ಬೆಂಗಳೂರು:- ಕಳೆದ ಕೆಲವು ದಿನಗಳಿಂದ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದ್ದು, ನೀರಿನ ಬವಣೆ ನೀಗಿಸಲು ಜನತೆ ವಿವಿಧ ಮಾರ್ಗ ಹುಡುಕುತ್ತಿದ್ದಾರೆ.
ಹೀಗಾಗಿ ಅಂತರ್ಜಲ ಮಟ್ಟ ಕುಸಿದಿರುವ ಹಿನ್ನೆಲೆ ಬೇಕಾಬಿಟ್ಟಿ ಬೋರ್ವೆಲ್ ಕೊರೆಯುವವರಿಗೆ ಜಲಮಂಡಳಿ ಶಾಕ್ ನೀಡಿದ್ದು, ಬೋರ್ವೆಲ್ ಕೊರೆಯುವುದಕ್ಕೆ ಅನುಮತಿ ಕಡ್ಡಾಯ ಮಾಡಿದೆ.
ಒಂದು ವೇಳೆ ಅನುಮತಿ ಇಲ್ಲದೇ ಬೋರ್ ವೆಲ್ ಕೊರೆದರೆ ಕ್ರಮ ಕೈಗೊಳ್ಳುವುದಾಗಿ ಹೇಳಿದೆ. ಜೊತೆಗೆ ಅನುಮತಿ ಪಡೆದ ಸ್ಥಳದಲ್ಲಿ ಮಾತ್ರ ಬೋರ್ವೆಲ್ ಹಾಕಬೇಕು. ಅದಕ್ಕೋಸ್ಕರ ಜಲಮಂಡಳಿಯ ವೆಬ್ಸೈಟ್ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕೋರಿದೆ. ಅರ್ಜಿ ಸಲ್ಲಿಕೆ ಬಳಿಕ ಅನುಮತಿ ಸಿಕ್ಕರಷ್ಟೇ ಬೋರ್ ವೆಲ್ ಕೊರೆಸಬೇಕು. ಈ ನಿಯಮ ಮಾರ್ಚ್ 15 ರಿಂದ ಜಾರಿಯಾಗಲಿದೆ ಎಂದು ಆದೇಶಿಸಲಾಗಿದೆ.
ಇನ್ನು ರಾಜ್ಯ ರಾಜಧಾನಿ ಬೆಂಗಳೂರಿನ ಬಹುತೇಕ ಭಾಗಗಳಲ್ಲಿ ನೀರಿನ ಸಮಸ್ಯೆಗೆ ಕುರಿತು ಮಾತನಾಡಿದ್ದ ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಅಧ್ಯಕ್ಷ ರಾಮ್ ಪ್ರಸಾದ್ ಮನೋಹರ್, ‘ರಾಜ್ಯ ಸರ್ಕಾರ ಸಭೆಗಳನ್ನು ನಡೆಸುತ್ತಿದ್ದು, ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದೆ. ಬೆಂಗಳೂರಿನ ಜನತೆಗೆ ನೀರಿನ ಸಮಸ್ಯೆ ಬಗ್ಗೆ ಯಾವುದೇ ಆತಂಕ ಬೇಡ ಎಂದು ಹೇಳಿದ್ದರು.