ಬಿಜೆಪಿಯವರಿಗೆ ದುರ್ಬುದ್ದಿ ಜಾಸ್ತಿ. ರಾಮನನ್ನು ಬೀದಿಗೆ ತಂದು ವೋಟು ಕೇಳುತ್ತಿದ್ದಾರೆ ಎಂದು ಬಿಜೆಪಿಗರ ವಿರುದ್ಧ ಶಿಕ್ಷಣ ಸಚಿವ ಮಧು ಬಂಗಾರಪ್ಪ ವಾಗ್ದಾಳಿ ನಡೆಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂಗಳ ತೆರಿಗೆ ಹಿಂದೂಗಳಿಗೆ ಕೋಡಬೇಕಂತೆ ಎಂದು ಟೀಕಿಸಿದರು.
ಮುಸ್ಲಿಮರು, ಬಡವರು ತೆರಿಗೆ ಕಟ್ಟಿಲ್ವಾ..? ನಾವೆಲ್ಲ ಭಾರತಾಂಬೆಯ ಮಕ್ಕಳು ಅಲ್ವಾ..? ವಿರೋಧ ಪಕ್ಷದವರಿಗೆ ಜನರು ಉತ್ತರ ಕೊಡುತ್ತಾರೆ. ವಿರೋಧ ಪಕ್ಷದ ಟೀಕೆ ಟಿಪ್ಪಣಿ ನಮಗೆ ಕೇಳಬೇಡಿ ಎಂದು ತಿಳಿಸಿದರು.
ಜನರೇ ಬಂದು ನಮಗೆ ಯೋಜನೆ ತಲುಪುತ್ತಿದೆ ಅನ್ನುತ್ತಿದ್ದಾರೆ. ಪಕ್ಷ, ಜಾತಿ, ಧರ್ಮ ನೋಡಿ ನಾವು ಯೋಜನೆ ಕೊಡಲ್ಲ. ನುಡಿದಂತೆ ನಡೆದ ಸರ್ಕಾರಕ್ಕೆ ಜನ ಬೆಂಬಲ ಕೇಳುತ್ತಿದ್ದಾರೆ ಎಂದು ಮಧು ಬಂಗಾರಪ್ಪ ತಿಳಿಸಿದರು.