ಬಿಜೆಪಿ ಗೆ ಚುನಾವಣೆಯಲ್ಲಿ ಸೋಲುವ ಭೀತಿ ಎದುರಾಗಿದೆ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್

ರಾಜಕೀಯ

ಬೆಂಗಳೂರು: ಬಿಜೆಪಿ ಗೆ ಚುನಾವಣೆಯಲ್ಲಿ ಸೋಲುವ ಭೀತಿ ಎದುರಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ. ಈ ಸಂಬಂಧ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಪಕ್ಷ ಚುನಾವಣೆಯಲ್ಲಿ ಸೋಲುತ್ತೆ ಅಂತಾ ಗೊತ್ತಾಗಿದೆ. ದೊಡ್ಡ ಷಡ್ಯಂತ್ರ ಮಾಡ್ತಿದೆ. ಒಂದು ಸಂಸ್ಥೆಯನ್ನು ಮಾಡಿಕೊಂಡು ಎಲೆಕ್ಷನ್ ಕಮಿಶನ್ ಕೋಡ್, ಡಾಟಾ ತೆಗೆದುಕೊಂಡಿದ್ದಾರೆ. ಯಾರ ಹೆಸರು ತೆಗೆಯಬೇಕು, ಯಾರ ಹೆಸರು ಹಾಕಬೇಕು ಎಂದು ನಿರ್ಧಾರ ಮಾಡ್ತಿದ್ರು.

ಇದುವರೆಗೆ 27 ಲಕ್ಷ ವೋಟರ್​ ಐಡಿ ತೆಗೆದು ಹಾಕಿದ್ದಾರೆ. ಯಾವುದೇ ಪರ್ಮಿಶನ್ ತೆಗೆದುಕೊಂಡಿಲ್ಲ. ಬಿಎಲ್ ಓ ಐಡಿ ಕಾರ್ಡ್ ಕೊಡೋ ಅಥಾರಿಟಿನೇ ಇಲ್ಲ. ಮೂರು ಜನ ಮಂತ್ರಿಗಳು, ಇಬ್ಬರು ಶಾಸಕರು ಚಿಲುಮೆ ಸಂಸ್ಥೆ ಜೊತೆ ಸಂಪರ್ಕ ಇಟ್ಟುಕೊಂಡಿದ್ದಾರೆ. ಇದುವರೆಗೂ ಯಾರನ್ನೂ ಬಂಧಿಸಿಲ್ಲ ಎಂದು ದೂರಿದರು. ಕ್ರಿಮಿನಲ್ ಪ್ರಿಸಿಡಿಂಗ್ಸ್ ನ ಇನಿಶಿಯೇಟ್ ಮಾಡಬೇಕು. ಎಲ್ಲಾ ಬಿಎಲ್ ಓ ಗಳ ಮೇಲೆ ಎಫ್ ಐಆರ್ ಆಗಬೇಕು ಎಂದು ಒತ್ತಾಯ ಮಾಡಿದ್ದೇವೆ. ತೆಗೆದು ಹಾಕಲಾಗಿರುವ ವೋಟರ್ ಐಡಿಗಳ ಮರು ಪರಿಶೀಲನೆ ಆಗಬೇಕು.

ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ಆಗಬೇಕು ಎಂದು ಮನವಿ ಮಾಡಿದ್ದೇವೆ. ಇವಿಎಂ ಮ್ಯಾನೇಜ್ ಮಾಡೋ ಪವರ್ಸ್ ಅವ್ರಿಗೆ ಕೊಟ್ಟಿದ್ರು. ನಮ್ಮ ಅವಧಿಯಲ್ಲಿ ಕೊಟ್ಟಿದ್ದಾರೆ ಅಂತಾರೆ. ನಾವು ಮರ್ಡರ್ ಮಾಡಿದ್ದೀವಿ ಅಂತಾ ನೀವು ಮಾಡ್ತೀರಾ? ಎಂದು ಪ್ರಶ್ನಿಸಿದರು. ನಮಗೂ ಇದಕ್ಕೂ ಸಂಬಂಧ ಇಲ್ಲ ಎಂದು ಸಿಎಂ ಹೇಳಿದ್ದಾರೆ. ಬಿಬಿಎಂಪಿ ಅನುಮತಿ ಕೊಟ್ಟಿರೋದು ಎಂದಿದ್ದಾರೆ. ಇವ್ರು ಬೆಂಗಳೂರು ಉಸ್ತುವಾರಿ ಸಚಿವರಲ್ವಾ? ಧಮ್, ತಾಕತ್ ಬಗ್ಗೆ ಮಾತಾಡ್ತಿರಲ್ವಾ? ನಿಮಗೆ ಧಮ್, ತಾಕತ್ ಇದ್ರೆ ತನಿಖೆ ಮಾಡಿಸಿ ಎಂದು ಸವಾಲೆಸೆದರು.