ಶಿಡ್ಲಘಟ್ಟ: ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ರಾಜ್ಯದಲ್ಲಿ ಅಪವಿತ್ರ ಮೈತ್ರಿ ಮಾಡಿಕೊಂಡಿವೆ, ಅಪವಿತ್ರ ಮೈತ್ರಿ ಗೆ ಯಾರೂ ಬೆಲೆ ಕೊಡುವ ಅಗತ್ಯವಿಲ್ಲ ಎಂದು ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ರಾಜ್ಯಪಾಲರು ಪ್ರಸಿಕ್ಯೂಷನ್ ಗೆ ಅನುಮತಿಸಿರುವ ಕ್ರಮವನ್ನು ಖಂಡಿಸಿ,
ರಾಜ್ಯಾದ್ಯಂತ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ( ದಲಿತ ಹಿಂದುಳಿದ ಅಲೆಮಾರಿ ಆದಿವಾಸಿ ಅಲ್ಪಸಂಖ್ಯಾತ ಮತ್ತು ಜನಪರ ಸಂಘಟನೆಗಳು ) ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ (ರಿ) ವು, ಸಿಎಂ ಸಿದ್ದರಾಮಯ್ಯ ಅವರ ತೇಜೋವದೆ ಖಂಡಿಸಿ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರ ಗೊಳಿಸುತ್ತಿರುವ ಬಿಜೆಪಿ – ಜೆಡಿಎಸ್ ಕುತಂತ್ರಗಳನ್ನು ವಿರೋಧಿಸಿ ಪ್ರಜಾಪ್ರಭುತ್ವದ ರಕ್ಷಣೆಗಾಗಿ ಚಲೋ ಎಂಬ ಘೋಷ ವಾಕ್ಯದೊಂದಿಗೆ ರಾಜಭವನ ಮುತ್ತಿಗೆಯ ಸಲುವಾಗಿ ಹೊರಡುವ ಸಮಯದಲ್ಲಿ ಅವರು ಮಾತನಾಡಿದರು