ಹುಬ್ಬಳ್ಳಿ: ನಮ್ಮದು ಕೇಂದ್ರದಲ್ಲಿಯೂ ಸರ್ಕಾರವಿದೆ. ರಾಜ್ಯದಲ್ಲಿಯೂ ಸರ್ಕಾರ ಬಂದರೆ ಕೇಂದ್ರ ಸರ್ಕಾರ ನೀಡುವ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬಹುದು. ಅತೀ ಸಮಾನ್ಯ ವ್ಯಕ್ತಿಗೂ ಈ ಯೋಜನೆಗಳು ತಲುಪಲು ಸಹಾಯವಾಗುತ್ತದೆ ಎಂದು ರಾಷ್ಟ್ರೀಯ ವಕ್ತಾರರು ಹಾಗೂ ರಾಜ್ಯಸಭೆ ಸದಸ್ಯರಾದ ಗೋಪಾಲ್ ಕೃಷ್ಣ ಅಗರ್ವಾಲ್ ಹೇಳಿದರು.
ನಗರದ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರವು ಪರಸ್ಪರ ಕೂಡಿ ಕೆಲಸ ಮಾಡಿದರೆ ನಮ್ಮ ದೇಶವು ಆರ್ಥಿಕವಾಗಿ ವಿಶ್ವಮಟ್ಟದಲ್ಲಿ ಬೆಳೆಯಲು ಸಾದ್ಯವಾಗುತ್ತದೆ. ಒಂದುವೇಳೆ ಬೇರೆ ಸರ್ಕಾರಗಳು ರಾಜ್ಯದಲ್ಲಿ ಆಡಳಿತಕ್ಕೆ ಬಂದರೆ ಕೇಂದ್ರದ ಯೋಜನೆಗಳೊಂದೆಗೆ ಸಹಕಾರ ನೀಡುವುದಿಲ್ಲ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಕೇರಳ ಸರ್ಕಾರ ಕೇಂದ್ರ ಸರ್ಕಾರ ಯೋಜನೆಗಳನ್ನು ಕೇವಲ 45% ಹಾಗೂ ಪಶ್ಚಿಮ ಬಂಗಾಳವು 35% ನಷ್ಟು ಜಾರಿಗೆ ತಂದಿದ್ದಾರೆ.
ಆದರೆ ಕರ್ನಾಟಕವು 94% ಹಾಗೂ ಮಧ್ಯಪ್ರದೇಶ 99% ನಷ್ಟು ಜಾರಿ ಮಾಡಿವೆ. ಈ ಮೊದಲು ಹಲವು ಯೋಜನೆಗಳ ಅಡಿಯಲ್ಲಿ ಜಾರಿಮಾಡಿದ ಹಣದಲ್ಲಿ ಕೇವಲ15% ರಷ್ಟು ಫಲಾನುಭವಿಗೆ ಸಿಗುತ್ತಿತ್ತು. ಉಳಿದ ಹಣ ದಲ್ಲಾಳಿಗಳ ಕೈ ಸೇರುತ್ತಿತ್ತು. ಈಗ ನೇರವಾಗಿ ಫಲಾನುಭವಿಯ ಅಕೌಂಟಗೆ ಹೋಗುತ್ತದೆ. ಪ್ರಧಾನ ಮಂತ್ರಿ ಕಿಸಾನ ಸಮ್ಮಾನ ಯೋಜನೆ ಅಡಿಯಲ್ಲಿ ಸಾವಿರಾರು ರೈತರಿಗೆ ನೇರ ಹಣ ವರ್ಗಾವಣೆಯಗುತ್ತಿದೆ ಎಂದರು.