ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಒಳಗೆ ಬೂದಿಮುಚ್ಚಿದ ಕೆಂಡದ ಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ಸಿಎಂ ವಿರುದ್ಧ ಸಮರ ಸಾರ್ತಿರೋ ಬಿ.ಕೆ ಹರಿಪ್ರಸಾದ್ ಮತ್ತೊಮ್ಮೆ ನೇರಾನೇರ ಯುದ್ಧಕ್ಕೆ ನಿಂತಿದ್ದಾರೆ. ಈ ಕದನಕ್ಕೆ ಈಡಿಗ ಸಮಾವೇಶ ಹೊಸ ವೇದಿಕೆ ಸೃಷ್ಟಿ ಮಾಡ್ತು.ಇವತ್ತು ಬಿಕೆ ಹರಿಪ್ರಸಾದ್ ಟಕ್ಕರ್ ಕೊಡಲು ಬೆಂಗಳೂರಿನ ಅರಮನೆ ಮೈದಾದಲ್ಲಿ ಬೃಹತ್ ಈಡಿಗ ಸಮಾವೇಶ ನಡೆಯಿತು. ಈ ಮೂಲಕ ಈಡಿಗ ಸಮುದಾಯಿದಿಂದ ಸಿಎಂಗೆ ತೊಂದರೆಯಿಲ್ಲ ಅನ್ನೋದನ್ನ ಸಾಬೀತುಪಡಿಸಿದ್ರು. ಹರಿಪ್ರಸಾದ್ ಪ್ರತೀ ಮಾತಲ್ಲೂ ಕೋಪ, ಸಿಟ್ಟು, ನನ್ನೇನೂ ಮಾಡೋದಕ್ಕಾಗಲ್ಲ ಅನ್ನೋ ಚಾಲೆಂಜ್.. ಈ ಮೂಲಕ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಬಿಕೆ ಹರಿಪ್ರಸಾದ್ ಅವರ ಕೋಲ್ಡ್ವಾರ್ ಮುಂದುವರಿದಿದೆ.
ಹೈಕಮಾಂಡ್ ವಾರ್ನಿಂಗ್ ಬಳಿಕ ಸೈಲೆಂಟ್ ಆಗಿದ್ದ ಹರಿಪ್ರಸಾದ್, ಇದೀಗ ಮತ್ತೆ ಕೋಪಾವೇಷ ಪ್ರದರ್ಶನ ಮಾಡಿದ್ದಾರೆ. ಇದಕ್ಕೆ ಕಾರಣವಾಗಿರೋದು ಈಡಿಗ ಸಮಾವೇಶ. ಹೌದು ಕಳೆದ ಬಾರಿ ಈಡಿಗ ಸಮಾವೇಶ ಮಾಡಿ ಸಿಎಂ ಸಿದ್ದರಾಮಯ್ಯ ವಿರುದ್ದ ಹರಿಹಾಯ್ದಿದ್ದ ಬಿಕೆ ಹರಿಪ್ರಸಾದ್ ಗೆ ಟಕ್ಕರ್ ನೀಡೋಕೆ ಇವತ್ತು ಅರಮನೆ ಮೈದಾನದಲ್ಲಿ ಆರ್ಯ ಈಡಿಗ ಸಂಘ ಅರಮನೆ ಮೈದಾನದಲ್ಲಿ ಅಮೃತ ಮಹೋತ್ಸವ ಈಡಿಗ ಮತ್ತು 25 ಪಂಗಡಗಳ ಬೃಹತ್ ಜಾಗೃತ ಸಮಾವೇಶ ಆಯೋಜಿಸಿತ್ತು. ಈ ವೇಳೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಶಿವಕುಮಾರ್, ಸಚಿವರಾದ ಮಧು ಬಂಗಾರಪ್ಪ, ಶಿವರಾಜ್ ತಂಗಡಗಿ ಸೇರಿದಂತೆ ನಟರಾದ ಶಿವರಾಜ್ ಕುಮಾರ್, ಸಾಧುಕೋಕಿಲ, ಶ್ರೀಮುರುಳಿ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು.