ಬೆಂಗಳೂರು:- ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ಆಶ್ರಯ ನೀಡಿದ್ದ ಇಬ್ಬರು ಆರೋಪಿಗಳ ವಿರುದ್ಧ ಎನ್ಐಎ ಚಾರ್ಜ್ಶೀಟ್ ಸಲ್ಲಿಸಿದೆ.
ಆರೋಪಿ ಮುಸ್ತಫಾ ಪೈಚಾರ್ಗೆ ಆಶ್ರಯ ನೀಡಿದ್ದ ಹಿನ್ನೆಲೆ ಮನ್ಸೂರ್ ಪಾಷಾ ಮತ್ತು ಹೆಚ್ವೈ ರಿಯಾಜ್ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಲಾಗಿದೆ.
, ಆರೋಪಿಗೆ ಮನ್ಸೂರ್, ರಿಯಾಜ್ ಆಶ್ರಯ ನೀಡಿದ್ದರು. ಮೇ 5ರಂದು ಸಕಲೇಶಪುರದಲ್ಲಿ ಮುಸ್ತಫಾ ನನ್ನು ಬಂಧಿಸಿದ್ದು, ವಿದೇಶಕ್ಕೆ ಪರಾರಿಯಾಗುಲು ಯತ್ನಿಸಿದ್ದ ರಿಯಾಜ್ ನನ್ನು ಜೂ.3ರಂದು ಮುಂಬೈ ಏರ್ಪೋರ್ಟ್ನಲ್ಲಿ ಬಂಧಿಸಲಾಗಿತ್ತು.
ನನ್ನ ಪತಿಯ ಹತ್ಯೆಯಲ್ಲಿ ಮುಸ್ತಫಾ ಪೈಚಾರ್ನೇ ಪ್ರಮುಖ ಆರೋಪಿಯಾಗಿದ್ದಾನೆ. ಅವನನ್ನು ಬಂಧಿಸಿದ್ದಕ್ಕೆ ನಮಗೆ ತುಂಬಾ ಖುಷಿಯಾಗಿದೆ ಎಂದು ಪ್ರವೀಣ ನೆಟ್ಟಾರು ಪತ್ನಿ ನೂತನಾ ಹೇಳಿದ್ದರು. ಈ ಪ್ರಕರಣದ ಎಲ್ಲ ಆರೋಪಿಗಳಿಗೂ ಮರಣ ದಂಡನೆಯಾಗಬೇಕು. ಸಮಾಜದಲ್ಲಿ ಇಂತಹ ಪ್ರಕರಣ ಮರುಕಳಿಸಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಪ್ರವೀಣ್ ನೆಟ್ಟಾರು ಕೊಲೆ ಕೇಸ್ನಲ್ಲಿ ಇದುವರೆಗೆ ಎನ್ಐಎ 21 ಆರೋಪಿಗಳನ್ನು ಅರೆಸ್ಟ್ ಮಾಡಿ ಆರೋಪಿಗಳ ವಿರುದ್ದ ಚಾರ್ಶೀಟ್ ಸಲ್ಲಿಕೆ ಮಾಡಿತ್ತು.