ಧಾರವಾಹಿ ಮೂಲಕ ಬಣ್ಣದ ಬದುಕಿಗೆ ಕಾಲಿಟ್ಟು ಬಳಿಕ ನಿರೂಪಕಿಯಾಗಿ ಸೈ ಎನಿಸಿಕೊಂಡಿರುವ ನಟಿ ಅನುಪಮಾ ಗೌಡ ಇದೀಗ ಮದುವೆ ಬಗ್ಗೆ ಸೂಚನೆ ನೀಡಿದ್ದಾರೆ. ಸೀರಿಯಲ್, ಸಿನಿಮಾಗಳ ಮೂಲಕ ಪಡ್ಡೆಹುಡುಗರ ನಿದ್ದೆ ಕದ್ದಿರುವ ಮಾತಿನ ಮಲ್ಲಿ ಅನುಪಮಾ ಎಂಗೇಜ್ ಆಗಿದ್ದಾರಾ ಎಂಬ ಅನುಮಾನ ಅಭಿಮಾನಿಗಳನ್ನು ಕಾಡಲು ಶುರುವಾಗಿದೆ.
ಬಿಗ್ ಬಾಸ್ ಮನೆಯಲ್ಲಿದ್ದಷ್ಟು ದಿನವೂ ಸದ್ದು ಮಾಡುತ್ತಿದ್ದ ನಟಿ ಅಲ್ಲಿಂದ ಹೊರ ಬಂದ ಬಳಿಕ ಸಿನಿಮಾಗಳಿಗಿಂತ ವೈಯಕ್ತಿಕ ವಿಚಾರವಾಗಿ ಹೆಚ್ಚು ಹೆಚ್ಚು ಸುದ್ದಿಯಲ್ಲಿದ್ದಾರೆ. ಇತ್ತೀಚಿಗೆ ಗೆಳೆಯ ರಾಘವ್ ಹುಟ್ಟುಹಬ್ಬಕ್ಕೆ ನಟಿ ಅನುಪಮಾ ತಾವೇ ಕೈಯಾರೆ ಕೇಕ್ ತಯಾರಿಸಿರೋದು ಹಲವು ಅನುಮಾನಕ್ಕೆ ಕಾರಣವಾಗಿದ್ದು, ಇದು ಮದುವೆ ಸೂಚನೆನಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ನಟಿ ಅನುಪಮಾ, ಆಪ್ತ ಸ್ನೇಹಿತ ರಾಘವ್ ಎಂಬುವವ ಹುಟ್ಟುಹಬ್ಬಕ್ಕೆ ಸ್ಪೆಷಲ್ ಚಾಕ್ಲೇಟ್ ಕೇಕ್ ತಯಾರಿಸಿದ್ದಾರೆ. ಮೊದಲ ಸಲ ಮಾಡಿರುವ ಕೇಕ್ ಸೀದು ಕಪ್ಪ ಆಗಿಬಿಟ್ಟಿತ್ತು. ಎರಡನೇ ಪ್ರಯತ್ನಕ್ಕೆ ಅದ್ಭುತವಾಗಿ ತಯಾರಾಗಿದೆ. ಚಾಕೋಲೆಟ್ ಟಾರ್ಟ್ ಮಾಡುವ ರೀತಿ ಅದನ್ನು ಅಲಂಕಾರ ಮಾಡುವುದು ಎಷ್ಟು ಸುಲಭ ಎಂದು ಅನು ತಮ್ಮ ಯೂಟ್ಯೂಬ್ ವೀಡಿಯೋದಲ್ಲಿ ತೋರಿಸಿದ್ದಾರೆ. ಅಲ್ಲದೆ ಗೆಳೆಯನ ಬರ್ತಡೇಗೆ ಇಡೀ ಮನೆಯನ್ನು ಬಲೂನ್ನಿಂದ ಅಲಂಕಾರ ಮಾಡಿ, ಬಳಿಕ ಗೆಳೆಯನಿಗೆ ಸರ್ಪ್ರೈಸ್ ನೀಡಿದ್ದಾರೆ. ಅನುಪಮಾ ಗೌಡ ತಯಾರಿಸಿರುವ ಎರಡು ಕೇಕ್ ಅದ್ಭುತವಾಗಿತ್ತು ಎಂದು ಸ್ವತಃ ರಾಘವ್ ಪ್ರತಿಕ್ರಿಯಿಸಿದ್ದಾರೆ.
ಅನು-ರಾಘವ್ ಮಾತು ಕತೆ, ಬಾಂಡಿಂಗ್ ನೋಡಿ, ನೀವು ಮದುವೆ ಮಾಡಿಕೊಳ್ಳುವ ಹುಡುಗನಾ? ನಿಮ್ಮ ಬಾಯ್ಫ್ರೆಂಡಾ? ಯಾವಾಗ ಮದುವೆ? ಹೇಗೆ ಫ್ರೆಂಡ್ಸ್ ಆದಿರಿ ಎಂದು ನೆಟ್ಟಿಗರು ಸಾಕಷ್ಟು ಕಾಮೆಂಟ್ ಮಾಡಿದ್ದಾರೆ. ನೆಟ್ಟಿಗರ ಯಾವ ಪ್ರಶ್ನೆಗೂ ಅನುಪಮಾ ಉತ್ತರಿಸಿಲ್ಲ ಹೀಗಾಗಿ ಕ್ಯೂರಿಯಾಸಿಟಿ ಹೆಚ್ಚಾಗುತ್ತಿದೆ. ರಾಘವ್ ವೃತ್ತಿಯಲ್ಲಿ ಫೋಟೋಗ್ರಾಫರ್ ಮಾಡಲಿಂಗ್ ಫೋಟೋಶೂಟ್ ಹೆಚ್ಚಿಗೆ ಮಾಡುತ್ತಾರೆ. ಅನುಪಮಾ ಬಿಗ್ ಬಾಸ್ನಲ್ಲಿದ್ದಾಗ ಸೆಂಡ್ ಆಫ್ ಮಾಡಲು ಫ್ಯಾಮಿಲಿ ಜೊತೆ ರಾಘವ್ ಕೂಡ ಆಗಮಿಸಿದ್ದರು. ಆಗ ನನ್ನ ನಾಯಿ ಮರಿ ಮತ್ತು ಜೀಪ್ನ ಚೆನ್ನಾಗಿ ನೋಡಿಕೊಳ್ಳುವಂತೆ ಹೇಳಿದ ವೀಡಿಯೋ ವೈರಲ್ ಆಗಿತ್ತು.