ಹುಬ್ಬಳ್ಳಿ: ಬಿಜೆಪಿ ಪಕ್ಷದ ಅಭ್ಯರ್ಥಿ ನಾಗರಾಜ್ ಛಬ್ಬಿ ಬುಧವಾರ ನಾಮಪತ್ರ ಸಲ್ಲಿಸಿದರು. ಪಟ್ಟಣದ ಹನ್ನೆರಡು ಮಠದಿಂದ ತೆರದ ವಾಹನದಲ್ಲಿ ಅಪಾರ ಸಂಖ್ಯೆಯ ಕಾರ್ಯಕರ್ತರ ಸಮ್ಮುಖದಲ್ಲಿ ಬೃಹತ್ ರೋಡ ಶೋ ನಡಿಸಿ ತಹಶೀಲ್ದಾರ್ ಕಛೇರಿವರೆಗೂ ತೆರಳಿ ನಂತರ ಮಾತನಾಡಿ ಕಾಂಗ್ರೆಸ್ ಪಕ್ಷ ಬಿಟ್ಟು ಬಿಜೆಪಿ ಪಕ್ಷ ಸೇರಿದ ಮೂರೇದಿನಗಳಲ್ಲಿ ಭಾರತೀಯ ಜನತಾ ಪಾರ್ಟಿ ನನಗೆ ಟಿಕೆಟ್ ಕೊಟ್ಟು ಬಿ ಫಾರ್ಮ್ ನೀಡಿ ಗೌರವಿಸಿದೆ ಅದಕ್ಕೆ ತಾಲೂಕಿನ ಎಲ್ಲ ಕಾರ್ಯಕರ್ತರೇ ಕಾರಣ ಎಂದರು.
ಮತ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ಸಾಕಷ್ಟು ಇದ್ದರೂ ಅವರಿಗೆ ಟಿಕೆಟ್ ನೀಡಿಲ್ಲ ಆದರೂ ಎಲ್ಲರೂ ನನ್ನ ಜೊತೆಯಲ್ಲಿದ್ದು ಮುಂದೆ ನಿಂತು ಪ್ರಚಾರ ಕೆಲಸ ಮಾಡುತ್ತಿದ್ದಾರೆ ಈ ಚುನಾವಣೆ ಬಹಳ ಮಹತ್ವವಾದದ್ದು ಕಲಘಟಗಿ ಮತ ಕ್ಷೇತ್ರವನ್ನು ರಾಜ್ಯ ಮತ್ತು ರಾಷ್ಟ್ರ ಬಿಜೆಪಿ ನೋಡುತ್ತಿದೆ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರಲ್ಲಿ ನನಗೆ ವಿಶ್ವಾಸವಿದೆ ಅದಕ್ಕೆ ಚುನಾವಣೆಯಲ್ಲಿ ತಕ್ಕ ಉತ್ತರವನ್ನು ನೀವು ನೀಡಿದ್ದೀರಿ ಎಂದು ಭಾವಿಸಿದ್ದೇನೆ ಎಂದರು.
ನಾನು ದೇವರ ಮೇಲೆ ಪ್ರಮಾಣ ಮಾಡಿ ಹೇಳುತ್ತೇನೆ ನಾನು ಇದೇ ಮತಕ್ಷೇತ್ರದ ಮನೆ ಮಗ ನನ್ನ ತಾಯಿಯೂ ಕೂಡ ಇದೆ ಮತಕ್ಷೇತ್ರದವಳು ನನಗೆ ಶಾಸಕನಾಗಿ ಅಧಿಕಾರ ಮಾಡಬೇಕೆಂದು ಆಸೆ ಏನಿಲ್ಲ ನನಗೆ ಅಧಿಕಾರ ಮುಖ್ಯವಲ್ಲ ಮತಕ್ಷೇತ್ರದ ಆಶೀರ್ವಾದ ಒಂದಿದ್ದರೆ ಸಾಕು ಏನನ್ನಾದರೂ ಸಾಧಿಸಬಹುದು ಎಂದರು. ದಯವಿಟ್ಟು ನಿಮ್ಮ ಕೈಮುಗಿದು ಕಾಲು ಬಿದ್ದು ಕೇಳಿಕೊಳ್ಳುತ್ತೇನೆ ಇನ್ನೂ ಹದಿನೈದು ದಿನ ಸಮಯವಿದೆ ಬೇರೆ ಯೋಚನೆ ಮಾಡದೆ ನನಗೆ ಬೆಂಬಲ ನೀಡಿ ಭೇಟಿಯಾಗಿಲ್ಲ,ಮಾತನಾಡಿಲ್ಲ ಅಂತ ಯಾವುದೇ ಕಾರಣ ಹೇಳದೆ ನನಗೆ ಬೆಂಬಲಿಸಿ ಆಶೀರ್ವಾದ ಮಾಡಿ ಎಂದರು. ಈ ಬಾರಿ ಮತ್ತೆ ಕಲಘಟಗಿ ಮತಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಿಸುವಂತೆ ಮಖಂಡರಿಗೆ ಕಾರ್ಯಕರ್ತರಿಗೆ ಕರೆ ನೀಡಿದರು .
ನಾಮಪತ್ರ ಸಲ್ಲಿಸುವ ವೇಳೆ ವಿವಿಧ ವಾದ್ಯ ಮೇಳಗಳ ಕಲಾವಿದರ ತಂಡಗಳು ಮೂಲಕ ರಸ್ತಯ ಉದ್ದಕ್ಕೂ ಗಮನ ಸೆಳೆಯಿತು ಸುಮಾರು 30 ಸಾವಿರಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರು ಛಬ್ಬಿ ಅಭಿಮಾನಿಗಳು ಭಾಗವಹಿಸಿದ್ದರು. ಕೆಲ ಹೊತ್ತು ರಸ್ತೆ ಸಂಚಾರ ಅಸ್ತವ್ಯಸ್ತವಾಗಿತ್ತು. ಇದೇ ಸಂದರ್ಭದಲ್ಲಿ ಪ್ರಲ್ಹಾದ ಜೋಶಿ ಶಂಕರ ಪಾಟೀಲ ಮುನೇನಕೊಪ್ಪ ಈರಣ್ಣ ಗೋಕುಲ ಬಸವರಾಜ ಕುಂದಗೋಳಮಠ ಈರಣ್ಣ ಜಡಿ ಬಸವರಾಜ ಕರಡಿಕೊಪ್ಪ ಗೀತಾ ಮರಲಿಂಗಣ್ಣವರ ವಿಜಯಲಕ್ಷ್ಮಿ ಆಡಿನವರ ಬಸವರಾಜ ಶರೇವಾಡ ಮಹಾಂತೇಶ ತಹಶೀಲ್ದಾರ್ ಚಂದ್ರಗೌಡ ಪಾಟೀಲ್ ಶಶಿಧರ ನಿಂಬಣ್ಣವರ ಸಿ ಎಪ್ ಪಾಟೀಲ ರಾಜು ಆರ್ ಕಲಘಟಗಿ ವಿ ಎಸ್ ಪಾಟೀಲ್ ಕಲ್ಮೇಶ ಹಾವೇರಪೇಟಾ ಪರಶುರಾಮ ದುಂಡಿ ನಾಗಪ್ಪ ಕನಕಪ್ಪನವರ ಮಹದೇವ ಹೊರಕೇರಿ ಅಣ್ಣಪ್ಪ ಓಲೇಕಾರ ಮದನ ಕುಲಕರ್ಣಿ ಗುರುನಾಥ ದಾನೇನವರ ಚನ್ನಯ್ಯ ಹಿರೇಮಠ ಪರಶುರಾಮ ಹುಲಿಹೊಂಡ ಅರ್ಜುನ ಲಮಾಣಿ ಮಹಾಂತೇಶ ಹೆಂಬ್ಲಿ ಬೀರಪ್ಪ ಡೊಳ್ಳಿನ ಸೇರಿದಂತೆ ಬಿಜೆಪಿ ಮುಖಂಡರು ಕಾರ್ಯಕರ್ತರು ಛಬ್ಬಿ ಅಭಿಮಾನಿಗಳು ಉಪಸ್ಥರಿದ್ದರು.