ಬಿಗ್ ಬಾಸ್ ಒಟಿಟಿ ಸೀಸನ್ 3 ನೋಡುಗರ ಆಕ್ರೋಶಕ್ಕೆ ಕಾರಣವಾಗಿದೆ. ಇದಕ್ಕೆ ಕಾರಣ ಆಗಿರೋದು ಅರ್ಮಾನ್ ಮಲಿಕ್ ನಡೆ. ಇಬ್ಬರು ಪತ್ನಿಯರೊಂದಿಗೆ ಬಿಗ್ ಬಾಸ್ಗೆ ಬಂದಿದ್ದ ಅರ್ಮಾನ್ ಮಲ್ಲಿಕ್ ಇದೀಗ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅರ್ಮಾನ್ ರ ಮೊದಲ ಪತ್ನಿ ಪಾಯಲ್ ಎಲಿಮಿನೇಟ್ ಆದರೆ ಎರಡನೇ ಪತ್ನಿ ಕೃತಿಕಾ ಇನ್ನೂ ಬಿಗ್ ಬಾಸ್ ಮನೆಯಲ್ಲೇ ಇದ್ದಾರೆ. ಈ ಮಧ್ಯೆ ಬಿಗ್ ಬಾಸ್ ಮನೆಯಲ್ಲಿ ಅರ್ಮಾನ್ ಹಾಗೂ ಕೃತಿಕಾ ಲೈಂಗಿಕ ಕ್ರಿಯೆ ನಡೆಸಿದ್ದಾರೆ ಎಂಬ ರೀತಿಯ ವಿಡಿಯೋ ವೈರಲ್ ಆಗಿತ್ತು. ಇದನ್ನು ನೋಡಿದ ಅನೇಕರು ಆಕ್ರೋಶ ಹೊರ ಹಾಕಿದ್ದು ತಕ್ಷಣವೇ ಅವರನ್ನು ಮನೆಯಿಂದ ಹೊರ ಹಾಕಿ ಎಂದಿದ್ದರು. ಆದರೆ ಪಾಯಲ್ ಅವರು ಈ ವಿಚಾರದಲ್ಲಿ ಪತಿಯನ್ನು ವಹಿಸಿಕೊಂಡು ಬಂದಿದ್ದಾರೆ.
‘ಯಾರ್ಯಾರು ಆ ವಿಡಿಯೋ ಶೇರ್ ಮಾಡಿ ಇದು ಅರ್ಮಾನ್ ಹಾಗೂ ಕೃತಿಕಾ ಅವರದ್ದು ಎನ್ನುತ್ತಿದ್ದೀರೋ ಅವರ ಬಳಿ ನಾನು ಕೈ ಮುಗಿದು ಕೇಳಿಕೊಳ್ಳುತ್ತೇನೆ, ಇದನ್ನು ಇಲ್ಲಿಯೇ ನಿಲ್ಲಿಸಿ. ಈ ವಿಡಿಯೋ ಎಡಿಟ್ ಮಾಡಲಾಗಿದೆ. ನಾನು ಬಿಗ್ ಬಾಸ್ ಮನೆಯಲ್ಲಿ ಇದ್ದು ಬಂದಿದ್ದೇನೆ. ಆ ರೀತಿಯ ಲ್ಯಾಂಪ್ ಅಲ್ಲಿ ಇಲ್ಲ. ಬ್ಲ್ಯಾಂಕೆಟ್ ಕೂಡ ಭಿನ್ನವಾಗಿದೆ. ಮನೆಯಲ್ಲಿರುವ ಯಾರಿಗಾದರೂ ಇದು ಫೇಕ್ ಎಂದು ಗೊತ್ತಾಗುತ್ತದೆ’ ಎಂದು ಪಾಯಲ್ ಹೇಳಿದ್ದಾರೆ.
ಇತ್ತೀಚೆಗೆ ವಿಡಿಯೋ ಒಂದು ವೈರಲ್ ಆಗಿತ್ತು. ಇದು ಬಿಗ್ ಬಾಸ್ ಮನೆಯ ಒಳಗಿನ ವಿಡಿಯೋ ಎಂದು ಹೇಳಲಾಗಿತ್ತು. ಈ ವಿಡಿಯೋದಲ್ಲಿ ಅರ್ಮಾನ್ ಹಾಗೂ ಕೃತಿಕಾ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡಿದ್ದರು. ಈ ವಿಡಿಯೋನ ಅನೇಕರು ಟೀಕಿಸಿದ್ದರು. ಬಿಗ್ ಬಾಸ್ನಲ್ಲಿ ಈ ರೀತಿಯ ವಿಚಾರಗಳು ನಡೆಯೋದು ಎಷ್ಟು ಸರಿ ಎಂದು ಅನೇಕರು ಪ್ರಶ್ನೆ ಮಾಡಿದ್ದರು. ಇತ್ತ ಬ್ಯಾಡ್ ಕಮೆಂಟ್ಗಳನ್ನು ಎದುರಿಸುತ್ತಿರುವ ಪಾಯಲ್ ಅವರು ಅರ್ಮಾನ್ ಅವರಿಗೆ ವಿಚ್ಛೇದನ ಕೊಡೋದಾಗಿ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ಅವರು ಈ ರೀತಿಯ ನಿರ್ಧಾರ ತೆಗೆದುಕೊಂಡಿದ್ದು ಏಕೆ ಎನ್ನುವ ಪ್ರಶ್ನೆ ಅನೇಕರನ್ನು ಕಾಡುತ್ತಿದೆ.
ಪಾಯಲ್ ಹೇಳೋ ಪ್ರಕಾರ ಈ ವಿಡಿಯೋನ ತಿರುಚಲಾಗಿದೆಯಂತೆ. ಈ ವಿಡಿಯೋನ ಎಡಿಟ್ ಮಾಡಲಾಗಿದೆ ಎಂದು ಅವರು ಹೇಳುತ್ತಿದ್ದಾರೆ. ಆದರೆ, ವಿಡಿಯೋ ಮಾತ್ರ ಸಖತ್ ವೈರಲ್ ಆಗಿ ಸದ್ದು ಮಾಡುತ್ತಿದೆ. ಇದರ ಅಸಲಿಯತ್ತು ಏನು ಎಂಬ ಬಗ್ಗೆ ಇನ್ನಷ್ಟೇ ಗೊತ್ತಾಗಬೇಕಿದೆ. ಈ ಬಗ್ಗೆ ವಾಹಿನಿಯವರು ಯಾವ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.