ಬೆಂಗಳೂರು: ಬಿಬಿಎಂಪಿಗೆ ಇದಕ್ಕಿಂತ ದೊಡ್ಡ ಅಪಮಾನ ಮತ್ತೊಂದಿಲ್ಲ.ಒತ್ತುವರಿ ತೆರವಿಗಿಂತ ಹೋಗಿ ಬರಿಗೈಯ್ಯಲ್ಲಿ ವಾಪಸ್ಸಾಗಿದೆ .ಬರೊಕ್ಕೆ ಮುನ್ನ ನಾವು ಕೆಲಸ ಮಾಡಿದ್ದೇವೆ ಎಂದು ತೋರಿಸಲಿಕ್ಕೆ ಬಡವರ ಶೆಡ್ ಗಳನ್ನು ಹೊಡೆದುರುಳಿಸಲಾಗಿದೆ.ಪರಿಣಾಮ ಕಾರ್ಯಾಚರಣೆ ಕೆಲವೇ ಗಂಟೆಗಳಲ್ಲಿ ಸ್ಥಗಿತ ಆಗಿದೆ.ಕಂದಾಯ ಇಲಾಖೆ ಮತ್ತು ಬಿಬಿಎಂಪಿ ಸಮನ್ವಯ ಕೊರತೆಯಿಂದ ತೆರವು ಕಾರ್ಯಾಚರಣೆ ನಗೆಪಾಟಲಿಗೀಡಾಗಿದೆ.
ಸಣ್ಣ ಪ್ರಮಾಣದ ಮಳೆಗೂ ಬೆಂಗಳೂರಿನ ಮಹಾದೇವಪುರ ವಲಯ ಮುಳುಗಡೆ ಆಗ್ತಾ ಇದೆ. ಇದಕ್ಕೆ ಕಾರಣ ರಾಜಕಾಲುವೆ ಒತ್ತುವರಿ. ಒತ್ತುವರಿ ತೆರವು ಮಾಡಿ ಮಳೆಯಿಂದ ಆಗುವ ಅನಾಹುತ ತಪ್ಪಿಸಲು ಬಿಬಿಎಂಪಿ ಇವತ್ತು ಮಹಾದೇವಪುರ ವಲಯದ ಮುನ್ನೆಕೊಳವಿನಲ್ಲಿ 22 ಕಡೆ ತೆರವಿಗೊಳಿಸಿ ಜೆಸಿಬಿ ಘರ್ಜನೆಗೆ ಸಿದ್ದವಾಗಿತ್ತು. ಆದರೆ ಕಂದಾಯ ಇಲಾಖೆ ಮತ್ತು ಬಿಬಿಎಂಪಿ ಸಮನ್ವಯತೆ ಕೊರತೆಯಿಂದ ಒತ್ತುವರಿ ಕಾರ್ಯಾಚರಣೆ ಠುಸ್ ಪಟಾಕಿ ಆಯ್ತು. 22 ಅಪಾರ್ಟ್ಮೆಂಟ್ ಗಳನ್ನ ಮಾರ್ಕ್ ಮಾಡಿ ತೆರವು ಮಾಡದೇ ಕೂಲಿ ಕಾರ್ಮಿಕರ ಶೆಡ್ ಗಳನ್ನ ಹೊಡೆದು ದರ್ಪ ಮೆರೆದಿದೆ. ಮತ್ತೊಮ್ಮೆ ಉಳ್ಳವರ ಪರವಾಗಿ ಪರೋಕ್ಷವಾಗಿ ಕೆಲಸ ಮಾಡ್ತಾ ಬಹಿರಂಗವಾಗಿದೆ…
ಇನ್ನೂ ಮುನ್ನೆಕೊಳವಿನಲ್ಲಿ ಒತ್ತುವರಿ ಮಾಡಿರುವವರು ಕಳೆದ ವರ್ಷ ಸೆಪ್ಟೆಂಬರ್ ನಲ್ಲೆ ಕೋರ್ಟ್ ನಿಂದ ಸ್ಟೇ ತಂದಿದ್ದಾರೆ. ಈ ವಿಚಾರವನ್ನ ಬೆಂಗಳೂರು ನಾರ್ತ್ ತಹಶೀಲ್ದಾರ್ ಬಿಬಿಎಂಪಿ ಅಧಿಕಾರಿಗಳ ಗಮನಕ್ಕೆ ತಂದಿಲ್ಲ. ತೆರವಿಗೆ ಬಂದ ಸ್ಥಳೀಯರು ಮತ್ತು ವಕೀಲರು ಬಿಬಿಎಂಪಿ ಅಧಿಕಾರಿಗಳಿಗೆ ಸ್ಟೇ ಬಗ್ಗೆ ತಿಳಿಸಿದ್ರು. ಬಿಬಿಎಂಪಿ ಯಾವುದೇ ಯಾವುದೇ ನೋಟಿಸ್ ಕೊಟ್ಟಿಲ್ಲ. ಇಂಟಿಮೆಷನ್ ಕೂಡ ಮಾಡಿಲ್ಲ ಅಂತಾ ಆಕ್ರೋಶ ಹೊರಹಾಕಿದ್ರು.
ಇನ್ನೂ ಸ್ಥಳೀಯರು ಮತ್ತು ವಕೀಲರು ಸ್ಟೇ ಆರ್ಡರ್ ಕಾಪಿ ತೋರಿಸ್ತಿದ್ದಂತೆ ಬಿಬಿಎಂಪಿ ಮಹಾದೇವಪುರ ವಲಯ ಇಂಜಿನ್ ಲೋಕೇಶ್ ಪ್ರತಿಕ್ರಿಯಿಸಿ ಮುನೇಕೊಳಲು ವಾರದ ಹಿಂದೆ ತೆರವಿಗೆ ಸಿದ್ದತೆ ನಡೆಸಿದ್ದೇವೆ. ಇಲ್ಲಿ ವಕೀಲರು ತಡೆಯಾಜ್ಞೆ ಇದೆ ಅಂತ ಪತ್ರ ತೋರಿಸಿದ್ದಾರೆ. ಅದನ್ನು ಪರಿಶೀಲನೆ ನಡೆಸುತ್ತಿದ್ದೇವೆ. ಕೋರ್ಟ್ ಸ್ಟೇ ಕುರಿತು ನಮಗೆ ಯಾವುದೇ ಮಾಹಿತಿ ನೀಡಿಲ್ಲ.ಸ್ಪೈಸ್ ಗಾರ್ಡ್ನನ್ ಸರ್ವೇ ನಂಬರ ೩೪ ಇದೆ ಎಂದು ಹೇಳ್ತಿದ್ದಾರೆಕೆಲ ಗೊಂದಲಗಳಿದೆ, ಅದನ್ನು ಬಗೆಹರಿಸುತ್ತಿದ್ದೇವೆ. ೧೧ ಕಡೆ ಮಾರ್ಕ್ ಮಾಡಿದ್ದೆವು, ಗೊಂದಲ ಬಗೆಹರಿದ ನಂತರ ತೆರವು ಮಾಡ್ತೆವೆ ಅಂದರು.
ಆದರೆ ಈ ನಡುವೆ ವಾಪಸ್ಸಾಗುವ ವೇಳೆ ಅಮಾಯಕರು ಹಾಗೂ ನಿಷ್ಪಾಪಿಗಳು ನಿರ್ಮಿಸಿಕೊಂಡಿದ್ದ ಶೆಡ್ ಗಳನ್ನು ಕೆಡವಿ ಬಂದಿದ್ದಾರೆ.ಯಾವುದೇ ಮುನ್ಸೂಚನೆಯಿಲ್ಲದೆ ಶೆಡ್ ಗಳನ್ನು ತೆರವು ಮಾಡಿದ ಕ್ರಮಕ್ಕೆ ಸಂತ್ರಸ್ಥರು ಹಿಡಿಶಾಪ ಹಾಕಿದ್ರು. ಹೈಡ್ರಾಮಾದ ರೂಪದಲ್ಲಿ ನಡೆದ ಇಂದಿನ ಕಾರ್ಯಾಚರಣೆ ಬಿಬಿಎಂಪಿಯ ಯೋಗ್ಯತೆ ಮತ್ತು ಬಂಡವಾಳವನ್ನು ಬಯಲು ಮಾಡಿದ್ದು ವಿಪರ್ಯಾಸ.