ಬೆಂಗಳೂರು: ಜೆಡಿಎಸ್ ಪಕ್ಷ ಬಿಜೆಪಿ ಜೊತೆ ಹೋಗಲು ಡಿಕೆಶಿ ಕಾರಣ ಎಂಬ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಡಿಸಿಎಂ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಜೊತೆ ದೂರ ಇಡಲು ಕುಮಾರಸ್ವಾಮಿಯನ್ನು ಕರೆದುಕೊಂಡು ಬಂದು ಸಿಎಂ ಮಾಡಿದ್ವಿ. ಅದನ್ನು ಅವರು ಉಳಿಸಿಕೊಳ್ಳಲಿಲ್ಲ ಎಂದು ಕುಟುಕಿದರು.
ಕುಮಾರಸ್ವಾಮಿ ಏನು ಮಾತನಾಡ್ತಿದ್ದಾರೆ. ಬಿಜೆಪಿಯವರಿಗೆ ರಾಜ್ಯದಲ್ಲಿ ಶಾಂತಿ ಇರುವುದನ್ನು ಸಹಿಸಲು ಆಗ್ತಿಲ್ಲ. ಬಿಜೆಪಿಯಲ್ಲಿ ಆಂತರಿಕ ಜಗಳ ಇದೆ. ಇದನ್ನು ಕಂಟ್ರೋಲ್ ಮಾಡೋಕೆ ಅವರಿಗೆ ಆಗ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದ ಬಾಕಿ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಬಗ್ಗೆ ಮಾತನಾಡಿದ ಅವರು, ಎರಡು, ಮೂರು ಕ್ಷೇತ್ರ ಹೊರತುಪಡಿಸಿ ಉಳಿದೆಲ್ಲವು ಚರ್ಚೆ ಆಗಿದೆ. ನಾಳೆ ಮತ್ತೆ ನಾಲ್ಕು ಗಂಟೆಗೆ ಸಿಇಸಿ ಸಭೆ ಸೇರುತ್ತೇ. ಬಳಿಕ ಪಟ್ಟಿ ಬಿಡುಗಡೆಯಾಗಲಿದೆ ಎಂದು ಹೇಳಿದರು. ಆದರೆ, ಯಾವಾಗ ಪಟ್ಟಿ ಬಿಡುಗಡೆ ಎಂದು ಡಿಕೆಶಿ ಹೇಳಲಿಲ್ಲ.