ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಖ್ಯಾತಿ ಘಳಿಸಿದ ಹೋರಾಟಗಾರ ಪ್ರಶಾಂತ್ ಸಂಬರ್ಗಿ ಇದೀಗ ರಾಜಕೀಯ ಅಖಾಡಕ್ಕೆ ಎಂಟ್ರಿಕೊಟ್ಟಿದ್ದಾರೆ. ಕಿರುತೆರೆಯಲ್ಲಿ ರಾಜಕಾರಣಿಯಾಗಿ ಮಿಂಚಲು ಪ್ರಶಾಂತ್ ಸಂಬರ್ಗಿ ರೆಡಿಯಾಗಿದ್ದಾರೆ.
ದೊಡ್ಮನೆಯಲ್ಲಿ ತಮ್ಮ ಖಡಕ್ ಮಾತುಗಳಿಂದ ಗಮನ ಸೆಳೆದ ಸ್ಪರ್ಧಿ ಪ್ರಶಾಂತ್ ಸಂಬರ್ಗಿ ಕಿರುತೆರೆಯತ್ತ ಮುಖ ಮಾಡಿದ್ದಾರೆ. `ಕೆಂಡಸಂಪಿಗೆ’ ಧಾರಾವಾಹಿಯಲ್ಲಿ ನಾಯಕ ತೀರ್ಥಂಕರ್ ಪ್ರಸಾದ್ ಮುಂದೆ ಸೆಡ್ಡು ಹೊಡೆಯಲು ಸಂಬರ್ಗಿ ಎಂಟ್ರಿ ಕೊಟ್ಟಿದ್ದಾರೆ.
ಮೊದಲ ಬಾರಿಗೆ ರಾಜಕಾರಣಿ ಪಾತ್ರದ ಮೂಲಕ ಸಂಬರ್ಗಿ ನಟಿಸಿದ್ದಾರೆ. ಭೈರತಿ ಕುಣಿಗಲ್ ಎಂಬ ಪಾತ್ರಕ್ಕೆ ಜೀವ ತುಂಬಿದ್ದಾರೆ. ಈ ಪಾತ್ರದ ಅವಕಾಶ ಮೊದಲು ಹೆಸರಾಂತ ನಟ ಅವಿನಾಶ್ಗೆ ಸಿಕ್ಕಿತ್ತು. ಡೇಟ್ ಕ್ಲಾಶ್ ಆದ ಕಾರಣ, ಪ್ರಶಾಂತ್ ಸಂಬರ್ಗಿ ಅವರಿಗೆ ಅವಕಾಶ ಒಲಿದು ಬಂದಿದ್ದು, ಅತಿಥಿ ಪಾತ್ರದ ಮೂಲಕ ಕಿರುತೆರೆ ಸಿನಿ ಪ್ರೇಕ್ಷಕರಿಗೆ ರಂಜಿಸಲು ಸಂಬರ್ಗಿ ರೆಡಿಯಾಗಿದ್ದಾರೆ.