ಬೆಂಗಳೂರು : ವಿವಿಧ ಭೇಡಿಕೆಗಳನ್ನು ಇಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿ ನೂರಾರು ಜನ ಬಿಸಿಯೂಟ ಕಾರ್ಯಕರ್ತರು ನಗರದ ಫ್ರೀಡಂ ಪಾರ್ಕ್ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಗೆ ರಾಜ್ಯದ ಮೂಲೆ ಮೂಲೆಯಿಂದಲು ಬಂದ ಂತಹ ನೂರಾರು ಜನ ಕಾರ್ಯಕರ್ತರು ಭಾಗಿಯಾಗಿದ್ದರು, ಯಾವುದೇ ಸರ್ಕಾರ ಬಂದರು ಬಿಸಿಯೂಟದ ಕಾರ್ಯಕರ್ತರನ್ನು ನಿರ್ಲಕ್ಷಿಸುತ್ತ ಬಂದಿದ್ದಾರೆ, ನಾವು ಸಾಕಷ್ಟು ವರ್ಷಗಳಿಂದ ಅಕ್ಷರ ದಾಸೋಹ ಯೋಜನೆ ಅಡಿಯಲ್ಲಿ ಕೆಲಸ ಮಾಡಿಕೊಂಡು ಬಂದಿದ್ದಿವಿ ಇದನ್ನು ಶಿಕ್ಷಣ ಇಲಾಖೆ ಅಡಿಯಲ್ಲಿ ತರಬೇಕು ಜೊತೆಗೆ ನಮ್ಮನ್ನು ಈ ಹುದ್ದೆಯಲ್ಲಿ ಖಾಯಂ ಗೊಳಿಸಬೇಕು, ಬಜೇಟ್ ನಲ್ಲಿ ಘೋಷಣೆಮಾಡಿದ ಹಾಗೆ ವೇತನವನ್ನು ಹತ್ತು ಸಾವಿರ ರೂಪಾಯಿ ನಿಗದಿ ಪಡಿಸಿ ಅದನ್ನು ಈ ವರ್ಷದ ಜನವರಿಯಿಂದ ಅನ್ವಯವಾಗುವಂತೆ ಮಾಡಬೇಕು ಅಂತ ಒತ್ತಾಯಿಸಿದರು,
ಕೆಲಸದ ಸ್ಥಳದಲ್ಲಿ ಮರಣ ಹೊಂದಿದರೆ 25ಲಕ್ಷ ಪರಿಹಾರ ನೀಡಬೇಕು ಬೇಸಿಗೆ ದಸರಾ ರಜೆಯಲ್ಲೂ ವೇತನವನ್ನೂ ಕಡ್ಡಾಯವಾಗಿ ನೀಡಬೇಕು ಸೇರಿದಂತೆ ಇನ್ನೂ ಪ್ರಮುಖ ಇತರ ಭೇಡಿಕೆಗಳನ್ನು ಇಡೇರಿಸುವಂತೆ ಒತ್ತಾಯಿಸಿ ಸರ್ಕಾರ ವಿರುದ್ದ ಅನಿರ್ಧಿಷ್ಟಾವದಿ ಮುಷ್ಕರವನ್ನು ಕೈಗೊಂಡಿದ್ದರು. ರಾಜ್ಯದ ಬೇರೆ ಬೇರೆ ಭಾಗದಿಂದ ಸಾಕಷ್ಟು ಕಾರ್ಯಕರ್ತರು ಭಾಗಿಯಾಗಿದ್ದರಿಂದ ಮೆಜೆಸ್ಟಿಕ್ ಸುತ್ತ ಮುತ್ತಲಿನ ರಸ್ತೆಗಳಲ್ಲಿ ಕೆಲಕಾಲ ಟ್ರಾಫೀಕ್ ಜಾಮ್ ಆಗಿದ್ದರಿಂದ ಜನರು ಕಿರಿಕಿರಿ ಅನುಭವಿಸುವಂತಾಯಿತು.