ಬೆಂಗಳೂರು: ಅನ್ಯಾಯ ಆದಾಗ ನಮ್ಮ ಬಿಜೆಪಿ ಎಂಪಿಗಳು ಮಾತಾಡುವುದಿಲ್ಲ, ಯಾಕಂದ್ರೆ ಮೋದಿ, ಅಮಿತ್ ಶಾ ಕಂಡರೆ ಬಿಜೆಪಿ ಎಂಪಿಗಳಿಗೆ ಭಯ ಎಂದು ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ರಾಜ್ಯಕ್ಕೆ ಅನುದಾನ ತಾರತಮ್ಯ ಆಗಿರೋ ವಿಚಾರವಾಗಿ ಪ್ರತಿಕ್ರಿಸಿದರು.
ಈಗ ಬಿಜೆಪಿಯವರ ಬಾಯಿಗೆ ಬೀಗ ಹಾಕಿಕೊಂಡಿದ್ದಾರೆ. ರಾಜ್ಯಕ್ಕೆ ಅನ್ಯಾಯ ಆದಾಗ ನಮ್ಮ ಬಿಜೆಪಿ ಎಂಪಿಗಳು ಮಾತಾಡುವುದಿಲ್ಲ. ಎಂಪಿಗಳು ಅಮಿತ್ ಶಾ, ಮೋದಿ ಕಂಡರೆ ಭಯ ಬೀಳ್ತಾರೆ. ನಿರ್ಮಲ ಸೀತಾರಾಮನ್ 2 ಬಾರಿ ರಾಜ್ಯದಿಂದ ಆಯ್ಕೆ ಆಗಿದ್ದಾರೆ. ಅವರ ಋಣ ತೀರಿಸಬೇಕು ಎಂದು ಅನ್ನಿಸೋದಿಲ್ವಾ? ಎಂದು ಕಟುವಾಗಿ ಪ್ರಶ್ನಿಸಿದ್ದಾರೆ.
ಹಿಂದೆ ಪರಿಹಾರಕ್ಕೆ ನಾವು ದೆಹಲಿಯಲ್ಲಿ ಹೋರಾಟ ಮಾಡಿದ್ದೆವು. GST, ಐಟಿ, ಎಲ್ಲದ್ರಲ್ಲೂ ಕರ್ನಾಟಕ ಟಾಪ್ ನಲ್ಲಿದೆ. ಇಷ್ಟೆಲ್ಲ ಮಾಡಿದರೂ ನಮ್ಮ ಪಾಲು ನಮಗೆ ಸರಿಯಾಗಿ ಕೊಡ್ತಿಲ್ಲ. ಬಿಜೆಪಿಯವರು ರಾಜಕೀಯ ಬಿಡಬೇಕು. ಯಾಕೆ ಬಿಜೆಪಿಯವರು ಬಾಯಿಗೆ ಬೀಗ ಹಾಕಿಕೊಂಡಿದ್ದಾರೆ? ನಿಮಗೆ ಭಯ ಇದ್ದರೆ ನಾವು ನಿಮ್ಮ ಜೊತೆ ಬರುತ್ತೇನೆ ಬನ್ನಿ. ಮೋದಿ, ಅಮಿತ್ ಶಾ ಭೇಟಿ ಆಗೋಣ. ಚೇರ್ ಕುಟ್ಟಿ ಕೇಳಿ, ಇಡೀ ಸಂಪುಟ ನಿಮ್ಮ ಜೊತೆ ಇರುತ್ತದೆ ಎಂದು ಬಿಜೆಪಿ ನಾಯಕರಿಗೆ ತಿರುಗೇಟು ಕೊಟ್ಟಿದ್ದಾರೆ.