ತುಮಕೂರು: ರಾಜ್ಯದಲ್ಲಿ ವಿದ್ಯುತ್ ದರ ಏರಿಕೆ (power tariff) ಮಾಡಿದ್ದು ಹಿಂದಿನ ಸರ್ಕಾರ. ನಮ್ಮ ಸರ್ಕಾರ ವಿದ್ಯುತ್ ದರ ಏರಿಕೆ ಮಾಡಿಲ್ಲ. ಹೆಚ್ಚಾಗಿ ವಿದ್ಯುತ್ ಬಳಸಿದ್ದರೆ ಹಣ ಕಟ್ಟಬೇಕು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿದ್ಯುತ್ ಬಿಲ್ ಹೆಚ್ಚು ಇದು ಕೆಲವರು ಕ್ರಿಯೆಟ್ ಮಾಡುತ್ತಿದ್ದಾರೆ.
ವಿದ್ಯುತ್ ಬಳಸಿದ್ದರೇ ಅದಕ್ಕೆ ಹಣ ಕಟ್ಟಬೇಕು ಎಂದಿದ್ದಾರೆ.ಸರ್ಕಾರದಿಂದ ಯಾವುದೇ ಬಿಲ್ ಹೆಚ್ಚಳ ಮಾಡಿಲ್ಲ. ಮೀಟರ್ ಜಾಸ್ತಿ ಬಂದಾಗ ಅವರು ಕಟ್ಟಲೇಬೇಕು. ನಾವು ಯಾವುದೇ ಬಿಲ್ ಹೆಚ್ಚಿಸಿಲ್ಲ. ಹಿಂದಿನ ಸರ್ಕಾರ ಮಾಡಿದ್ದು ಅಷ್ಟೇ. ಎಲ್ಲಾ ಯೋಜನೆ ಮುಂದುವರೆಯಲಿದೆ. ಯಾವುದು ಕೂಡ ನಿಲ್ಲುವುದಿಲ್ಲ ಎಂದು ಹೇಳಿದರು.