ಉತ್ತರ ಕನ್ನಡ: ರಾಜ್ಯದ ಕರಾವಳಿಯಲ್ಲಿ ಬಿಪರ್ ಜಾಯ್ ಚಂಡಮಾರುತ ಅಬ್ಬರ ಹಿನ್ನಲೆ ಜಿಲ್ಲೆಯ ಕಾರವಾರದ ಮಾಜಾಳಿ ಕಡಲತೀರದಲ್ಲಿ ಭಾರಿ ಕಡಲ ಕೊರತವಾಗಿದೆ. ಇನ್ನು ಅಲೆಗಳ ಹೊಡೆತಕ್ಕೆ ಪಿಚಿಂಗ್ ಕಲ್ಲುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕಡಲ ಕೊರೆತ ತಡೆಯಲು ಹಾಕಿದ್ದ ಪಿಚಿಂಗ್ (ತಡೆ ಗೋಡೆ) ಅಲೆಗಳ ಹೊಡೆತಕ್ಕ ಬೇರು ಸಮೇತ ಕಿತ್ತು ಬಂದಿದೆ. ಇನ್ನು ಎರಡು ದಿನಗಳ ಕಾಲ ಕಡಲ ಅಲೆಗಳು ಅಬ್ಬರಿಸಲಿದ್ದು, ಅಲೆಗಳ ಅಬ್ಬರಕ್ಕೆ ಪ್ರವಾಸಿಗರು ಆತಂಕಗೊಂಡಿದ್ದಾರೆ.