ಬೆಂಗಳೂರು: ನಂಬರ್ ಪ್ಲೇಟ್ ಮುಚ್ಚಿ ವಾಹನ ಚಲಾಯಿಸ್ತಿದ್ದ ಸವಾರನ ವಿರುದ್ಧ ನಗರದ ವರ್ತೂರ್ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು ತನ್ನ ಬೈಕ್ ನ ನಂಬರ್ ಪ್ಲೇಟ್ ಕಾಣದೆ ಇರೋಹಾಗೆ ಮುಚ್ಚಿ ಓಡಿಸ್ತಿದ್ದ ಸವಾರ ಮೊಹಮ್ಮದ್ ಅಶ್ರಫ್ʼನನ್ನ ಬಂಧಿಸಿದ್ದಾರೆ.
ಸ್ವಿಗ್ಗಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡ್ತಿರೋ ಸವಾರ ಫೈನ್ ನಿಂದ ತಪ್ಪಿಸಿಕೊಳ್ಳಲು ನಂಬರ್ ಪ್ಲೇಟ್ ಮುಚ್ಚಿಟ್ಟಿದ್ದ ಆದರೆ ಬೈಕ್ ಫೋಟೋ ತೆಗೆದು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಆ ನಂತರ ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೋಸ್ಟ್ ಮಾಡಲಾಗಿತ್ತು
ಪೋಸ್ಟ್ ಬೆನ್ನಲ್ಲೇ ಸವಾರನನ್ನ ಪತ್ತೆ ಮಾಡಿ ವಶಕ್ಕೆ ಪಡೆದು ಗಾಡಿ ಸಮೇತ ಮೊಹಮ್ಮದ್ ಅಶ್ರಫ್ ನನ್ನ ವಶಪಡಿಸಿಕೊಂಡಿದ್ದಾರೆ. ಆ ನಂತರ ವರ್ತೂರು ಠಾಣಾ ಪೊಲೀಸರಿಗೆ ಒಪ್ಪಿಸಿರೋ ವೈಟ್ ಫಿಲ್ಡ್ ಸಂಚಾರಿ ಪೊಲೀಸರು..ವರ್ತೂರು ಠಾಣೆಯಲ್ಲಿ ಆರೋಪಿ ವಿರುದ್ಧ ಎಫ್ಐಆರ್ ದಾಖಲು