ಬೆಂಗಳೂರು: ನನ್ನ ರಕ್ತದ ಕಣ ಕಣದಲ್ಲೂ ಬಿಜೆಪಿ ಇದೆ ನಾನು 13 ವರ್ಷದ ನಂತರ ನಾನು ನನ್ನ ಪಕ್ಷಕ್ಕೆ ಬಂದಿದ್ದೇನೆ ಎಂದು ಬಿಜೆಪಿ ಸೇರ್ಪಡೆ ಬಳಿಕ ಜನಾರ್ದನ ರೆಡ್ಡಿ ಹೇಳಿದರು.
ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಜನಾರ್ದನ ರೆಡ್ಡಿ ಮತ್ತೆ ಕಮಲ ಬಾವುಟವನ್ನು ಹಿಡಿದಿದ್ದಾರೆ. ಇದೇ ವೇಳೆ ತಮ್ಮ ಕೆಆರ್ಪಿಪಿ ಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಜನಾರ್ಧನ ರೆಡ್ಡಿಗೆ ಬಿಜೆಪಿ ಪಕ್ಷದ ಶಾಲು ಹಾಕಿ, ಬಾವುಟ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು. ಪತ್ನಿ ಅರುಣಾ ಹಾಗೂ ಟಿ. ಜಾನ್ ಪುತ್ರ ಥಾಮಸ್ ಕೂಡ ಬಿಜೆಪಿ ಪಕ್ಷ ಸೇರಿದರು.
ಇಂದಿನ ಭಾರತೀಯ ಜನತಾ ಪಕ್ಷಕ್ಕೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನು ವಿಲೀನ ಮಾಡುವ ಮೂಲಕ ನನ್ನ ಶ್ರೀಮತಿ ಹಾಗೂ ನನ್ನ ಕಷ್ಟದಲ್ಲಿ ನಿಂತಿರುವ ಎಲ್ಲರಿಗೂ ಅಭಿನಂದನೆಗಳನ್ನು ತಿಸುತ್ತೇನೆ ಇವತ್ತು ಯಡಿಯೂರಪ್ಪ ಹಾಗೂ ವಿಜೇಯಂದ್ರ ಅವರ ನೇತೃತ್ವದಲ್ಲಿ ಪಕ್ಷ ಸೇರ್ಪಡೆಯಾಗಿದ್ದೇನೆ ಇವತ್ತು ನಾವೆಲ್ಲ ಸೇರಿ ಹಾಗೂ KRPP ಪಕ್ಷದ ಸದಸ್ಯರು ಬಿಜೆಪಿ ಸೇರ್ಪಡೆ ಆಗಿದ್ದೇವೆ
ದೇಶದ ಅಭಿವೃದ್ಧಿ ಗೆ ಹಾಗೂ ವಿಶ್ವಗುರು ಭಾರತದ ನೇತೃತ್ವದ ನಾಯಕರು ಮೋದಿ ಅವರು ಜೆಪಿ ನಡ್ಡ ಹಾಗೂ ಅಮಿತ್ ಶಾ ಅವರು ನನ್ನನ್ನು ದೆಹಲಿಗೆ ಕರೆದು ಮಾತಾಡಿದ್ರು ಹಾಗೂ ಇದು ನಿಮ್ಮ ಬದುಕು ಕಟ್ಟಿರುವ ಪಕ್ಷ, ಹಾಗೂ ನೀವೇ ಕಟ್ಟಿ ಬೆಳಸಿದವರು ಹೀಗಾಗಿ ನಿಮ್ಮ ಸೇವೆ ಪಕ್ಷಕ್ಕೆ ಅಗತ್ಯ ಇದೆ ಅಂದ್ರು ಹಾಗೂ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ನನ್ನನು ಮಾಂತ್ರಿ ಮಾಡಿದ್ರು ಹಾಗೆಯೇ ಇವತ್ತು ವಿಜಯೇಂದ್ರ ಹಾಗೂ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಕೆಲಸ ಮಾಡಲುಇಚ್ಛಿಸುತ್ತೇನೆ ಹಾಗೂ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷ ಕಟ್ಟುತ್ತೇನೆ ಹಾಗೂ ನಾನು ಯಾವುದೇ ಶರತ್ತು ಹಾಕಿ ಬಂದಿಲ್ಲ
ನನ್ನ ರಕ್ತದ ಕಣ ಕಣದಲ್ಲೂ ಬಿಜೆಪಿ ಇದೆ ನಾನು 13 ವರ್ಷದ ನಂತರ ನಾನು ನನ್ನ ಪಕ್ಷಕ್ಕೆ ಬಂದಿದ್ದೇನೆ ಅನ್ನಿಸ್ತಿಲ್ಲ ಡೈಲಿ ಬಂದು ಹೋಗುತ್ತೇನೆ ಅನ್ನುವ ರೀತಿಯಲ್ಲಿ ಆಗಿದೆ ಹೀಗಾಗಿ ನನಗೆ ಅವಕಾಶ ಕೊಟ್ಟಿರುವ ಎಲ್ಲಾ ನಾಯಕರಿಗೂ ಅಭಿನಂದನೆಗಳು ಹೇಳುತ್ತೇನೆ ಎಂದು ಜನಾರ್ದನ ರೆಡ್ಡಿ ತಿಳಿಸಿದ್ದಾರೆ.