ಕೇಂದ್ರ ಬಿಜೆಪಿ ಸರ್ಕಾರ ಇವತ್ತಿನ ವರೆಗೂ ರಾಜ್ಯಕ್ಕೆ ಬಿಡುಗಾಸು ಕೊಟ್ಟಿಲ್ಲ ಎಂದು ಮತ್ತೆ ಪ್ರಧಾನಿ ಮೋದಿ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಮಾಧಾನ ಹೊರಹಾಕಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಗ್ಗೆ ಕೇಳಿದ್ರೆ ಬಿಜೆಪಿಯವರು ನಮ್ಮ ಜೊತೆ ಜಗಳಕ್ಕೆ ಬರ್ತಾರೆ. ಇವರು ಅವರನ್ನು ಬೆಂಬಲಿಸುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ರಾಜ್ಯಕ್ಕೆ ಆದ ಅನ್ಯಾಯದ ಬಗ್ಗೆ ನಾವು ಮಾತನಾಡಿದ್ರೆ ಬಿಜೆಪಿಯವರು ಮೈ ಮೇಲೆ ಬೀಳುತ್ತಾರೆ. ನೀವು ಸರಿಯಾಗಿ ಕೇಳಿ ಅಂತಾರೆ. ಈಗ ಇವರ ಜೊತೆ ಜೆಡಿಎಸ್ನವರೂ ಸೇರಿಕೊಂಡಿದ್ದಾರೆ ಎಂದು ಹೇಳಿದರು.
ಅಶೋಕ್ ನಿಮ್ಮ ಲೀಡರ್ ಶಿಫ್ನಲ್ಲೇ ಕೇಂದ್ರದ ಬಳಿ ಹೋಗೋಣ ನಡಿಯಪ್ಪ ಅಂದೆ. ಇವತ್ತನ ವರೆಗೂ ಯಾವುದೇ ರಿಯಾಕ್ಟ್ ಇಲ್ಲ. ನಾನು, ಸಚಿವ ಪ್ರಿಯಾಂಕ್ ಖರ್ಗೆ, ಕೃಷ್ಣಭೈರೇಗೌಡ ಯಾರು ಭೇಟಿ ಮಾಡಿದ್ರೂ ನೋ ರಿಯಾಕ್ಷನ್ ಎಂದು ಕುಟುಕಿದರು.