ಕೊಹ್ಲಿ ಬೆಸ್ಟ್ ಫಾರ್ಮ್ನಲ್ಲಿದ್ದು, 6 ಪಂದ್ಯಗಳಲ್ಲಿ 1 ಶತಕ ಸೇರಿ ಒಟ್ಟು 354 ರನ್ ಗಳಿಸಿದ್ದಾರೆ. ಈ ಮೂಲಕ ಪ್ರಸ್ತುತ ಟೂರ್ನಿಯಲ್ಲಿ ಅತಿಹೆಚ್ಚು ರನ್ ಗಳಿಸಿದ ಆಟಗಾರರ ಪೈಕಿ 5ನೇ ಸ್ಥಾನದಲ್ಲಿದ್ದಾರೆ