ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ ಹಾಗು ಪವಿತ್ರಾ ಗೌಡ ನಡುವೆ ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಕಿತ್ತಾಟ ಶುರುವಾಗಿದ್ದು, ಪವಿತ್ರಾ ಗೌಡ ಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ವಾರ್ನಿಂಗ್ ನೀಡಿದ್ದಾರೆ. ಅದಕ್ಕೆ ಪ್ರತಿಯಾನಿ ಪವಿತ್ರಗೌಡ ನನ್ನ ಬಗ್ಗೆ ನಿಮಗೂ ಗೊತ್ತು ಆದ್ರೂ ಹೀಗೆ ಮಾತನಾಡೋದು ಸರಿ ಅಲ್ಲ ನನಗೂ ಗೊತ್ತು ಏನು ಮಾಡಬೇಕು ಎಂದು ವಾಪಸ್ ತಿರುಗೇಟು ಕೂಡ ನಡೆಸಿದ್ದಾರೆ.
ಪವಿತ್ರ ಗೌಡ ಹಾಗು ನಟ ದರ್ಶನ್ ನಡುವಿನ ಸ್ನೇಹ ಹತ್ತು ವರ್ಷಗಳು ತುಂಬಿದ ಸಂದರ್ಭದಲ್ಲಿ ದರ್ಶನ್ ಜೊತೆಗೆ ತೆಗೆಸಿಕೊಂಡಿದ್ದ ಫೋಟೋಗಳನ್ನು ಪವಿತ್ರ ಗೌಡ ತಮ್ಮ ಇನ್ಸ್ಟಾಗ್ರಾಂನಲ್ಲಿ ಒಂದು ಮಳೆಬಿಲ್ಲು ಹಾಡೊಂದನ್ನು ಹಾಕಿ ಪೋಸ್ಟ್ ಮಾಡಿದ್ದರು.
ಇದಕ್ಕೆ ಪತ್ರಿಯಾಗಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ವಿಜಿ ದರ್ಶನ್ ಎಂಬ ಇನ್ಸ್ಟಾಗ್ರಾಂ ಖಾತೆಯ ಮೂಲಕ ಪವಿತ್ರ ಗೌಡ ಅವರಿಗೆ ಸಂಬಂಧಿಸಿದ ಫೋಟೋಗಳನ್ನು ದರ್ಶನ್ ಪತ್ನಿ ಪೋಸ್ಟ್ ಮಾಡುವ ಮೂಲಕ ಲೀಗಲ್ ಆ್ಯಕ್ಷನ್ ತೆಗೆಕೊಳ್ಳುವ ಎಚ್ಚರಿಕೆಯನ್ನು ಪವಿತ್ರಗೌಡಗೆ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇಬ್ಬರ ಪರ್ಸನಲ್ ವಾರ್ ಮುಂದುವರೆದಿದೆ.
ಜಗಳ ಶುರುವಾಗಿದ್ದು ಎಲ್ಲಿಂದ ಗೊತ್ತೆ? ‘
ಡಿ-ಬಾಸ್’ ಅಂತಾ ಅಭಿಮಾನಿಗಳಿಂದ ಕರೆಸಿಕೊಳ್ಳುವ ದರ್ಶನ್ ಅವರಿಗೆ, ಮೇಲಿಂದ ಮೇಲೆ ಸಮಸ್ಯೆ ಎದುರಾಗುತ್ತಿದೆ. ಕೌಟುಂಬಿಕ ಕಲಹವೇ ದರ್ಶನ್ ಅವರ ಸಿನಿಮಾ ಲೈಫ್ಗೂ ದೊಡ್ಡ ಅಡ್ಡಿ ಎಂಬ ಆರೋಪ ಕೇಳಿಬರುತ್ತಿದೆ. ಹೀಗಿದ್ದಾಗಲೇ ನಿನ್ನೆ ನಟ ದರ್ಶನ್ ಅವರ ಪತ್ನಿ ಗರಂ ಆಗಿ, ಪವಿತ್ರ ಗೌಡಗೆ ಎಚ್ಚರಿಕೆ ಸಂದೇಶ ನೀಡಿದ್ದರು. ಇಷ್ಟೆಲ್ಲಾ ಬೆಳವಣಿಗೆ ನಡುವೆ ಇಂದು, ಪವಿತ್ರ ಗೌಡ ಕೂಡ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ, ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ ದರ್ಶನ್ ಅವರಿಗೆ ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ಇಬ್ಬರ ನಡುವೆ ಈಗ ಕಾನೂನು ಸಮರ ಶುರುವಾಗುತ್ತಾ? ಅನ್ನೋ ಚರ್ಚೆಗಳು ಕೂಡ ಜೋರಾಗಿವೆ.