ಬೆಂಗಳೂರು: ರಾಜ್ಯ ಸರ್ಕಾರದ ಘೋಷಣೆಗಳ ಜಾರಿಗೆ ಒತ್ತಾಯಿಸಿ ಜುಲೈ 4 ರಂದು ವಿಧಾನಸೌಧದಲ್ಲಿ ವಿಪಕ್ಷ ಬಿಜೆಪಿ ಧರಣಿ ನಡೆಸಲು ಮುಂದಾಗಿದೆ.
ಬಿಜೆಪಿ ಶಾಸಕರು ಅಧಿವೇಶನದಲ್ಲಿ ಧರಣಿ ನಡೆಸಲಿದ್ದಾರೆ. ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಧರಣಿ ನಡೆಸಲಿದ್ದಾರೆ.ಯಡಿಯೂರಪ್ಪ ಜೊತೆ ಮಾಜಿ ಶಾಸಕರು ಮತ್ತು ಪರಾಜಿತ ಅಭ್ಯರ್ಥಿಗಳು ಭಾಗಿಯಾಗಲಿದ್ದಾರೆ.
ಕಾಂಗ್ರೆಸ್ನ ಗ್ಯಾರಂಟಿ ಘೋಷಣೆಯಂತೆ 5 ಕೆಜಿ ಅಕ್ಕಿ ಜೊತೆ ಉಳಿದ 5 ಕೆಜಿ ಅಕ್ಕಿ ಬದಲಿಗೆ ಹಣ ನೀಡ್ತೇವೆ ಎಂದು ಹೇಳಿದಕ್ಕೆ ವಿರೋಧ ಪಕ್ಷಗಳು ಸಿಡಿದೆದ್ದುಬಿಟ್ಟು ಕೊಟ್ಟ ಮಾತಿಗೆ ಸರ್ಕಾರ ತಪ್ಪುತ್ತಿದೆ. ನೀವು ಜನರಿಗೆ ಕೊಟ್ಟ ವಿಶ್ವಸವನ್ನು ಉಳಿಸಿಕೊಳ್ಳಿ ಇಲ್ಲದಿದ್ದರೆ ಜನರ ಬಳಿ ತಮ್ಮ ಮೋಸವನ್ನು ಹೇಳಿಕೊಳ್ಳಿ ಎಂದು ಆಗ್ರಹಿಸಿ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಯಲಾಗುತ್ತೆ