ದೆಹಲಿ: ನಿನ್ನೆ ನಿಗದಿಯಾಗಿದ್ದ ಅಮಿತ್ ಶಾ ಹಾಗೂ ಹೆಚ್ಡಿ ಕುಮಾರಸ್ವಾಮಿ ಮೀಟಿಂಗ್, ಇಂದು ನಿಗದಿ ಮಾಡಲಾಗಿದೆ. ಲೋಕಸಭಾ ವಿಶೇಷ ಅಧಿವೇಶನ ನಿನ್ನೆ ತಡವಾಗಿ ಮುಗಿದ ಹಿನ್ನೆಲೆ ಇಂದು ಮೈತ್ರಿ ಮಾತುಕತೆ ನಡೆಯಲಿದೆ.
ಇವತ್ತು ಸಂಜೆ ಒಳಗಾಗಿ ಕಮಲದಳ ದೋಸ್ತಿ ಮೈತ್ರಿ ಅಧಿಕೃತ ಘೋಷಣೆ ಮಾಡಲಿದ್ದು, ಅಮಿತ್ ಶಾ, ಜೆಪಿ ನಡ್ಡಾ ಜೊತೆ ಕುಮಾರಸ್ವಾಮಿ, ಎಚ್ಡಿ ರೇವಣ್ಣ ಮೈತ್ರಿ ಮಾತುಕತೆ ಮಾಡಲಿದ್ದಾರೆ. ಈ ಕುರಿತು ಅಮಿತ್ ಶಾ ಇಂದು ಎರಡು ಗಂಟೆ ನಂತರ ಮೈತ್ರಿ ಮೀಟಿಂಗ್ಗೆ ಸಮಯ ಕೊಟ್ಟಿದ್ದಾರೆ.