ತಮಿಳು ನಟಿ ಹಾಗೂ ಬಿಗ್ ಬಾಸ್ ಮಾಜಿ ಸ್ಪರ್ಧಿ ವನಿತಾ ವಿಜಯ್ ಕುಮಾರ್ ಲಾಕ್ ಡೌನ್ ಸಂದರ್ಭದಲ್ಲಿ ಸಿಂಪಲ್ ಆಗಿ ಮೂರನೇ ಮದುವೆಯಾಗಿದ್ದರು. ಆದಾಗಲೇ ಇಬ್ಬರನ್ನು ಮದುವೆಯಾಗಿ ಡಿವೋರ್ಡ್ ಪಡೆದುಕೊಂಡಿದ್ದ ವನಿತಾ ಪೀಟರ್ ಪೌಲ್ ಎಂಬುವವರನ್ನು ಮೂರನೇ ಮದುವೆಯಾಗಿದ್ದರು.
ವನಿತಾ ಅವರನ್ನು ಮೂರನೇ ಮದುವೆಯಾಗಿದ್ದ ಪೀಟರ್ ಪೌಲ್ ಅದಾಗಲೇ ಮದುವೆಯಾಗಿದ್ದರು. ಆದ್ದರಿಂದ ಆತನ ಪತ್ನಿ ಬೀದಿ ರಂಪ, ಹಾದಿ ರಂಪ ಮಾಡಿದ್ದರು. ಪೀಟರ್ ಅವರನ್ನು ಮದುವೆಯಾದ ಆರೇಳು ತಿಂಗಳಿಗೆ ವನಿತಾ ಆತನನ್ನು ತೊರೆದು ಮತ್ತೊಂದು ಮದುವೆ ಆಗುವ ಸೂಚನೆಯನ್ನೂ ನೀಡಿದ್ದರು.
ಅನಾರೋಗ್ಯದಿಂದ ಬಳಲುತ್ತಿದ್ದ ಪೀಟರ್ ಪೌಲ್ ಇದೀಗ ನಿಧನರಾಗಿದ್ದು ಪತಿಯ ನಿಧನದ ಸುದ್ದಿಯನ್ನು ಸ್ವತಃ ವನಿತಾ ತಿಳಿಸಿದ್ದಾರೆ. ಈ ಕುರಿತು ವನಿತಾ ಸೋಷಿಯಲ್ ಮೀಡಿಯಾದಲ್ಲಿ ಭಾವುಕರಾಗಿ ಪತ್ರವೊಂದನ್ನು ಬರೆದಿದ್ದಾರೆ.
ಪೀಟರ್ ಆಸ್ಪತ್ರೆಯಲ್ಲಿದ್ದಾಗ ಸ್ವತಃ ವನಿತಾ ಅವರೇ ಖರ್ಚು ವೆಚ್ಚ ನೋಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ವನಿತಾರಿಂದ ದೂರವಾದ ನಂತರ ಪೀಟರ್ ಮತ್ತಷ್ಟು ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗುತ್ತಿದೆ.
ವಿಪರೀತ ಕುಡಿತದ ಚಟಕ್ಕೆ ಬಿದ್ದಿದ್ದ ಪೌಲ್, ಅನಾರೋಗ್ಯದ ಕಾರಣದಿಂದಾಗಿ ಕಳೆದ ಒಂದು ವರ್ಷದಿಂದ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಹೇಳಲಾಗುತ್ತಿದೆ. ಚಿಕಿತ್ಸೆ ಫಲಕಾರಿಯಾಗದೇ ಪೀಟರ್ ನಿಧನಹೊಂದಿದ್ದಾರೆ. ಈ ಕುರಿತು ಪತ್ರ ಬರೆದಿರುವ ವನಿತಾ, ‘ನಿಮಗೆ ಶಾಂತಿ ಸಿಗಲಿ. ನೀವು ಬಯಸಿದ ನೆಮ್ಮದಿಯ ಜಾಗಕ್ಕೆ ಹೋಗಿರುತ್ತೀರಿ ಎನ್ನುವ ವಿಶ್ವಾಸ ನನಗಿದೆ’ ಎಂದು ಬರೆದುಕೊಂಡಿದ್ದಾರೆ.