ಲೋಕ ಸಮರಕ್ಕೆ ಪ್ರತಿಪಕ್ಷ ಬಿಜೆಪಿ ಭರ್ಜರಿ ತಾಲೀಮು ಶುರು ಮಾಡಿದೆ.ಬೆಂಗಳೂರಿನ ಅರಮನೆ ಮೈದಾನದಲ್ಲಿಇಂದು ರಾಜ್ಯ ಕಾರ್ಯಕರಣಿ ಸಭೆ ನಡೆಸುವ ಮೂಲಕ ಬಿಜೆಪಿ ಕಲಿಗಳು ಲೋಕ ಅಖಾಡಕ್ಕೆ ಅಧಿಕೃತವಾಗಿ ಧುಮುಕಿದ್ದಾರೆ.28ಕ್ಕೆ 28 ಕ್ಷೇತ್ರಗಳನ್ನ ಗೆಲ್ಲಲು,ಕಾರ್ಯಕರಣಿ ಸಭೆಯಲ್ಲಿ ನಿರ್ಣಯ ತೆಗದುಕೊಳ್ಳಲಾಗಿದೆ. ಯೆಸ್,ಪ್ರತಿಪಕ್ಷ ಬಿಜೆಪಿ ಲೋಕ ಅಖಾಡಕ್ಕೆ ಅಧಿಕೃತವಾಗಿ ಇಂದು ಧುಮಕಿದೆ.ಲೋಕ ಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ರಾಜ್ಯ ಕಾರ್ಯಕರಣಿ ಸಭೆ ನಡೆಸಿದ್ರು.
ಸಭೆಯಲ್ಲಿ ಬಿಜೆಪಿ ಕಲಿಗಳು ಶಕ್ತಿ ಪ್ರದರ್ಶನ ನಡೆಸಿದ್ರು.ಸಭೆಯಲ್ಲಿ ಕೇಂದ್ರ ಸಚಿವರಾದ ಭೂಪೇಂದ್ರ ಯಾದವ್,ಪ್ರಹ್ಲಾದ್ ಜೋಶಿ,ಮಾಜಿ ಸಿಎಂ ಬಿಎಸ್ವೈ,ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸೇರಿದಂತೆ ಶಾಸಕರು,ಸಂಸದರು,ಮಾಜಿ ಶಾಸಕರು,ಪದಾಧಿಕಾರಿಗಳು ಭಾಗಿಯಾಗಿದ್ದರು.ಈ ವೇಳೆ ಮಾತನಾಡಿದ ಬಿಎಸ್ವೈ,ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಕ್ ಪ್ರಹಾರ ನಡೆಸಿದ್ರು.ರಾಜ್ಯದಲ್ಲಿ ಭ್ರಷ್ಟ ಸರ್ಕಾರ ಇದ್ದು,ಇದ್ರ ವಿರುದ್ಧ ನಾವೆಲ್ಲರೂ ಹೋರಾಟ ಮಾಡಬೇಕು.28ಕ್ಕೆ 28 ಕ್ಷೇತ್ರಗಳನ್ನ ಗೆಲ್ಲಬೇಕೆಂದು ಕರೆ ನೀಡಿದ್ರು.
ಇನ್ನು ಕೇಂದ್ರ ಸಚಿವ ಭೂಪೇಂದ್ರ ಯಾದವ್ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ರು.ರಾಜ್ಯದಲ್ಲಿ ಕಾಂಗ್ರೆಸ್ ನೀಡಿರುವ ಗ್ಯಾರಂಟಿ ಯೋಜನೆ ವಿಫಲವಾಗಿದೆ.ನಮ್ಮ ಗ್ಯಾರಂಟಿ ಮೋದಿ ಗ್ಯಾರಂಟಿ.400ಕ್ಕೂ ಹೆಚ್ಚು ಸೀಟ್ ಗೆದ್ದು,ಮೂರನೇ ಬಾರಿ ಮತ್ತೆ ಪ್ರಧಾನಿಯಾಗಲಿದ್ದಾರೆ.ಇನ್ನು ನಾಯಕರಿಗೆ ಕಿವಿಮಾತು ಹೇಳಿದ ಭೂಪೇಂದ್ರ ಯಾದವ್,ಕೇಂದ್ರ ಯೋಜನೆಗಳನ್ನ ಮನೆಮನೆಗೂ ತಲುಪಿಸಿ.ಕೇಂದ್ರದ ಅನುದಾನ ಬರುತ್ತಿಲ್ಲ ಎಂದು ಕಾಂಗ್ರೆಸ್ ಸುಳ್ಳು ಹೇಳ್ತಿದೆ.ಇದನ್ನ ಜನರಿಗೆ ತಿಳಿಸಿ ಎಂದು ಕರೆ ಕೊಟ್ರು.
ಇನ್ನು ಕಾರ್ಯಕರಣಿಯಲ್ಲಿ ಕೇಂದ್ರ ಸಚಿವರಿಗೆ ವೇದಿಕೆ ಮೇಲೆ ಕುರ್ಚಿ ಹಾಕಲಾಗಿತ್ತು.ಆದ್ರೆ,ಸಭೆಗೆ ತಡವಾಗಿ ಆಗಮಿಸಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ,ಕೊನೆಯ ಸಾಲಿನಲ್ಲಿ ಕುಳಿತಿದ್ದರು.ವೇದಿಕೆ ಮೇಲೆ ಬರುವಂತೆ ಶೋಭಾ ಕರಂದ್ಲಾಜೆಗೆ ಮನವಿ ಮಾಡಿದ್ರೂ,ನಾನು ಇಲ್ಲೇ ಕೂರುತ್ತೇನೆಂದು ಹೇಳಿ ಕಳುಹಿಸಿದ್ದರು.ಇನ್ನು ವೇದಿಕೆ ಮೇಲೆ ಶೆಟ್ಟರ್,
ಪ್ರಹ್ಲಾದ್ ಜೋಶಿ ಮುಖಾಮುಖಿಯಾದ್ರು.ಒಂದು ಬಾರಿ ಹಸ್ತಲಾಘ ಮಾಡಿ,ಅಕ್ಕ ಪಕ್ಕ ಕುಳಿತಿದ್ದರೂ ಪರಸ್ಪರ ಮಾತನಾಡಿಲ್ಲ.ಇನ್ನು ಬಿಜೆಪಿ ಮನೆಯಿಂದ ಒಂದು ಕಾಲು ಹೊರಗೆ ಇಟ್ಟಿರುವ ಶಾಸಕರಾದ ಎಸ್ ಟಿ ಸೋಮಶೇಖರ್,ಶಿವರಾಂ ಹೆಬ್ಬಾರ್ ಸಭೆಗೆ ಗೈರಾಗಿದ್ರು.ಇನ್ನು ಬಿಎಸ್ವೈ ಕುಟುಂಬದ ಮೇಲೆ ಮುನಿಸಿಕೊಂಡಿರುವ ಬಿಜೆಪಿ ಫೈರ್ ಬ್ರ್ಯಾಂಡ್ ಬಸನಗೌಡ ಪಾಟೀಲ್ ಯತ್ನಾಳ್ ಕೂಡ ಗೈರಾಗಿದ್ರು.
ಇನ್ನು ಸಭೆಯಲ್ಲಿ ಜೆಡಿಎಸ್ ಹೊಂದಾಣಿಕೆ ವಿಚಾರ ಕೂಡ ಚರ್ಚೆಯಾಯ್ತು.ಅಲ್ದೇ ಸಭೆಯಲ್ಲಿ 28ಕ್ಕೆ 28 ಕ್ಷೇತ್ರಗಳು ಹಾಗೂ ರಾಜ್ಯ ಕಾಂಗ್ರೆಸ್ ಸರ್ಕಾರ ದಲಿತ-ರೈತ ವಿರೋಧಿ ಸರ್ಕಾರ ಎಂದು ನಿರ್ಣಯ ಕೈಗೊಳ್ಳಲಾಯ್ತು.ಇನ್ನು ಸಭೆ ಆರಂಭದ ವೇಳೆ ಅಯೋಧ್ಯೆ ರಾಮಮಂದಿರ ಉದ್ಘಾಟನೆ ಮಾಡಿದ ಪ್ರಧಾನಿ ಮೋದಿಗೆ ಅಭಿನಂದನೆ ಸಲ್ಲಿಸಲಾಯ್ತು.ಶ್ರೀರಾಮ ಮೂರ್ತಿಗೆ ಹಾಲಿನ ಅಭಿಷೇಕ ಮಾಡುವ ಮೂಲಕ ಸಭೆಗೆ ಚಾಲನೆ ನೀಡಲಾಗಿತ್ತು.ಒಟ್ಟಾರೆ.ಲೋಕ ಅಖಾಡಕ್ಕೆ ಬಿಜೆಪಿ ಕಲಿಗಳು ಅಧಿಕೃತವಾಗಿ ಧುಮುಕಿದ್ದು,28ಕ್ಕೆ 28 ಕ್ಷೇತ್ರಗಳನ್ನ ಗೆಲ್ಲಲಬೇಕೆಂದು ಪ್ರತಿಜ್ಞೆ ಮಾಡಿದ್ದಾರೆ.