ರಾಮನಗರ: ಕರ್ನಾಟಕ ಉಪ ಕದನದ ಕುರುಕ್ಷೇತ್ರ ರಂಗೇರುತ್ತಿದೆ. ನಾಡಿನ ನಾಡಿಮಿಡಿತ ಏನು ಅನ್ನೋ ಚಿತ್ರಣ ಕಟ್ಟಿಕೊಡುವ ಈ 3 ವಿಧಾನಸಭಾ ಉಪ ಚುನಾವಣೆ ಪ್ರತಿಷ್ಠೆ, ಅಸ್ತಿತ್ವದ ಹೋರಾಟಕ್ಕೆ ಸಾಕ್ಷಿ ಆಗಲಿದೆ. 136 ಕ್ಷೇತ್ರಗಳನ್ನ ಗೆದ್ದು ಬೀಗುತ್ತಿರುವ ಕಾಂಗ್ರೆಸ್.
ಉಪಕದನದಲ್ಲಿ ಮೂರೂ ಕ್ಷೇತ್ರಗಳನ್ನ ಗೆದ್ದು ಶಕ್ತಿಯನ್ನ ಮತ್ತಷ್ಟು ಹೆಚ್ಚಿಸಿಕೊಳ್ಳುವ ಹಠಕ್ಕೆ ಬಿದ್ದಿದೆ.
ಇದರ ಬೆನ್ನಲ್ಲೇ ಉಪಚುನಾವಣೆಗೂ ಮುನ್ನ ಜೆಡಿಎಸ್ ಗೆ ಬಿಗ್ ಶಾಕ್ ಎದುರಾಗಿದ್ದು, ಹೆಚ್ ಡಿ ಕುಮಾರಸ್ವಾಮಿ ಆಡಿಯೋ ಲೀಕ್ ಆಗಿದೆ. ಮಾಜಿ ಸಂಸದ ಡಿಕೆ ಸುರೇಶ್ ಅವರು ಕುಮಾರಸ್ವಾಮಿಯವರ ಆಡಿಯೋ ಸಿಡಿಯೊಂದನ್ನು ಬಿಡುಗಡೆ ಮಾಡಿದ್ದಾರೆ. ಜನರ ಬಳಿ ಹೆಚ್ಚು ಹೋಗಬಾರದು, ಮತದಾನಕ್ಕೆ ಇನ್ನೆಂಟು ದಿನ ಇರುವಾಗ ಹೋಗಿ ಪ್ರಚಾರ ಮಾಡಬೇಕು ಎಂದು ಕುಮಾರಸ್ವಾಮಿ ಈ ಹಿಂದೆ ಹೇಳಿದ್ದ ಆಡಿಯೋ ಸಿಡಿಯೊಂದನ್ನು ಬಹಿರಂಗಪಡಿಸಿ ಟೀಕಿಸಿದ್ದಾರೆ.
ಚನ್ನಪಟ್ಟಣ ಚುನಾವಣಾ ಪ್ರಚಾರ ವೇಳೆ ಆಡಿಯೋ ಬಿಡುಗಡೆ ಮಾಡಿದ ಡಿ. ಕೆ ಸುರೇಶ್, ಅಭಿವೃದ್ಧಿ ಗೆ ಜನ ಮತ ಹಾಕಲ್ಲ, ಎಂಟು ದಿನದ ಹಿಂದೆ ಜನರ ಬಳಿ ಹೋಗಬೇಕು. ಚುನಾವಣಾ ತಂತ್ರ ಮಾಡಬೇಕು. ಜನರ ಬಳಿ ಹೆಚ್ಚು ಹೋಗಬಾಗರದು, 8 ದಿನದಲ್ಲಿ ಪ್ರಚಾರ ಮಾಡಬೇಕು ಎಂದು ಆಗಿನ ಸಿಎಂ ಆಗಿದ್ದ ಕುಮಾರಸ್ವಾಮಿ ಹೇಳಿದ್ರು ಎಂದು ವ್ಯಂಗ್ಯವಾಡಿದ್ದಾರೆ
ಇನ್ನು ಆಡಿಯೋ ರಿಲೀಸ್ ಮಾಡಿರುವುದಕ್ಕೆ ಟಿವಿ9ಗೆ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ, ಸಿಡಿ ಆಡಿಯೋ ವಿಡಿಯೋ ಬಿಡುವಂತ ಎಕ್ಷಫರ್ಟ್ಗಳು. ಅವರನ್ನು ಹಿಡಿಯಲು ಆಗುತ್ತಾ ? ಆಡಿಯೋ ನಾನು ವಿಧಾನಸಭೆಯಲ್ಲಿ ಮಾತನಾಡಿದ್ದು ಎಂದು ಸ್ಪಷ್ಟಪಡಿಸಿದರು. ಆಡಿಯೋ ನಾನು ವಿಧಾನಸಭೆಯಲ್ಲಿ ಮಾತನಾಡಿದ್ದು,
ಒಂದು ವಾರದಿಂದ ಅದನ್ನು ಕಟಿಂಗ್ ಮಾಡಿ ಹಂಚುತ್ತಿದ್ದಾರೆ. ಅದು ನನ್ನ ಹೇಳಿಕೆಯಲ್ಲ. ವಾಸ್ತವ ಪರಿಸ್ಥಿತಿ ಬಗ್ಗೆ ಮಾತನಾಡಿದ್ದೆ. ಪಕ್ಕದ ಮದ್ದೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿಚಾರವಾಗಿ ಹೇಳಿದ್ದೆ. ಇಸ್ಪೀಟ್ ಕ್ರಿಕೆಟ್ ಬೆಟ್ಟಿಂಗ್ ದಂಧೆ ನಡೆಸುವವರು 5 ವರ್ಷ ಅವರು ಕೆಲಸ ಮಾಡಲಿ. ನಾನು ಎರಡು ದಿನದಲ್ಲಿ ಬದಲಾವಣೆ ಮಾಡುತ್ತೇನೆ ಅಂದ ವಿಚಾರದ ಬಗ್ಗೆ ಹೇಳಿದ್ದೆ. ಅದನ್ನು ಮದ್ದೂರು ವಿಷಯಕ್ಕೆ ಹೇಳಿದ್ದು ಎಂದು ಸ್ಪಷ್ಟಪಡಿಸಿದರು