ಬೆಂಗಳೂರು: ಲಕ್ಷ್ಮಣ ಸವದಿ ಬಿಜೆಪಿ ತೊರೆದಿದ್ದಕ್ಕಾಗಿ ಪೀಡೆ ತೊಲಗಿತು ಎಂದು ಹೇಳಿಕೆ ಕೊಡುವ ಮೂಲಕ ಮಾಜಿ ಸಚಿವ ರಮೇಶ್ ಜಾರಕಿಹೊಳಿ ತಮ್ಮ ತಲೆಯ ಮೇಲೆ ತಾವೇ ಕಲ್ಲು ಹಾಕುತ್ತಿದ್ದಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ್ ಹೇಳಿದರು.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸವದಿ ಒಬ್ಬ ಗಾಣಿಗ ಲಿಂಗಾಯತ ಹಿರಿಯ ನಾಯಕ. ಬಿಜಾಪುರ, ಬಾಗಲಕೋಟೆ ಹಾಗೂ ಕೊಪ್ಪಳ ಭಾಗದಲ್ಲಿ ಗಾಣಿಗ ಲಿಂಗಾಯತರು ಇದ್ದಾರೆ. ಸುಮಾರು 10 ರಿಂದ 12 ಕ್ಷೇತ್ರಗಳಲ್ಲಿ ಸವದಿಗೆ ಪ್ರಭಾವ ಇದೆ. ಹೇಳದೇ ಕೇಳದೇ ಅವರನ್ನು ಡಿಸಿಎಂ ಸ್ಥಾನದಿಂದ ತೆಗೆದು ಹಾಕಿದ್ರು ಎಂದರು.
ರಮೇಶ್ ಮಾತು ಅವರಿಗೇ ಹೊಡೆತ ಕೊಡುತ್ತದೆ. ಸವದಿ ಪರ ಮತ್ತಷ್ಟು ಅನುಕಂಪ ಸೃಷ್ಟಿಯಾಗುತ್ತದೆ. ಸವದಿ ಅವರು ಲಿಂಗಾಯತ ಸಮುದಾಯದ ಹಿರಿಯ ನಾಯಕರಾಗಿದ್ದಾರೆ. ಡಿಸಿಎಂ ಮಾಡಿ ಹೇಳದೇ ಕೇಳದೇ ತೆಗೆದು ಹಾಕಿದ್ರು. ಟಿಕೆಟ್ ಕೊಡ್ತೀವಿ ಅಂತಾ ಹೇಳಿ ಅನ್ಯಾಯ ಮಾಡಿದ್ರು. ಹೀಗಾಗಿ ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಅವರ ಪಕ್ಷ ಸೇರ್ಪಡೆಯಿಂದ ಕಾಂಗ್ರೆಸ್ ಗೆ ಹೊಸ ಶಕ್ತಿ ಬಂದಿದೆ, ಅನುಕೂಲ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸವದಿ ಸೇರ್ಪಡೆಯಿಂದ ಕಾಂಗ್ರೆಸ್ಗೆ ಲಾಭ
ಬೆಳಗಾವಿ ಬಿಜೆಪಿ ನಾಯಕ ಲಕ್ಷ್ಮಣ ಸವದಿ ಸೇರ್ಪಡೆಯಿಂದ ಕಾಂಗ್ರೆಸ್ಗೆ ಲಾಭವಾಗಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು, ‘‘ಜಿಲ್ಲೆಯಲ್ಲಿಅವರದ್ದೇ ಆದ ಸಮುದಾಯ ಇದೆ. ಸಚಿವರಾಗಿ, ಡಿಸಿಎಂ ಆಗಿ ಕೆಲಸ ಮಾಡಿದ್ದಾರೆ. ಇವೆಲ್ಲ ಕಾಂಗ್ರೆಸ್ಗೆ ಪ್ಲಸ್ ಆಗಲಿದೆ’’, ಎಂದರು. ಬಿಜೆಪಿ ಶಾಸಕ ಅನಿಲ್ ಬೆನಕೆ ಕಾಂಗ್ರೆಸ್ ಸಂಪರ್ಕದಲ್ಲಿದ್ದಾರಾ ಎಂಬ ಪ್ರಶ್ನೆಗೆ, ‘‘ಸಾಕಷ್ಟು ಬಿಜೆಪಿ ನಾಯಕರು ಸಂಪರ್ಕದಲ್ಲಿದ್ದಾರೆ. ಯಾರು ಎಂದು ಬಹಿರಂಗ ಹೇಳಲು ಆಗೋದಿಲ್ಲ. ಇನ್ನೂ ಮಾತುಕತೆ ಹಂತದಲ್ಲಿದೆ’’, ಎಂದರು.
ಪಕ್ಷದ ಬಲ ವರ್ಧನೆ
ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರ್ಪಡೆಯಿಂದ ಖಂಡಿತವಾಗಿಯೂ ಪಕ್ಷದ ಶಕ್ತಿ ಹೆಚ್ಚುತ್ತದೆ ಎಂದು ಶಾಸಕಿ ಲಕ್ಷಿತ್ರ್ಮೕ ಹೆಬ್ಬಾಳ್ಕರ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘‘ಬಿಜೆಪಿ ತೊರೆದು ಕೆಲ ನಾಯಕರು ಕಾಂಗ್ರೆಸ್ ಸೇರುವುದು ಈಗಾಗಲೇ ಶುರುವಾಗಿ ಬಿಟ್ಟಿದೆ’’, ಎಂದು ಹೇಳಿದರು.