ಬೆಂಗಳೂರು: ಬಿಜೆಪಿಯ ಹಾಲಿ ಹಾಗೂ ಮಾಜಿ ಶಾಸಕರು ಬಿಜೆಪಿ ಬಿಟ್ಟು ಕಾಂಗ್ರೆಸ್ ಗೆ ಬರ್ತಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಶಾಸಕ ರೇಣುಕಾಚಾರ್ಯ ಟಾಂಗ್ ಕೊಟ್ಟಿದ್ದಾರೆ. ಈ ಸಂಬಂಧ ವಿಧಾನಸೌಧದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಇನ್ನು ಭ್ರಮೆಯಲ್ಲಿಇದ್ದಾರೆ. 2023 ಕ್ಕೆ ಮತ್ತೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತೆ. ಯಾರ್ಯಾರು ಬಿಜೆಪಿಗರು ಕಾಂಗ್ರೆಸ್ಗೆ ಹೊಗ್ತಾರೆ ಅಂತ ಪಟ್ಟಿ ಕೊಡಲಿ.
ರಾಜ್ಯದಲ್ಲಿ ಭಾರತೀಯ ಜನತಾ ಪಾರ್ಟಿ ಅಧಿಕಾರಕ್ಕೆ ಬರಬೇಕು ಅನ್ನೊದು ನಮ್ಮ ಗುರಿ ಎಂದರು. ಇನ್ನೂ 2023 ಕ್ಕೆ ಬಿಜೆಪಿ ಅಧಿಕಾರಕ್ಕೆ ಬಂದ್ರೆ ಯಾರು ಸಿಎಂ ಆಗ್ತಾರೆ ಎನ್ನೊ ವಿಚಾರವಾಗಿ ಮಾತನಾಡಿ, ಇದು ಹೈ ಕಮಾಂಡಗೆ ಬಿಟ್ಟ ವಿಚಾರ. ಹೈ ಕಮಾಂಡ್ ಯಾರನ್ನಾ ಮುಖ್ಯಮಂತ್ರಿ ಮಾಡ್ತಾರೋ ಅವರೇ ಸಿಎಂ ಎಂದು ರೇಣುಕಾಚಾರ್ಯ ಹೇಳಿದ್ದಾರೆ.