ಕೋಲ್ಕತ್ತಾ: ನಾನು ನನ್ನ ಪ್ರಾಣವನ್ನು ನೀಡಲು ಸಿದ್ಧನಿದ್ದೇನೆ, ಆದರೆ ದೇಶವನ್ನು ವಿಭಜಿಸಲು ಬಿಡುವುದಿಲ್ಲ ಎಂದು ಪಶ್ಚಿಮ ಬಂಗಾಳದ (West Bengal) ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಹೇಳಿದರು.ಕೋಲ್ಕತ್ತಾದಲ್ಲಿ (Kolkata) ನಡೆದ ಈದ್-ಉಲ್-ಫಿತರ್ (Ed-Ul-Fitar) ಸಭೆಯಲ್ಲಿ ರಂಜಾನ್ (Ramzan) ಶುಭಾಶಯವನ್ನು ಕೋರಿದರು. ನಂತರ ಮಾತನಾಡಿದ ಅವರು, ಮುಸ್ಲಿಂ ಬಾಂಧವರು ದಯವಿಟ್ಟು ಈದ್ ಹಬ್ಬವನ್ನು ಆನಂದಿಸಿ. ಯಾರೂ ಭಯಪಡಬೇಕಾದ ಅಗತ್ಯವಿಲ್ಲ.
ಯಾರೂ ನಿಮಗೆ ಹಾನಿಯುಂಟು ಮಾಡುವುದಿಲ್ಲ. ಕೆಲವು ಜನರು ದೇಶದಲ್ಲಿ ವಿಭಜನೆಗಳನ್ನು ಸೃಷ್ಟಿಸಲು ಬಯಸುತ್ತಿದ್ದಾರೆ. ಆದರೆ ನಾವು ಬಂಗಾಳದಲ್ಲಿ ಶಾಂತಿಯನ್ನು ಬಯಸುತ್ತೇವೆ. ನಮಗೆ ಘರ್ಷಣೆಗಳು ಬೇಡ, ಶಾಂತಿ ಬೇಕು. ನಾವೆಲ್ಲರೂ ಒಂದಾಗಿ ದೇಶವನ್ನು ಕಟ್ಟೋಣ. ಏನೇ ಆದರು ಎಲ್ಲರೂ ಒಟ್ಟಾಗಿ ಹೋರಾಡಿ ಗೆಲ್ಲೋಣ ಎಂದರು. ಕೆಲವರು ಮುಸ್ಲಿಂ (Muslim) ಮತಗಳನ್ನು ವಿಭಜಿಸಿವುದಾಗಿ ಹೇಳಿ ಬಿಜೆಪಿಯಿಂದ (BJP) ಹಣ ಪಡೆದಿದ್ದಾರೆ ಎಂದು ಟಿಎಂಸಿ (TMC) ವರಿಷ್ಠರು ಆರೋಪಿಸಿದ್ದಾರೆ.
ಬಿಜೆಪಿಗೆ ಮುಸ್ಲಿಂ ಮತಗಳನ್ನು ವಿಭಜಿಸುವ ಧೈರ್ಯವಿಲ್ಲ. ಲೋಕಸಭಾ ಚುನಾವಣೆಗೆ (Election) ಇನ್ನೂ ಒಂದು ವರ್ಷವಿದೆ. ಯಾರು ಆಯ್ಕೆಯಾಗುತ್ತಾರೆ ಮತ್ತು ಯಾರು ಆಗುವುದಿಲ್ಲ ಎಂಬುವುದನ್ನು ನೀವೇ ನೋಡಿ ಎಂದು ತಿಳಿಸಿದರು. ಇಂದು ಸಂವಿಧಾನ (Constitution) ಬದಲಾಗುತ್ತಿದೆ. ಹಾಗೆಯೇ ಇತಿಹಾಸವನ್ನೂ ಬದಲಾಯಿಸುತ್ತಿದ್ದಾರೆ. ನಾನು ಎನ್ಆರ್ಸಿಯನ್ನು (NRC) ಮಾಡಲು ಬಿಡುವುದಿಲ್ಲ. ಇದರ ವಿರುದ್ಧ ನಾನು ಹೋರಾಡುತ್ತೇನೆ. ಹೋರಾಡುವ ಧೈರ್ಯ ನನ್ನಲ್ಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.