‘ಬೃಂದಾವನ’ ಸೀರಿಯಲ್ ನಟ ವರುಣ್ ಆರಾಧ್ಯ ವಿರುದ್ಧ ಮಾಜಿ ಪ್ರೇಯಸಿ ಎಫ್ಐಆರ್ ದಾಖಲಿಸಿದ ವಿಚಾರಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಇದೆಲ್ಲಾ ಸುಳ್ಳು ಸುದ್ದಿ ಎಂದು ಯುವತಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇನ್ನೂ 3 ದಿನಗಳಲ್ಲಿ ಈ ಬಗ್ಗೆ ಸ್ಪಷ್ಟನೆ ಕೊಡುತ್ತೇನೆ ಎಂದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ನೀವು ನೋಡುತ್ತಿರುವುದು ಸುಳ್ಳು ಸುದ್ದಿ. ನಾನು ದೂರು ನೀಡಿರುವುದು ನಮ್ಮ ರೀಲ್ಸ್ ಮತ್ತು ಫೋಟೋಗಳನ್ನು ಗೂಗಲ್ನಿಂದ ಡಿಲೀಟ್ ಮಾಡುವುದಕ್ಕೆ. ದಯವಿಟ್ಟು ಫೇಕ್ ನ್ಯೂಸ್ ಹರಡಿಬೇಡಿ ಎಂದು ಯುವತಿ ಬರೆದುಕೊಂಡಿದ್ದಾರೆ. ಯಾರೆಲ್ಲಾ ಹರಿದಾಡುತ್ತಿರುವ ನ್ಯೂಸ್ ನೋಡಿಕೊಂಡು ಕಾಮೆಂಟ್ ಮಾಡುತ್ತಿದ್ದೀರಿ ದಯವಿಟ್ಟು ಮೂರು ದಿನಗಳ ಕಾಯಬೇಕಿದೆ. ಈ ಬಗ್ಗೆ ಕ್ಲ್ಯಾರಿಟಿ ಕೊಡಲು ನಿಮ್ಮ ಮುಂದೆ ಬರುತ್ತೀನಿ ಎಂದು ಯುವತಿ ಹೇಳಿದ್ದಾರೆ. ವರುಣ್ ಆರಾಧ್ಯ ವಿರುದ್ಧ ನೆಟ್ಟಿಗರು ತಿರುಗಿಬಿದ್ದ ಕಾರಣ ಯುವತಿ ಉಲ್ಟಾ ಹೊಡೆದ್ರಾ? ಅಸಲಿಗೆ ಎನಾಗಿದೆ ಎಂಬುದನ್ನು ಕಾಯಬೇಕಿದೆ.
ಅಂದಹಾಗೆ, ನಟ ವರುಣ್ ಆರಾಧ್ಯ ವಿರುದ್ಧ ಸೆ.7ರಂದು ಬೆಂಗಳೂರು ಪಶ್ಚಿಮ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ದೂರಿನ ಅನ್ವಯ, ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಸ್ವತಃ ಮಾಜಿ ಪ್ರೇಯಸಿಯೇ ವರುಣ್ ಆರಾಧ್ಯ ವಿರುದ್ಧ ದೂರು ದಾಖಲಿಸಿದ್ದರು. ದಾಖಲಾಗಿರುವ ದೂರಿನಲ್ಲಿ ಖಾಸಗಿ ವಿಡಿಯೋ ಲೀಕ್ ಮಾಡೋದಾಗಿ ಬೆದರಿಕೆ ಹಾಕಿರೋ ಆರೋಪವನ್ನು ಉಲ್ಲೇಖಿಸಿದ್ದರು.
2019ರಿಂದ ವರುಣ್ ಮತ್ತು ಯುವತಿ ಪ್ರೀತಿಸುತ್ತಿದ್ದರು. ಬೇರೇ ಯುವತಿ ಜೊತೆಗಿನ ಅಫೇರ್ ತಿಳಿದು 2023ರಲ್ಲಿ ವರುಣ್ ಜೊತೆ ಮಾಜಿ ಪ್ರೇಯಸಿ ಬ್ರೇಕಪ್ ಮಾಡಿಕೊಂಡರು. ಪದೇ ಪದೇ ಫೋನ್ ಮಾಡಿ ನಿನ್ನ ಖಾಸಗಿ ಫೋಟೋ ಮತ್ತು ವಿಡಿಯೋ ವೈರಲ್ ಮಾಡುತ್ತೀನಿ, ನೀನು ಮತ್ತೊಬ್ಬರನ್ನು ಇಷ್ಟಪಟ್ಟರೆ ಕೊಲೆ ಮಾಡುತ್ತೀನಿ ನೀನು ಯಾರನ್ನು ಮದುವೆ ಆಗಬಾರದು ಎಂದು ಬೆದರಿಕೆ ಹಾಕಿದ್ದಾರೆ ಎಂದು ಯುವತಿ ದೂರು ದಾಖಲಿಸಿದ್ದರು