ದೆಹಲಿ:– ಬಿಲ್ಕಿಸ್ ಬಾನು ಪ್ರಕರಣದ ದೋಷಿಗಳು ಜ.21ರೊಳಗೆ ಶರಣಾಗಲು ಸುಪ್ರೀಂಕೋರ್ಟ್ ಆದೇಶ ಹೊರಡಿಸಿದೆ.
ನ್ಯಾಯಮೂರ್ತಿ ಬಿ.ವಿ.ನಾಗರತ್ನ ನೇತೃತ್ವದ ಪೀಠವು ಈ ಆದೇಶ ನೀಡಿದೆ. ಪ್ರಕರಣದ 11 ದೋಷಿಗಳು ಅಧಿಕಾರಿಗಳ ಮುಂದೆ ಶರಣಾಗಲು ಮತ್ತು ಮತ್ತೆ ಜೈಲಿಗೆ ಹೋಗುವುದಕ್ಕೆ ಮತ್ತಷ್ಟು ಸಮಯ ಅನುಮತಿಸಬೇಕು ಎಂದು ಕೋರಿಸಲ್ಲಿಸಿದ್ದ ಅರ್ಜಿಗಳನ್ನು ಸುಪ್ರೀಂಕೋರ್ಟ್ ಶುಕ್ರವಾರ ವಜಾಗೊಳಿಸಿದೆ.
ನ್ಯಾಯಮೂರ್ತಿ ಬಿ.ವಿ.ನಾಗರತ್ನ ನೇತೃತ್ವದ ಪೀಠವು ವಿಚಾರಣೆ ವೇಳೆ, ಅರ್ಜಿಗಳಿಗೆ ಕೊರತೆಯಿದೆ ಮತ್ತು ಜನವರಿ 21 ಜೈಲು ಅಧಿಕಾರಿಗಳ ಮುಂದೆ ಶರಣಾಗುವಂತೆ ಆದೇಶಿಸ ಹೊರಡಿಸಿದೆ.