ಕೋಲಾರ: 2023ರ ಚುನಾವಣಾ ಹೊಸ್ತಿಲಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಿಗ್ ಶಾಕ್ ಎದುರಾಗಿದೆ. ಕೋಲಾರ ಜಿಲ್ಲೆ ಮುಳಬಾಗಿಲು ವಿಧಾನಸಭಾ ಕ್ಷೇತ್ರದ ಪ್ರಭಾವಿ ಮುಖಂಡ ಆನಂದ್ ರೆಡ್ಡಿ ಕಾಂಗ್ರೆಸ್ ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಮುಳಬಾಗಿಲು ತಾಲ್ಲೂಕಿನ ಶಿನಿಗಾನಹಳ್ಳಿಯ ಆನಂದ್ ರೆಡ್ಡಿ ನಿವಾಸದ ಬಳಿ ಹಮ್ಮಿಕೊಂಡಿದ್ದ ಬೃಹತ್ ಜೆಡಿಎಸ್ ಕಾರ್ಯಕರ್ತರ ಸಮಾವೇಶಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಭಾಗಿಯಾಗಿದ್ದರು.
ಈ ವೇಳೆ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಪಕ್ಷಕ್ಕೆ ಆನಂದ ರೆಡ್ಡಿ ಅಧಿಕೃತವಾಗಿ ಸೇರ್ಪಡೆಗೊಂಡರು, ಕಳೆದ 30 ವರ್ಷಗಳ ಕಾಂಗ್ರೆಸ್ ಪಕ್ಷದ ಪಯಣವನ್ನು ಅಂತ್ಯಗೊಳಿಸಿ ತೆನೆ ಹೊತ್ತ ಮಹಿಳೆಗೆ ಜೈ ಎಂದರು. ಇನ್ನು ಈ ಹಿಂದೆ ಆನಂದ್ ರೆಡ್ಡಿ ಪತ್ನಿ ಗೀತಮ್ಮ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆಯಾಗಿದ್ದರು.
ಮಾಜಿ ಶಾಸಕ ಕೊತ್ತೂರು ಮಂಜುನಾಥ್ ರ ಬಲಗೈ ಬಂಟ ಹಾಗೂ ಪ್ರಭಾವಿ ಮುಖಂಡರಾಗಿ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದರು. ಆದ್ರೆ ಮುಳಬಾಗಿಲಿನಲ್ಲಿ ಕಾಂಗ್ರೆಸ್ ಪಕ್ಷದ ಕೆಲವು ಮುಖಂಡರ ಗುಂಪುಗಾರಿಕೆಯಿಂದ ಬೇಸತ್ತು, ಜೆಡಿಎಸ್ ಅಭ್ಯರ್ಥಿ ಸಮೃದ್ದಿ ಮಂಜುನಾಥ್ ರವರ ನಾಯಕತ್ವ ಹಾಗೂ ಜೆಡಿಎಸ್ ಪಕ್ಷದ ಪಂಚರತ್ನ ಯೋಜನೆಗಳನ್ನ ಮೆಚ್ಚಿ ತಾಲ್ಲೂಕಿನ ಅಭಿವೃದ್ದಿಗಾಗಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ಇನ್ನು ಜೆಡಿಎಸ್ ಸೇರ್ಪಡೆ ಕಾರ್ಯಕ್ರಮದಲ್ಲಿ 5 ಸಾವಿರಕ್ಕೂ ಹೆಚ್ಚು ಮಂದಿ ಬಾಗವಹಿಸುವ ಮೂಲಕ ಚುನಾವಣೆ ಹೊತ್ತಲ್ಲಿ ಕಾಂಗ್ರೆಸ್ ಗೆ ಬಾರಿ ಶಾಕ್ ನೀಡಿದ್ದಾರೆ. ಕಳೆದ ಬಾರಿ ಚುನಾವಣೆಯಲ್ಲಿ 7 ದಿನದಲ್ಲಿ ಕೊತ್ತೂರು ಮಂಜುನಾಥ್ ಅವರು ಹೆಚ್ ನಾಗೇಶರನ್ನ ಗೆಲ್ಲಿಸುವ ಮೂಲಕ ತನ್ನ ಪ್ರಾಬಲ್ಯವನ್ನು ಇಡೀ ರಾಜ್ಯಕ್ಕೆ ಸಾರಿದ್ದರು.
ಈ ಬಾರಿ ಕೊತ್ತೂರು ಮಂಜುನಾಥ್ ಜಾತಿ ಪ್ರಮಾಣ ಪತ್ರ ಕುರಿತ ವಿವಾದ ನ್ಯಾಯಾಲಯದಲ್ಲಿರುವ ಕಾರಣ ಕಾಂಗ್ರೆಸ್ ನಿಂದ ಈವರೆಗೂ ಮುಳಬಾಗಿಲಿನಲ್ಲಿ ಅಧಿಕೃತವಾಗಿ ಅಭ್ಯರ್ಥಿಯ ಘೋಷಣೆ ಇಲ್ಲದೆ ಗೊಂದಲಕ್ಕೀಡಾಗಿದ್ದಾರೆ. ಈ ನಡುವೆ ಕಾಂಗ್ರೆಸ್ ಪಕ್ಷದಲ್ಲಿ ತನ್ನದೇ ಆದ ಚಾಪು ಮೂಡಿಸಿದ್ದ ಆನಂದ್ ರೆಡ್ಡಿ ಜೆಡಿಎಸ್ ಗೆ ಸೇರ್ಪಡೆಗೊಳ್ಳುವ ಮೂಲಕ ಕೊತ್ತೂರು ಮಂಜುನಾಥ್ ಗೆ ಚುನಾವಣೆಗೂ ಮೊದಲೇ ಬಾರಿ ಹಿನ್ನಡೆಯಾಗಿದೆ. ಇನ್ನು ಕಾರ್ಯಕರ್ತರ ಸಮಾವೇಶದಲ್ಲಿ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ಕುರುಬ ಸಮುದಾಯದಿಂದ ಎರಡು ಕುರಿ, ಗೀತಮ್ಮ ಆನಂದರೆಡ್ಡಿರಿಂದ ಬೆಳ್ಳಿ ಗದೆ ನೀಡುವ ಮೂಲಕ ಸನ್ಮಾನಿಸಿದರು.
ಸಮಾವೇಶದಲ್ಲಿ ಭಾಷಣ ಮಾಡಿದ ಹೆಚ್ ಡಿಕೆ, ಈ ನಾಡಿನ ಜತೆಯ ಆಶೀರ್ವಾದದೊಂದಿಗೆ 123 ಸ್ಥಾನಗಳ ನೀಡುವ ಮೂಲಕ ಸ್ಪಷ್ಟ ಬಹುಮತ ನೀಡುವಂತೆ ಜನತೆಯಲ್ಲಿ ಮನವಿ ಮಾಡಿದರು. ಪಂಚರತ್ನದ 5 ಯೋಜನೆಗಳು ಪ್ರತೀ ಕುಟುಂಬದ ಬದುಕಿನ ಭವಿಷ್ಯಕ್ಕಾಗಿ ಯಶಸ್ವಿಯಾಗಿ ಕೊಡಲು ಯೋಚಿಸಿದ್ದೇನೆ, ಇದಕ್ಕಾಗಿ ನನ್ನ ನಿರಂತರ ಹೋರಾಟವನ್ನು ಮುಳಬಾಗಿಲಿನಿಂದ ಪ್ರಾರಂಭಿಸಿದ್ದೇನೆ.
ಸಮೃದ್ಧಿ ಮಂಜು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ನಡೆಸುತ್ತಿದ್ದಾರೆ. ಈ ಬಾರಿ ಮುಳಬಾಗಿಲಿನಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರಬೇಕು. ಈ ಭಾಗದಲ್ಲಿ ಆನಂದ್ ರೆಡ್ಡಿಯವರ ಅಭಿಮಾನಿಗಳ ಸಂಖ್ಯೆ ದೊಡ್ಡಾಗಿದೆ, ಇಡೀ ರಾಜ್ಯದಲ್ಲಿ ಇಂದು ಜನತಾದಳವನ್ನ ಬೆಂಬಲಿಸುತ್ತಿದ್ದಾರೆ ಎಂದರು. ಈ ವೇಳೆ ಶ್ರೀನಿವಾಸ್ ರೋಷನ್, ಮಂಡಿ ಮಾಲೀಕರಾದ ಕೆ.ಆರ್.ಎಸ್ ಸತ್ಯಣ್ಣ ಸೇರಿದಂತೆ ಅನೇಕರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು.