ಬೆಂಗಳೂರು;- ನಗರದ ಮೆಟ್ರೊ ರೈಲು ನಿಗಮವು ನಿಲ್ದಾಣಗಳಲ್ಲಿ ಪ್ಲ್ಯಾಟ್ಫಾರಂ ಸ್ಕ್ರೀನ್ಡೋರ್ ವ್ಯವಸ್ಥೆ ಕಲ್ಪಿಸಲು ಮುಂದಾಗಿದೆ.
ಸದ್ಯ ರಾಜ್ಯದಲ್ಲಿ ಇದೆ ಮೊದಲ ಬಾರಿಗೆ ಪ್ಲ್ಯಾಟ್ಫಾರಂ ಸ್ಕ್ರೀನ್ಡೋರ್ ಅಳವಡಿಸಲಾಗುತ್ತಿದೆ. ನಗರದಲ್ಲಿ 63 ಸ್ಟೇಷನ್ ಗಳಿದ್ದು ಯಾವುದರಲ್ಲಿಯೂ ಈ ವ್ಯವಸ್ಥೆ ಅಳವಡಿಸಿಕೊಂಡಿಲ್ಲ. ಎಲೆಕ್ಟ್ರಾನಿಕ್ ಸಿಟಿ ಬಳಿಯ ಕೋನಪ್ಪನ ಅಗ್ರಹಾರ ಬಳಿ ನಿರ್ಮಿಸುತ್ತಿರುವ ಮೆಟ್ರೋ ನಿಲ್ದಾಣಕ್ಕೆ ಇನ್ಫೋಸಿಸ್ ಫೌಂಡೇಶನ್ ದೇಣಿಗೆಯಿಂದ ಪ್ಲ್ಯಾಟ್ಫಾರಂ ಸ್ಕ್ರೀನ್ಡೋರ್ ಅಳವಡಿಸಲಾಗುತ್ತಿದೆ.
ಈಗಾಗಲೇ ಕೋನಪ್ಪನ ಅಗ್ರಹಾರ ಮೆಟ್ರೋ ಸ್ಟೇಷನ್ ಕಾಮಗಾರಿ ಮುಕ್ತಾಯದ ಹಂತ ತಲುಪಿದ್ದು ಈ ವರ್ಷಾಂತ್ಯದ ವೇಳೆಗೆ ಕಾರ್ಯಾರಂಭ ಮಾಡುವ ಸಾಧ್ಯತೆಯಿದೆ. ಇದರಿಂದ ಮೆಟ್ರೋ ಸ್ಟೇಷನ್ ಗಳಲ್ಲಿ ಸಾಮಾಜಿಕ ಜಾಲತಾಣದ ಹುಚ್ಚಾಟ ಮತ್ತು ಸುಸೈಡ್ ಪ್ರಕರಣಗಳು ಕಡಿಮೆಯಾಗುತ್ತದೆ ಮತ್ತೊಂದು ಸಣ್ಣಪುಟ್ಟ ಮಕ್ಕಳು ಮೆಟ್ರೋ ಸ್ಟೇಷನ್ ಗೆ ಎಂಟ್ರಿ ಕೊಟ್ಟ ವೇಳೆ ಗೊತ್ತಾಗದೆ ಟ್ರ್ಯಾಕ್ ಬಳಿ ಹೋಗಿರುವ ಸಾಕಷ್ಟು ಪ್ರಕರಣಗಳು ಬೆಳಕಿಗೆ ಬಂದಿದ್ದು ಈ ಹಿನ್ನೆಲೆಯಲ್ಲಿ ನಮ್ಮ ಮೆಟ್ರೋ ಈ ಪ್ಲಾನ್ ಮಾಡಲು ಮುಂದಾಗಿದೆ.
![Demo](https://prajatvkannada.com/wp-content/uploads/2023/08/new-Aston-Band.jpeg)