ಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ ಮೂಲಕ ಖ್ಯಾತಿ ಘಳಿಸಿದ ಬಿಗ್ಬಾಸ್ ಮಾಜಿ ಸ್ಫರ್ಧಿ ಸಮೀರ್ ಆಚಾರ್ಯ ದಾಂಪತ್ಯದಲ್ಲಿ ಕಲಹ ಉಂಟಾಗಿದೆ. ದಂಪತಿ ಪರಸ್ಪರ ಹೊಡೆದಾಡಿಕೊಂಡು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಸಮೀರ್ ಆಚಾರ್ಯ ಅವರ ಪತ್ನಿ ಶ್ರಾವಣಿ ಆಚಾರ್ಯ ಅವರ ಪತಿ ಹಾಗೂ ಮಾವ ರಾಘವೇಂದ್ರ ಹಾಗೂ ಅತ್ತೆ ವಿರುದ್ಧ ದೂರು ನೀಡಲು ಮುಂದಾಗಿದ್ದಾರೆ ಅಂತ ಹೇಳಲಾಗ್ತಿದೆ.
ಶ್ರಾವಣಿ ಆಚಾರ್ಯ ದೂರು ನೀಡಲು ಮುಂದಾಗುತ್ತಿದ್ದಂತೆ ಸಮೀರ್ ಆಚಾರ್ಯ ತಂದೆ-ತಾಯಿ ಕೂಡ ಪ್ರತಿದೂರು ನೀಡಲು ಮುಂದಾಗಿದ್ದಾರೆ. ಸಮೀರ್ ಆಚಾರ್ಯ ಅವರ ಕೌಂಟಬಿಕ ಕಲಹ ಹುಬ್ಬಳ್ಳಿ ಮಹಿಳಾ ಠಾಣೆ ಮೆಟ್ಟಿಲೇರಿದೆ.
ಶ್ರಾವಣಿ ತನ್ನ ಮಗಳನ್ನು ಬೆದರಿಸಿದ ಕಾರಣಕ್ಕಾಗಿ ಜಗಳ ಶುರುವಾಗಿದೆ. ಮೊಮ್ಮಳಿಗೆ ಯಾಕೆ ಬೈದೆ ಅಂತ ಸಮೀರ್ ತಂದೆ ಶ್ರಾವಣಿಗೆ ಬೈದಿದ್ದಾರಂತೆ. ಮಾತು ಅತಿರೇಖಕಕ್ಕೆ ಹೋಗಿ ಮನೆಯಲ್ಲಿ ಜಗಳ ನಡೆದಿದೆ.
ಸಮೀರ್ ಆಚಾರ್ಯ ಅವರು ತಂದೆ-ತಾಯಿ ಜೊತೆ ಸೇರಿ ಪತ್ನಿ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಇನ್ನೂ ಈ ಘಟನೆಯಾಗುವಾಗ ಸಮೀರ್ ಪತ್ನಿ ಶ್ರಾವಣಿ ಇನ್ಸ್ಟಾಗ್ರಾಂನಲ್ಲಿ ಲೈವ್ ಕೂಡ ಮಾಡಿದ್ದರಂತೆ. ಶ್ರಾವಣಿ ಫೋನ್ ಕೂಡ ಸಮೀರ್ ಒಡೆದು ಹಾಕಿದ್ದಾರೆ ಅಂತ ಹೇಳಲಾಗಿದೆ. ಅಷ್ಟೇ ಅಲ್ಲದೇ ಕೈ ಹಾಗೂ ಮುಖಕ್ಕೆ ಹಲ್ಲೆ ಮಾಡಿದ್ದಾರಂತೆ. ಇನ್ನೂ ಇದೇ ಗಲಾಟೆಯಲ್ಲಿ ಸಮೀರ್ ಆಚಾರ್ಯ ತಂದೆಯ ತಲೆಗೂ ಗಾಯವಾಗಿದೆಯಂತೆ.
ಇನ್ನೂ ಈ ಕೇಸ್ ಠಾಣೆ ಮೆಟ್ಟಿಲೇರುತ್ತಿದ್ದಂತೆ ಠಾಣೆಯ ಅಧಿಕಾರಿಗಳು ಇಬ್ಬರಿಗೂ ಕೌನ್ಸಲಿಂಗ್ ಮಾಡಿದ್ದಾರಂತೆ. ಇದಾದ ಬಳಿಕ ದಂಪತಿ ಒಂದಾಗಿ ಯಾವುದೇ ದೂರು ದಾಖಲಿಸದೇ ಮನೆಗೆ ವಾಪಸ್ ಆಗಿದ್ದಾರೆ. ಬಿಗ್ ಬಾಸ್ ಆರಂಭವಾದ ದಿನವೇ ಸಮೀರ್ ಹಾ ಶ್ರಾವಣಿ ನಡುವೆ ಮನಸ್ತಾಪ ಶುರವಾಗಿದೆ.