ಬೆಂಗಳೂರು: ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ವಿರುದ್ಧ ಆಟೋ ಕ್ಯಾಬ್ ಚಾಲಕರು ಸಮರ ಸಾರಿದ್ದಾರೆ. ಈ ಹೊತ್ತಿನಲ್ಲಿ ಕೆಲ ಅಗ್ರಿಗೇಟರ್ ಕಂಪನಿಗಳು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದು, ರಾಜ್ಯದಲ್ಲಿ ಬ್ಯಾನ್ ಆಗಿರುವ ಬೈಕ್ ಟ್ಯಾಕ್ಸಿಗೆ ಈಗ ಕೇಂದ್ರ ಒಪ್ಪಿಗೆ ನೀಡಿದೆ.
ವೈಟ್ ಬೋರ್ಡ್ನಲ್ಲಿ ಬೈಕ್ ಟ್ಯಾಕ್ಸಿ ನಡೆಸಬಹುದು. ರಾಜ್ಯ ಸಾರಿಗೆ ಇಲಾಖೆ ಅನುಮತಿ ನೀಡಬಹುದು ಎಂದು ರಾಜ್ಯ ಸಾರಿಗೆ ಇಲಾಖೆಗೆ ಕೇಂದ್ರ ಸಾರಿಗೆ ಇಲಾಖೆ ಸಲಹೆ ನೀಡಿದೆ. ಇದು ಸದ್ಯ ಆಟೋ ಕ್ಯಾಬ್ ಚಾಲಕರ ಆಕ್ರೋಶಕ್ಕೆ ಕಾರಣವಾಗಿದೆ. ರಾಜ್ಯ ಸಾರಿಗೆ ಇಲಾಖೆ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು. ಒಂದು ವೇಳೆ ಅನುಮತಿ ನೀಡಿದ್ರೆ ಉಗ್ರವಾದ ಹೋರಾಟ ಮಾಡ್ತೀವಿ ಎಂದು ಚಾಲಕರು ಎಚ್ಚರಿಕೆ ಕೊಟ್ಟಿದ್ದಾರೆ.
ರಾಜ್ಯ ಸಾರಿಗೆ ಇಲಾಖೆಯ ರೂಲ್ಸ್ ಪ್ರಕಾರ, ವೈಟ್ ಬೋರ್ಡ್ ಟು ವೀಲರ್ ಇರೋದು ಸ್ವಂತಕ್ಕೆ ಬಳಕೆಗೆ ಮಾತ್ರ. ರಾಜ್ಯ ಸಾರಿಗೆ ಇಲಾಖೆ ಕರ್ನಾಟಕದಲ್ಲಿ ವೈಟ್ ಬೋರ್ಡ್ ಹಾಕಿ ಬೈಕ್ ಟ್ಯಾಕ್ಸಿ ನಡೆಸುವುದನ್ನು ಬ್ಯಾನ್ ಮಾಡಿದೆ. ಹಿಂದಿನ ಬಿಜೆಪಿ ಸರ್ಕಾರ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿಗಳಲ್ಲಿ ಬೈಕ್ ಟ್ಯಾಕ್ಸಿ ನಡೆಸಬಹುದು ಎಂದು ಅನುಮತಿ ನೀಡಿತ್ತು. ಆದರೆ ಇದರಿಂದ ಆಕ್ರೋಶಗೊಂಡಿದ್ದ ರಾಜ್ಯ ಆಟೋ ಕ್ಯಾಬ್ ಚಾಲಕರು, ಕಳೆದ ವಾರ ಸಿಎಂ ಜೊತೆ ನಡೆದ ಸಭೆಯಲ್ಲಿ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿಗಳನ್ನು ಬ್ಯಾನ್ ಮಾಡಬೇಕು ಎಂದು ಮನವಿ ಮಾಡಿದ್ರು. ಇದಕ್ಕೆ ಮಣಿದ ಸರ್ಕಾರ ಬೈಕ್ ಟ್ಯಾಕ್ಸಿ ಬ್ಯಾನ್ ಮಾಡಲು ಸಾರಿಗೆ ಇಲಾಖೆಯಿಂದ ವರದಿಯನ್ನು ತರಿಸಿಕೊಂಡಿದ್ದಾರಂತೆ. ಈ ಹೊತ್ತಲ್ಲಿ ಕೇಂದ್ರ ಸಾರಿಗೆ ಇಲಾಖೆ ರಾಜ್ಯ ಸಾರಿಗೆ ಇಲಾಖೆಗೆ ಪತ್ರ ಕಳಿಸಿ ಕರ್ನಾಟಕ ರಾಜ್ಯ ಸಾರಿಗೆ ಇಲಾಖೆ ಕಾಂಟ್ರಾಕ್ಟ್ ಕ್ಯಾರೆಜ್ ಅಡಿಯಲ್ಲಿ ಬೈಕ್ ಟ್ಯಾಕ್ಸಿಗೆ ಅನುಮತಿ ನೀಡಬಹುದು ಎಂದಿದೆ. ಇದು ಆಟೋ ಚಾಲಕರ ಆಕ್ರೋಶಕ್ಕೆ ಕಾರಣವಾಗಿದೆ.