ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲಿ ಬೈಕ್ ವೀಲಿಂಗ್ ಹಾವಳಿ ಮೀತಿ ಮೀರಿದೆ. ಮೂರು ಬಾರಿ ಬಂಧಿಸಿದ್ರೂ, ಈ ಆರೋಪಿ ಮಾತ್ರ ಬೈಕ್ ವೀಲಿಂಗ್ ಬಿಟ್ಟಿಲ್ಲ
ಹೌದು, ಆರ್.ಟಿ.ನಗರ ಸಂಚಾರಿ ಪೊಲೀಸರು ವ್ಹೀಲಿಂಗ್ ಮಾಡುತ್ತಿದ್ದ ಸಂದರ್ಭ ಮೂರು ಬಾರಿ ಬಂಧಿಸಿದ್ರು ಆರೋಪಿ ಮಾತ್ರ ತನ್ನ ಛಾಳಿ ಮುಂದುವರಿಸಿದ್ದ.
ಬಂಧನ ಬಳಿಕ ವೀಲಿಂಗ್ ಮಾಡದಂತೆ ಆರೋಪಿಗೆ ಹಾಗೂ ಆತನ ಪೋಷಕರನ್ನು ಕರೆಸಿ ಎಚ್ಚರಿಕೆ ನೀಡಿದ್ದರು.
ಈ ವೇಳೆ ನಾನು ಸೊಷಿಯಲ್ ಮೀಡಿಯಾದಲ್ಲಿ ವಿಡಿಯೋ ಅಪ್ಲೋಡ್ ಮಾಡಿದ್ರೆ, ಹಣ ಬರುತ್ತೆ ಎಂದು ಸವಾರ ಹೇಳಿದ್ದ. ತಿಂಗಳಿಗೆ ಬೈಕ್ ವೀಲಿಂಗ್ ಮಾಡಿ 30 ಸಾವಿರ ಸಂಪಾದನೆ ಮಾಡೋದಾಗಿ ಹೇಳಿದ್ದ.
ನನಗೆ ಏನು ಕೆಲಸವಿಲ್ಲ ,ಬೈಕ್ ವೀಲಿಂಗ್ ಮಾಡಿದ್ರೆ ಹಣ ಬರುತ್ತೆ. ದಯವಿಟ್ಟು ನನ್ನ ಬಿಟ್ಟು ಬಿಡಿ ಎಂದು ಬೈಕ್ ಸವಾರ ಪೊಲೀಸರಿಗೆ ಹೇಳಿದ್ದ. ಬಂಧಿಸಿ ದಂಡ ಹಾಕಿ ಸ್ಟೇಷನ್ ಬೇಲ್ ಮೇಲೆ ಬಿಡುಗಡೆ ಆಗಿದ್ದ.
ಇದೀಗ ಬೈಕ್ ಸವಾರ ಮತ್ತೆ ಅದೇ ಚಾಳಿ ಮುಂದುವರೆಸಿದ್ದು,
ಪ್ರತಿನಿತ್ಯ ಬೈಕ್ ವೀಲಿಂಗ್ ಮಾಡೋದು ಬಳಿಕ ವಿಡಿಯೋ ಸಾಮಾಜಿಕ ಜಾಲತಾಣಕ್ಕೆ ಹಾಕೋದು ಮಾಡುತ್ತಿದ್ದಾನೆ. ಹೀಗಾಗಿ ಪುಂಡನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ.