ಬೆಂಗಳೂರು ;- ಆಡಳಿತ ಪಕ್ಷ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ -ಜೆಡಿಎಸ್ ಒಟ್ಟಿಗೆ ಹೋರಾಟ ಮಾಡಲಿದೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಧರಣಿ ನಿರತರಿಗೆ ಶಿಕ್ಷೆ ಕೊಡಲು ಭೋಜನ ವಿರಾಮಕ್ಕೆ ಬಿಡದೇ ಡೆಪ್ಯುಟಿ ಸ್ಪೀಕರ್ ಕಲಾಪ ನಡೆಸಿದರು.
ಮುಖ್ಯಮಂತ್ರಿ ಸೂಚನೆ ಮೇರೆಗೆ ಡೆಪ್ಯುಟಿ ಸ್ಪೀಕರ್ ಕಲಾಪ ಮುಂದುವರೆಸಿದ್ದರು. ಹಸಿವಿನಿಂದ ಆಕ್ರೋಶಗೊಂಡು ಕೆಲವರು ಕಾಗದ ಪತ್ರ ಹರಿದಿದ್ದಾರೆ ಎಂದರು.
ಸ್ಪೀಕರ್ ಪೀಠದಲ್ಲಿ ಕುಳಿತ ಮೇಲೆ ಯಾವುದೇ ಸಮುದಾಯಕ್ಕೆ ಸೇರಲ್ಲ. ಸ್ಪೀಕರ್ ಪೀಠದಲ್ಲಿ ಕುಳಿತವರು 224 ಶಾಸಕರಿಗೆ ರಕ್ಷಣೆ ಕೊಡಬೇಕು. ದಲಿತ ಶಾಸಕರಿಗೆ ಅವಮಾನ ಮಾಡಿದ್ದಾರೆ ಎಂದು ಅನುಕಂಪ ಗಿಟ್ಟಿಸಲು ಯತ್ನ ನಡೆಸಲಾಗಿದೆ. ಇಂತಹ ರಾಜಕೀಯ ಗಿಮಿಕ್ ಹೆಚ್ಚು ದಿನ ನಡೆಯುವುದಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ.ಕೆ. ಹೇಳಿದ್ದಾರೆ