ಬೆಂಗಳೂರು: ಕಹಿಯನ್ನು ಮರೆತು ಕೆಲಸ ಮಾಡೋಣಹಿಂದೆ ಆಗಿರುವ ತಪ್ಪುಗಳನ್ನು ಸರಿ ಮಾಡಿಕೊಂಡು ಮುಂದೆ ಹೋಗೋಣ. ನಿಷ್ಠಾವಂತ ಕಾರ್ಯಕರ್ತರು ನೀವಿದ್ದೀರಿ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಮುಖಂಡರ ಅಭಿಪ್ರಾಯ ಆಲಿಸಿದ ಮಾಜಿ ಮುಖ್ಯಮಂತ್ರಿಗಳುಎಲ್ಲರ ಅಭಿಪ್ರಾಯ ಕೇಳಿದ ನಂತರ ಮುಖಂಡರಿಗೆ ಕೆಲ ಸ್ಪಷ್ಟ ಸೂಚನೆಗಳನ್ನು ಕೊಟ್ಟ ಕುಮಾರಸ್ವಾಮಿ ಅವರುನಮ್ಮ ಕಾರ್ಯಕರ್ತರು, ಮುಖಂಡರು, ಪಕ್ಷದ ಹಿತರಕ್ಷಣೆ ಭರವಸೆ ಕೊಟ್ಟ ಮಾಜಿ ಸಿಎಂ ಕುಮಾರಸ್ವಾಮಿ ಅವರ ಹೇಳಿಕೆ
ರಾಮನಗರ ಕ್ಷೇತ್ರದ ಜನರು ಯಾವತ್ತೂ ಜಾತಿ ಮೇಲೆ ಚುನಾವಣೆ ಮಾಡಿದವರಲ್ಲನಾನೆಂದೂ ಗುತ್ತಿಗೆದಾರರಿಂದ ಹಣ ಕೇಳಿದವನಲ್ಲ, ಚುನಾವಣೆ ಅದ ಮೇಲೆ ನಾನು ಊರುಗಳಲ್ಲಿ ಜಗಳ ತಂದಿಡಲಿಲ್ಲ.ನಿಮ್ಮಲ್ಲಿ ಒಬ್ಬನಾಗಿ ಪಕ್ಷಕ್ಕೆ ದುಡಿಮೆ ಮಾಡಿದ್ದೇನೆಇವತ್ತು ಕಾಂಗ್ರೆಸ್ ನವರು ಯಾವ ರೀತಿ ನಡೆದುಕೊಳ್ಕುತ್ತಿದ್ದಾರೆ. ನಾನು ಯಾವ ರೀತಿ ನಡೆದುಕೊಂಡಿದ್ದೇನೆಸಿ.ಎನ್.ಮಂಜುನಾಥ್ ಅವರನ್ನೇ ನಿಲ್ಲಿಸಬೇಕು ಎಂದು ನನ್ನ ಮೇಲೆ ಬಿಜೆಪಿ ಹೈಕಮಾಂಡ್ ಒತ್ತಾಸೆ ಇದೆ
ಬಿಜೆಪಿ ಹೈಕಮಾಂಡ್ ಹಾಗೂ ರಾಜ್ಯ ಬಿಜೆಪಿ ನಾಯಕರು ಎಲ್ಲರೂ ಮಂಜುನಾಥ್ ಅವರನ್ನೇ ಒಮ್ಮತ ಅಭ್ಯರ್ಥಿ ಮಾಡಬೇಕು ಎಂದು ಬಯಸಿದ್ದಾರೆ.ಅವರು ನಿಲ್ಲಬೇಕೋ ಬೇಡವೋ ಎನ್ನುವ ತೀರ್ಮಾನವನ್ನು ಮುಖಂಡರಾದ ನಿಮಗೆ ಬಿಡುತ್ತೇನೆ*ಡಾ. ಸಿ.ಎನ್.ಮಂಜುನಾಥ್ ಅವರೇ ಎನ್ ಡಿಎ ಅಭ್ಯರ್ಥಿ ಆಗಬೇಕು ಎನ್ನುವುದು ಬಿಜೆಪಿ ಒತ್ತಾಸೆಆದರೆ ನಾನು ಹೇಳಿರುವುದು ಸಿ.ಪಿ.ಯೋಗೇಶ್ವರ್ ಅವರ ಹೆಸರನ್ನು. ಅವರನ್ನು ಅಭ್ಯರ್ಥಿ ಮಾಡಿ ಎಂದಿದ್ದೆಸಿ.ಪಿ.ಯೋಗೇಶ್ವರ್ ಅವರು ಕೂಡ ಮಂಜುನಾಥ್ ಅವರೇ ನಿಲ್ಲಬೇಕು ಎಂದು ಒತ್ತಡ ಹಾಕುತ್ತಿದ್ದಾರೆಮಿತ್ರ ಪಕ್ಷದ ವರಿಷ್ಠರು, ರಾಜ್ಯದ ಬಿಜೆಪಿ ನಾಯಕರ ಭಾವನೆಗಳನ್ನು ನಾವು ಗೌರವಿಸಬೇಕಿದೆ
ಭಾನುವಾರ ನಾನು ನಮ್ಮ ತಂದೆಯವರ ಜತೆ ಎರಡು ಗಂಟೆ ಕಾಲ ಚರ್ಚೆ ಮಾಡಿದೆಮಂಜುನಾಥ್ ಅವರ ಸ್ಪರ್ಧೆ ವಿಚಾರವನ್ನು ಮನವರಿಕೆ ಮಾಡಿಕೊಟ್ಟಿದ್ದೇನೆ
ನನ್ನ ತಂಗಿ ಮನೆಯಲ್ಲಿ ಕಣ್ಣೀರು ಹಾಕ್ತಾ ಇದಾಳೆ, ನಮ್ಮನ್ನು ಯಾಕೆ ರಾಜಕೀಯಕ್ಕೆ ಎಳೆಯುತ್ತಿರಿ, ನೆಮ್ಮದಿಯಿಂದ ಇದ್ದೇವೆ, ನಮಗೆ ರಾಜಕೀಯ ಬೇಡ ಅಂತ ಅಳ್ತಾ ಕೂತಿದ್ದಾಳೆ
ಇದು ನಮ್ಮ ಮನೆಯ ಪರಿಸ್ಥಿತಿ. ನನ್ನ ನೋವು ನನಗೇ ಗೊತ್ತು. ಆದರೆ, ಆ ಕಿರಾತಕರನ್ನು ಮಣಿಸಲೇಬೇಕು. ಇದು ನನ್ನ ಗುರಿಈ ಚುನಾವಣೆಯನ್ನು ಸವಾಲಾಗಿ ಸ್ವೀಕಾರ ಮಾಡಿ ಎಂದು ನಿಮಗೆ (ಕಾರ್ಯಕರ್ತರಿಗೆ) ಮನವಿ ಮಾಡುತ್ತೇನೆರಾಮನಗರ ಜನರು ನಿಖಿಲ್ ರನ್ನು ಸೋಲಿಸಿದ್ದಾರೆ ಎಂದು ನಾನು ದೋಷ ಕೊಡಲ್ಲನಮ್ಮದೇ ತಪ್ಪುಗಳಿಂದ ನಿಖಿಲ್ ಸೋತಿದ್ದಾರೆ, ಆ ತಪ್ಪುಗಳನ್ನು ಸರಿ ಮಾಡೋಣ
ದೇವೇಗೌಡರು ಕಣ್ಣೀರು ಹಾಕೋದು ಅವರ ಕುಟುಂಬಕ್ಕೆ ಎಂದು ಡಿ.ಕೆ.ಶಿವಕುಮಾರ್ ಹೇಳುತ್ತಾರೆಅವರಿಗೆ ಆತ್ಮಸಾಕ್ಷಿ ಅನ್ನೋದು ಇದೆಯಾ?ಅವರು ಏನೆಲ್ಲಾ ಮಾಡಿದ್ದಾರೆ, ಏನೆಲ್ಲಾ ಕೆಡುಕು ಮಾಡಿದ್ದಾರೆ ಎನ್ನುವುದು ಈ ರಾಜ್ಯಕ್ಕೆ ಗೊತ್ತಿದೆ.ನಾವು ಹಾಗೆ ಮಾಡಿದ್ದೇವೆಯಾ? ಖಂಡಿತಾ ಇಲ್ಲಇಡೀ ವಿಶ್ವವೇ ಮೋದಿ ಅವರನ್ನು ಗೌರವಿಸುತ್ತದೆ
ಅಂತಹ ಮೋದಿ ಅವರು ಅವರು ದೇವೇಗೌಡರು ಬಂದರೆ ಎಷ್ಟು ಗೌರವ ಕೊಡುತ್ತಾರೆ, ತಂದೆಯಂತೆ ಆದರಿಸುತ್ತಾರೆ. ಇದನ್ನು ಆ ವ್ಯಕ್ತಿ ಅರ್ಥ ಮಾಡ್ಕೊಳ್ಳಬೇಕುನಮ್ಮ ಪಕ್ಷದಿಂದಲೇ ಬೆಳೆದು ಹೋದ ಮಾಗಡಿ ನಾಯಕನ ಬಗ್ಗೆ ಪ್ರಸ್ತಾಪ ಮಾಡಿದ ಹೆಚ್ಡಿಕೆಗೌಡರ ಮನೆಯಲ್ಲಿ ಅಳಿಯನನ್ನೇ ಹರಕೆಯ ಕುರಿ ಮಾಡಲು ಹೊರಟಿದ್ದಾರೆ ಎಂದು ಹೇಳಿದ್ದಾರೆ
ಆ ವ್ಯಕ್ತಿಗೆ ಸತ್ಯ ಗೊತ್ತಿಲ್ಲ. ಮಂಜುನಾಥ್ ಅವರು ಆರೋಗ್ಯ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿದ್ದಾರೆಲಕ್ಷಾಂತರ ಬಡ ಜನರ ಹೃದಯ ಕಾಪಾಡಿದ್ದಾರೆದೇಶದಲ್ಲಿಯೇ ಅವರ ಸೇವೆಯನ್ನು ಕೊಂಡಾಡುತ್ತಾರೆಅಂತಹ ವ್ಯಕ್ತಿ ದೆಹಲಿಗೆ ಹೋದರೆ ಇಡೀ ದೇಶಕ್ಕೆ ಸೇವೆ ಮಾಡಬಹುದು.ಅವರನ್ನು ಹರಕೆಯ ಕುರಿ ಮಾಡುತ್ತಿಲ್ಲ ನಾವು
ಎಲ್ಲರೂ ಅವರ ನಿಸ್ವಾರ್ಥ ಸೇವೆಯನ್ನು ಗುರುತಿಸಿದ್ದಾರೆ.ಮಾಗಡಿ ಬಾಲಕೃಷ್ಣಗೆ ಟಾಂಗ್ ಕೊಟ್ಟ ಕುಮಾರಸ್ವಾಮಿ ಅವರುಚುನಾವಣೆ ಹೇಗೆ ನಡೆಸಬೇಕು, ಏನೆಲ್ಲಾ ಮಾಡಬೇಕು ಮುಖಂಡರಿಗೆ ಸಲಹೆ ಸೂಚನೆ ಕೊಟ್ಟ ಕುಮಾರಸ್ವಾಮಿದುಡಕಬೇಡಿ, ನಿಷ್ಠೆಯಿಂದ ಕೆಲಸ ಮಾಡಿಎಲ್ಲವನ್ನೂ ಮರೆತು ಹೊಸ ಅಧ್ಯಾಯ ಆರಂಭ ಮಾಡೋಣ
ಈ ಮೈತ್ರಿ ದೇವೇಗೌಡರು, ನರೇಂದ್ರ ಮೋದಿ ಅವರ ಮಟ್ಟದಲ್ಲಿ ಆಗಿದೆ2018ರ ಸರ್ಕಾರದ ಅವಧಿಯಲ್ಲಿ ಅದ ಕಹಿ ಅನುಭವ, ತುಮಕೂರಿನಲ್ಲಿ ದೇವೆಗೌಡರ ಸೋಲನ್ನು ನಾವು ಮರೆತಿಲ್ಲಕಳೆದ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಿಸಿದ್ದು ನಾವು ಮಾಡಿದ ಇನ್ನೊಂದು ದೊಡ್ಡ ತಪ್ಪುಅದನ್ನು ಸರಿ ಮಾಡಿಕೊಳ್ಳುವ ಕಾಲ ಸನ್ನಿಹಿತವಾಗಿದೆ, ಈ ಚುನಾವಣೆ ನಿರ್ಣಾಯಕ
ಇನ್ನು 45 ದಿನಗಳ ಕಾಲ ಪಕ್ಷದ ಪರವಾಗಿ ಪ್ರಚಾರ, ಕೆಲಸ ಮಾಡುತ್ತೇನೆನಮ್ಮ ಪಕ್ಷದ ಪರವಾಗಿ ಫಲಿತಾಂಶ ಬರಲು ಕಾಯಾ ವಾಚಾ ಮನಸಾ ಕೆಲಸ ಮಾಡುತ್ತೇನೆ.ನನಗೆ ಹಾಗೂ ಕುಮಾರಣ್ಣ ಅವರಿಗೆ ಮಂಡ್ಯದಿಂದ ಸ್ಪರ್ಧೆ ಮಾಡುವಂತೆ ಅತೀವ ಒತ್ತಡವಿದೆ.ಇದನ್ನು ಪ್ರಾಮಾಣಿಕವಾಗಿ ನಿಮ್ಮ (ಮುಖಂಡರು) ಮುಂದೆ ಇಡುತ್ತೇನೆದೇವೇಗೌಡರು 30 ವರ್ಷದಿಂದ ಪಕ್ಷವನ್ನು ಕಟ್ಟಿದ್ದಾರೆ.ನಮ್ಮ ತಂದೆಯವರು 15 ವರ್ಷಗಳಿಂದ ಪಕ್ಷವನ್ನು ಉಳಿಸಿಕೊಂಡು ಬಂದಿದ್ದಾರೆಹೀಗಾಗಿ ಎಲ್ಲಾ ಕ್ಷೇತ್ರಗಳಲ್ಲಿ ಪ್ರಚಾರ ಮಾಡುತ್ತೇನೆ, ನಾನು ಚುನಾವಣೆಗೆ ನಿಲ್ಲುವುದಿಲ್ಲರಾಮನಗರ ಬಿಟ್ಟು ನಾನು ಎಲ್ಲಿಯೂ ಹೋಗುವುದಿಲ್ಲರಾಮನಗರ ಹೊರತುಪಡಿಸಿ ನನ್ನ ರಾಜಕೀಯ ಜೀವನವನ್ನು ನಾನು ಊಹೆಯೂ ಮಾಡೋದಿಲ್ಲನಮ್ಮ ಮೈತ್ರಿಕೂಟದ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು, ಇದು ನಮ್ಮ ಸಂಕಲ್ಪ
ಜೆಡಿಎಸ್ ಬಿಜೆಪಿ ಮೈತ್ರಿ ಆಗಿದೆ. ವರಿಷ್ಠರು ಕೊಟ್ಟ ಸೂಚನೆ ಪಾಲಿಸಿ ನಾವು ಗೆಲುವು ಸಾಧಿಸಬೇಕು.ಮೈತ್ರಿ ಅಭ್ಯರ್ಥಿ ಪರವಾಗಿ ನಾವು ಕೆಲಸ ಮಾಡಬೇಕುವಿಧಾನಸಭೆ ಚುನಾವಣೆಯಲ್ಲಿ ಕೊಟ್ಟಂತೆ ಗಿಫ್ಟ್ ಕೂಪನ್ ಗಳನ್ನು ಈ ಬಾರಿಯೂ ಕಾಂಗ್ರೆಸ್ ಹಂಚುವ ಸಾಧ್ಯತೆ ಇದೆನಾವು ಎಚ್ಚರಿಕೆಯಿಂದ ಇರಬೇಕುದರ್ಪ ಮತ್ತು ದೌರ್ಜನ್ಯದ ವಿರುದ್ಧ ನಾವು ಚುನಾವಣೆ ನಡೆಸಬೇಕುಒಮ್ಮತ, ಒಗ್ಗಟ್ಟಿನಿಂದ ನಾವೆಲ್ಲರೂ ಕೆಲಸ ಮಾಡಬೇಕುಮೈತ್ರಿಕೂಟ ಅಭ್ಯರ್ಥಿ ಮಾಡುವ ವ್ಯಕ್ತಿಯ ಪರವಾಗಿ ನಾವೆಲ್ಲರೂ ಕೆಲಸ ಮಾಡೋಣಬಿಜೆಪಿ ಕಾರ್ಯಕರ್ತರು, ಮುಖಂಡರ ಜತೆ ಒಗ್ಗಟ್ಟಿನಿಂದ ಕೆಲಸ ಮಾಡೋಣಹಿಂದೆಜ್ಜೆ ಇಡೋದು ಬೇಡ, ಮುಂದೆಜ್ಜೆ ಇಡೋಣ