ಬೆಂಗಳೂರು: ಬಿಜೆಪಿ ನೀಡಿದ 1 ಪುಟದ ನೋಟಿಸ್ಗೆ ನಾವು 170 ಪುಟಗಳ ಉತ್ತರ ನೀಡಿದ್ದೇವೆ ಎಂದು ರೆಬೆಲ್ ಬಿಜೆಪಿ ಶಾಸಕ ಎಸ್ಟಿ ಸೋಮಶೇಖರ್ ಹೇಳಿದ್ದಾರೆ.
ಸದಾಶಿವನಗರದಲ್ಲಿರುವ ಡಿಸಿಎಂ ಡಿಕೆ ಶಿವಕುಮಾರ್ ನಿವಾಸದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಮಗೆ ಬಿಜೆಪಿಯವರು ನೀಡಿದ್ದ ನೋಟಿಸ್ಗೆ ದೀರ್ಘ ಉತ್ತರ ನೀಡಿದ್ದೇವೆ. ಯಾವ್ಯಾವ ರಾಜ್ಯದಲ್ಲಿ ಕೋರ್ಟ್ ತೀರ್ಪು ಏನು ಬಂದಿದೆ? ಯಾವ್ಯಾವ ರಾಜ್ಯದಲ್ಲಿ ಬಿಜೆಪಿ ಇಂತಹ ವಿಚಾರದಲ್ಲಿ ಯಾವ ನಿರ್ಧಾರ ಕೈಗೊಂಡಿದೆ? ಎಲ್ಲಾ ದಾಖಲೆ ಸೇರಿಸಿ 170 ಪುಟಗಳ ಉತ್ತರ ಕೊಟ್ಟಿದ್ದೇವೆ ಎಂದು ತಿಳಿಸಿದರು.
ಶಿವರಾಂ ಹೆಬ್ಬಾರ್ ಪ್ರತಿಕ್ರಿಯಿಸಿ, ಸೋಮಶೇಖರ್ ಅವರದ್ದು ಅಡ್ಡ ಮತದಾನ. ನನ್ನದು ಮತದಾನಕ್ಕೆ ಗೈರು ನೋಟಿಸ್ಗೆ ಬೇರೆ ರೀತಿಯ ಉತ್ತರ ಕೊಟ್ಟಿದ್ದೇನೆ. ನನ್ನದು ಸೋಮಶೇಖರ್ ಉತ್ತರಕ್ಕಿಂತ 2 ಪುಟ ಕಡಿಮೆ ಇರಬಹುದು. ಆದರೆ ಎಲ್ಲಾ ದಾಖಲೆ ಸಹಿತ ಉತ್ತರ ಕೊಟ್ಟಿದ್ದೇನೆ ಎಂದು ಹೇಳಿದರು