ಕೋಲ್ಕತ್ತಾ: ಭಾರತದ ಆತಿಥ್ಯದಲ್ಲಿ ಇದೇ ನಡೆಯುತ್ತಿರುವ ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಂಡಿರುವ ಬಾಬರ್ ಆಜಂ ನಾಯಕತ್ವದ ಪಾಕಿಸ್ತಾನ ಕ್ರಿಕೆಟ್ ತಂಡವು (Pakistan Criekct Team) ಬಾಂಗ್ಲಾದೇಶ ವಿರುದ್ಧ ಪಂದ್ಯವನ್ನಾಡಲು ಕೋಲ್ಕತ್ತಾಗೆ (Kolkata0 ಆಗಮಿಸಿದೆ. ಭರ್ಜರಿ ಆತಿಥ್ಯದೊಂದಿಗೆ ಹೈದರಾಬಾದ್ ಮತ್ತು ಚೆನ್ನೈನಲ್ಲಿ ಬಿರಿಯಾನಿ ಮತ್ತು ಇತರ ಭಕ್ಷ್ಯಗಳನ್ನು ಸವಿದ ನಂತರ, ಕೋಲ್ಕತ್ತಾ ಮತ್ತು ಬೆಂಗಳೂರಿನಲ್ಲಿ ನಡೆಯಲಿರುವ ಕೊನೆಯ 3 ಪಂದ್ಯಗಳಿಗೆ ತಯಾರಿ ನಡೆಸುತ್ತಿರುವ ಪಾಕಿಸ್ತಾನ ತಂಡಕ್ಕೆ ಇನ್ನುಂದೆ ಬಿರಿಯಾನಿ (Biriyani) ಸಿಗುವುದಿಲ್ಲ ಎಂದು ಮೂಲಗಳಿಂದ ತಿಳಿದುಬಂದಿದೆ.
ಝಮ್ ಝಮ್ ಬಿರಿಯಾನಿ ಸವಿದ ಪಾಕ್: ಸತತ ಸೋಲಿನಿಂದ ಕಂಗೆಟ್ಟಿರುವ ಪಾಕ್ ಆಟಗಾರರು ಫಿಟ್ನೆಸ್ ಕಾಯ್ದುಕೊಳ್ಳಲು ತಮ್ಮ ಪ್ರೀತಿಯ ಬಿರಿಯಾನಿ ತ್ಯಜಿಸಬೇಕು, ಅದರ ಬದಲಿಗೆ ಮೆಡಿಟರೇನಿಯನ್ ಕಬಾಬ್ಗಳು (Mediterranean Kebabs), ಮೊಟ್ಟೆಗಳು ಮತ್ತು ಪ್ರೋಟೀನ್ಯುಕ್ತ ಆಹಾರವನ್ನು ಸೇವಿಸಬೇಕು ಎಂದು ಹೇಳಲಾಗಿದೆ. ಈ ನಡುವೆ ತಮಗೆ ನಿಗದಿಪಡಿಸಿದ್ದ ರೆಸ್ಟೋರೆಂಟ್ ಅನ್ನು ಬಿಟ್ಟು ಆನ್ಲೈನ್ನಲ್ಲಿ ಬುಕ್ಮಾಡಿದ ಬಗೆಬಗೆಯ ಭಕ್ಷ್ಯಗಳನ್ನ ಸವಿದಿರುವುದು ಕಂಡುಬಂದಿದೆ. ಇದು ಜಾಲತಾಣದಲ್ಲಿ ಬಿಸಿ ಬಿಸಿ ಚರ್ಚೆಯಲಿದೆ.
ಹೌದು. ಕೋಲ್ಕತ್ತಾಗೆ ಆಗಮಿಸಿರುವ ಪಾಕ್ ತಂಡಕ್ಕೆ ಮೆನ್ ಇನ್ ಗ್ರೀನ್ ಹೋಟೆಲ್ನಲ್ಲಿ ಊಟ ನಿಗದಿಪಡಿಸಲಾಗಿತ್ತು. ಆದ್ರೆ ಪಾಕ್ ತಂಡ ಕೋಲ್ಕತ್ತಾದ ಫೇಮಸ್ ಝಮ್ ಝಮ್ ರೆಸ್ಟೋರೆಂಟ್ ಬಿರಿಯಾನಿ (Zam Zam Biriyani), ಕಬಾಬ್ ಹಾಗೂ ಚಾಪ್ಸ್ಗಳನ್ನು ಆನ್ಲೈನ್ನಲ್ಲಿ ಬುಕ್ಮಾಡಿ ತರಿಸಿಕೊಂಡು ಸವಿದಿದೆ. ಝಮ್ ಝಮ್ ರೆಸ್ಟೋರೆಂಟ್ನ ನಿರ್ದೇಶಕ ಶಾದ್ಮನ್ ಫೈಜ್ ಇದನ್ನು ಖಚಿತಪಡಿಸಿದ್ದಾರೆ. ಮೊದಲು ಇದು ಪಾಕ್ ತಂಡದಿಂದ ಬಂದ ಆರ್ಡರ್ ಎಂದು ತಿಳಿದಿರಲಿಲ್ಲ, ಸ್ವಲ್ಪ ತಡವಾಗಿ ಗೊತ್ತಾಗಿದೆ. ಇಡೀ ವಿಶ್ವದಲ್ಲೇ ಕೋಲ್ಕತ್ತಾದ ನಮ್ಮ ಝಮ್ ಝಮ್ ಬಿರಿಯಾನಿ ತನ್ನದೇ ವಿಶೇಷತೆ ಹೊಂದಿದೆ. ಹಾಗಾಗಿ ಬಹಳ ಪ್ರಸಿದ್ಧವಾಗಿದೆ ಎಂದು ಹೇಳಿಕೊಂಡಿದ್ದಾರೆ.