ಮಂಡ್ಯ: ಹುಬ್ಬಳ್ಳಿ, ಮಂಡ್ಯದಲ್ಲಿ ತಮ್ಮ ವಿರುದ್ಧ ದೂರು ವಿಚಾರಕ್ಕೆ ಸಂಬಂಧಿಸಿದಂತೆ ಮಂಡ್ಯದಲ್ಲಿ ಶಾಸಕ ಗಣಿಗ ರವಿಕುಮಾರ್ ಪ್ರತಿಕ್ರಿಯೇ ನೀಡಿದ್ದಾರೆ. ಪ್ರಜಾಪ್ರಭುತ್ವವನ್ನ ಬಿಜೆಪಿ ಅವರು ಹಾಳು ಮಾಡುತ್ತಿದ್ದಾರೆ. ಯತ್ನಾಳ್ ಅವರೇ ಗಂಭೀರ ಆರೋಪ ಮಾಡಿದ್ರು ಅವರ ಮೇಲೆ ದೂರು ಕೊಡಲಿ.
ಶ್ರೀನಿವಾಸ್ ಹೇಳಿದ್ರು ಅವರ ಮೇಲೂ ದೂರು ಕೊಡಲಿ ಎಂದು ಕಿರಿಕಾರಿದರು.
ಇನ್ನೂ ಕೈ ಶಾಸಕರ ಖರೀದಿಗೆ ತಲಾ 100 ಕೋಟಿ ಆಫರ್ ಬಗ್ಗೆ ನನ್ನ ಬಳಿ ದಾಖಲಿ ಇದೆ. ಬಿಜೆಪಿ ಅವರಿಗೆ ನೈತಿಕತೆ ಇದ್ದರೆ ಸಿಎಂ, ಗೃಹಸಚಿವರಿಗೆ ದೂರು ಕೊಡಲಿ. ನಮ್ಮ ಬಳಿ ಇರುವ ದಾಖಲೆ ಕೊಡುತ್ತೇನೆ. ಯಾವ ಹೋಟೆಲ್ ನಲ್ಲಿ ಕುಳಿತು ಮಾತನಾಡಿದ್ದಾರೆ ಎಂಬ ಬಗ್ಗೆ ದಾಖಲೆ ಕೊಡುತ್ತೇನೆ ಎಂದು ಹೇಳಿದರು.