ಬೆಂಗಳೂರು ;– ಸದನಕ್ಕೆ ಗೈರಾದ ಸಚಿವರ ವಿರುದ್ಧ ಬಿಜೆಪಿ ಸದಸ್ಯರು ಕೆಂಡಾಮಂಡಲವಾಗಿದ್ದಾರೆ. ವಿಧಾನಸಭಾ ಕಲಾಪ ಆರಂಭವಾಗುತ್ತಿದ್ದಂತೆ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಕುರಿತು ಸಾಗರ ಶಾಸಕ ಬೇಳೂರು ಗೋಪಾಲ ಕೃಷ್ಣ ಚರ್ಚೆ ಮುಂದುವರೆಸಿದರು.
ಸದನಕ್ಕೆ ಬಾರದ ಸಚಿವರ ವಿರುದ್ಧ ಬಿಜೆಪಿ ಸದಸ್ಯರು ವಾಗ್ದಾಳಿ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಶಾಸಕ ಸುನೀಲ್ ಕುಮಾರ್, ಕಲಾಪ ಆರಂಭವಾದರೂ ಸಚಿವರು ಆಗಮಿಸಿಲ್ಲ. ಸಚಿವರು ವರ್ಗಾವಣೆ ದಂಧೆಯಲ್ಲಿ ಇದ್ದಾರೆ ಎಂದರೆ ಮುಗಿಸಿಕೊಂಡೇ ಬರಲಿ… ಸದನವನ್ನು ಸ್ವಲ್ಪ ಹೊತ್ತು ಮುಂದೂಡಿ ಎಂದು ಸ್ಪೀಕರ್ ಖಾದರ್ ಅವರಿಗೆ ಒತ್ತಾಯಿಸಿದರು.