ಹುಬ್ಬಳ್ಳಿ : ಕಾಂಗ್ರೆಸ್ ಅಭ್ಯರ್ಥಿ ಎನ್.ಎಚ್.ಕೋನರಡ್ಡಿ ಪರ ಪ್ರಚಾರಾರ್ಥವಾಗಿ ಮಾಡೆಲ್ ಹೈಸ್ಕೂಲ್ ಮೈದಾನದಲ್ಲಿ ಸಾರ್ವಜನಿಕ ಉದ್ದೇಶಸಿ ಪ್ರಿಯಾಂಕಾ ವಾದ್ರಾ ಮಾತನಾಡಿದರು. ಪ್ರಿಯಾಂಕಾ ವಾದ್ರಾ ಮಾತನಾಡಿ ನನಗೆ ರೈತ ಬಂಡಾಯ ನಾಡಿಗೆ ಬಂದಿದ್ದು ಸಂತೋಷವಾಯ್ತು, ಬಸವಣ್ಣ ನಾಡು, ಕಿತ್ತೂರ ಚನ್ನಮ್ಮ ನಾಡು, ಸಿದ್ದೇಶ್ವರ ಸ್ವಾಮಿಜೀ ಅವರಿಗೂ ಕೂಡ ನಮಸ್ಕರಿಸುತ್ತೇನೆ ಎಂದರು.
ಬಿಜೆಪಿಯವರು ಮೀಸಲಾತಿ ಹೆಚ್ಚಳ ಮಾಡುತ್ತೇವೆ ಎಂದು ಅದರಲ್ಲೂ ಮೋಸ ಮಾಡಿದೆ, ಮೀಸಲಾತಿ ಹೆಚ್ಚಳಕ್ಕೆ ಸಂವಿಧಾನದ 9ನೇ ಶೆಡ್ಯುಲ್ ನಲ್ಲಿ ಸೇರಿಸಬೇಕು, ಆದರೆ ಅದನ್ನೂ ಈ ಸರ್ಕಾರ ಮಾಡುತ್ತಿಲ್ಲ. ನಿಮ್ಮ ಮುಂದೆ ಬಂದು ಅವರು ಮೀಸಲಾತಿ ಹೆಚ್ಚಳದ ಬಗ್ಗೆ ಭಾಷಣ ಮಾಡುತ್ತಾರೆ. ಆದರೆ ಮೀಸಲಾತಿ ಹೆಚ್ಚಳಕ್ಕೆ ಅಗತ್ಯ ಕೆಲಸ ಮಾಡಿಯೇ ಇಲ್ಲ ಎಂದು ಪ್ರಿಯಾಂಕ ಗಾಂಧಿ ಗುಡುಗಿದರು.
ಈಗ ಸರ್ಕಾರ ಬದಲಿಸಲು ಸಮಯ ಬಂದಿದೆ. ನಿಮಗೆ ಉದ್ಯೋಗ, ಮಕ್ಕಳ ಭವಿಷ್ಯ, ಮಕ್ಕಳ ವಿಧ್ಯಾಭ್ಯಾಸ ಎಲ್ಲ ಸರಿಯಾಗಬೇಕು. ಶೇಕಡಾ 50ರಷ್ಟು ಮಹಿಳೆಯರು ಈ ದೇಶದಲ್ಲಿ ಇದ್ದೇವೆ. ಆರ್ಥಿಕವಾಗಿ ಮಹಿಳೆಯರು ಸ್ವಾವಲಂಬಿ ಆಗಬೇಕು ಪ್ರಿಯಾಂಕಾ ವಾದ್ರಾ ಕರೆ ಕೊಟ್ಟರು.
ಇದು ಬೆಲೆ ಏರಿಕೆ ಸರ್ಕಾರ, ಕಾಂಗ್ರೆಸ್ ಸರ್ಕಾರ ಇದ್ದಾಗ ಸಿಲಿಂಡರ್ ಬೆಲೆ 400 ರೂ ಎಷ್ಟಿತ್ತು. ಈಗ ಬಿಜೆಪಿ ಸರ್ಕಾರ ಬಂದ ಮೇಲೆ ಸಿಲಿಂಡರ್ ಬೆಲೆ 1200 ಏರಿಕೆ ಆಗಿದೆ. ಮಕ್ಕಳ ಶಾಲೆ ಪೀಸ್ ಸೇರಿದಂತೆ, ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ ಜನರ ಪರವಾಗಿ ಬಿಜೆಪಿ ಕೆಲಸ ಮಾಡಿಲ್ಲ ಅಂತ ಆರೋಪಿಸಿದರು. ಭಾರತೀಯ ಜನತಾ ಪಕ್ಷದ ನೇತೃತ್ವದ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಭ್ರಷ್ಟಾ ಸರ್ಕಾರಗಳನ್ನ ಕಿತ್ತು ಹೊಗೆಯಲು ಪಣ ತೊಡೆಯಿರಿ ಎಂದರು.
*ಸಾಮಾನ್ಯ ಮಹಿಳೆ ಮನೆಗೆ ಪ್ರಿಯಾಂಕಾ ಗಾಂಧಿ*
ಧಾರವಾಡ ಜಿಲ್ಲೆಯ ನವಲಗುಂದದಲ್ಲಿಂದು ಕಾಂಗ್ರೆಸ್ ಅಭ್ಯರ್ಥಿ ಎನ್ ಎಚ್ ಕೋನರಡ್ಡಿ ಪರವಾಗಿ ಬಹಿರಂಗ ಸಭೆಯಲ್ಲಿ ಮತಯಾಚನೆ ಬಂದ ಇಂದಿರಾಗಾಂಧಿ ಅವರ ಮೊಮ್ಮಗಳು ಪ್ರಿಯಾಂಕಾ ಗಾಂಧಿ ಅವರು ಏಕಾಏಕಿ ನವಲಗುಂದ ಪಟ್ಟಣದಲ್ಲಿ ಬೀದಿಬದಿಯ ವ್ಯಾಪಾರಿ ಬಾಲ ನಾಗಮ್ಮಳ ಮನೆಗೆ ಭೇಟಿ ನೀಡಿ ಅವರ ಕುಸೋಲೋಚಾರ ವಿಚಾರಣೆ ಮಾಡಿದರು.
ನವಲಗುಂದ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎನ್ ಎಚ್ ಕೋನರಡ್ಡಿ ಮಾತನಾಡಿ, ಸಮಯದ ಅಭಾವದಿಂದ ತಮ್ಮ ಮನೆ ಬಾಗಿಲಿಗೆ ಬಂದು ಮತ ಕೇಳಲು ಆಗಲಿಲ್ಲ ದಯವಿಟ್ಟು ಕ್ಷೇಮ ಇರಲಿ ತಾವೇ ಅಭ್ಯರ್ಥಿ ಎಂದು ತಿಳಿದು ಕಾಂಗ್ರೆಸ್ ಪಕ್ಷದ ಗುರುತು ಕೈಗೆ ಮತ ಹಾಕಿರಿ ಈ ಸಲ ಕ್ಷೇತ್ರದಲ್ಲಿ ಬದಲಾವಣೆ ತನ್ನಿ ಎಂದರು. ಮುಖಂಡರಾದ ವಿನೋದ ಅಸೂಟಿ, ಆರ್ ಎಚ್ ಕೋನರಡ್ಡಿ, ಬಾಪುಗೌಡ ಪಾಟೀಲ್, ರಾಜಶೇಖರ ಮೆಣಸಿನಕಾಯಿ, ಬಂಗಾರೇಶ ಹಿರೇಮಠ ಮುಂತಾದವರಿದ್ದರು.