ಬೆಂಗಳೂರು: ರಾಜಧಾನಿ ಬೆಂಗಳೂರಿನ ದುನಿಯಾ ದಿನೇದಿನೆ ಕಾಸ್ಟ್ಲಿ ಆಗ್ತಿದೆ. ಜನ ಸಾಮಾನ್ಯರಂತೂ ಬದುಕೋಕೆ ಆಗ್ತಿಲ್ಲ. ಏಪ್ರಿಲ್, ಮೇ ತಿಂಗಳು ಬಂದ್ರೆ ಸಾಕು ಟಣ್ ಅಂತ ಕರೆಂಟ್ ಬಿಲ್ ಏರಿಕೆ ಆಗೇ ಬಿಡುತ್ತೆ. ಆದ್ರೀಗ ನಮ್ಮ ಮೆಟ್ರೋ ಪ್ರಯಾಣ ದರ ಹೆಚ್ಚಳಕ್ಕೆ ಬಿಎಂಆರ್ಸಿಎಲ್ ಸಿದ್ದತೆ ನಡೆಸಿದೆ.
ರಾಜಧಾನಿ ಜನರಿಗೆ ಶಾಕ್ ಮೇಲೆ ಶಾಕ್ ಕಾಡ್ತಾನೇ ಇದೆ. ಶ್ರೀಸಾಮಾನ್ಯ, ಮಧ್ಯಮ ವರ್ಗದ ಜನರಂತೂ ಈ ದುನಿಯಾದಲ್ಲಿ ಜೀವನ ಮಾಡೋಕೆ ಆಗ್ತಾ ಇಲ್ಲ. ಎಲ್ಲವೂ ತುಂಬಾನೇ ಕಾಸ್ಟ್ಲಿ.. ಸರ್ಕಾರಿ ಇಲಾಖೆಗಳಂತೂ ನಷ್ಟದ ನೆಪವೊಡ್ಡಿ ಕರೆಂಟ್ ದರ, ಹಾಲು ಸೇರಿದಂತೆ ಅಗತ್ಯ ವಸ್ತುಗಳ ಬೆಲೆಯನ್ನ ಏರಿಕೆ ಮಾಡ್ತಾನೇ ಬಂದಿದೆ. ಆದ್ರೆ ಈಗ ಬೆಂಗಳೂರು ಮೆಟ್ರೋ ನಿಗಮದ ಸರದಿ.
ಹೌದು..ಈಗಾಗಲೇ ಮೆಟ್ರೋ ಕಾಮಗಾರಿಗಾಗಿ ವೆಚ್ಚ ಮಾಡಿದ ಹಣವನ್ನು ಭರಿಸಿಕೊಳ್ಳುವುದಕ್ಕೆ ಟಿಕೆಟ್ ದರ ಪರಿಷ್ಕರಣೆ ಬಿಟ್ಟರೆ ಬೇರೆ ದಾರಿ ಇಲ್ಲ.ಇದೂ ಇಲ್ಲದೆ 2017 ರಿಂದ ಟಿಕೆಟ್ ದರ ಹೆಚ್ಚಿಸಿರಲಿಲ್ಲ.ಆದ್ರೆ ಟಿಕೆಟ್ ದರ ಹೆಚ್ಚಿಸುವುದು ನಮ್ಮ ಮೆಟ್ರೋಗೆ ಅನಿವಾರ್ಯವಾಗಿದೆ.ಈಗಾಗಲೇ ಯಲಚೇನಹಳ ಟು ನಾಗಸಂದ್ರ ನಡುವೆ 30 ಕೀ ಮೀಟರ್ ಇದ್ರೂ ಗರಿಷ್ಠ ದರ 60 ಇದೆ.ಬೈಯಪ್ಪನಹಳ್ಳಿ ಟು ಕಂಗೇರಿ 25 ಕಿ ಮೀಟರ್ ಇದ್ರೂ ಗರಿಷ್ಠ ದರ 60 ಇದೆ.ಇದೀಗ ನೇರಳೆ ಮಾರ್ಗದ ಬೈಯಪ್ಪನಹಳ್ಳಿ ಟು ವೈಟ್ ಫೀಲ್ಡ್ ನಡುವಿನ 15 ಕೀ ಮೀಟರ್ ಮಾರ್ಗ ವಾಣಿಜ್ಯ ಸಂಚಾರ ಶುರು ಆಗಿದೆ.ನೇರಳೆ ಮಾರ್ಗ ಒಟ್ಟು 40 ಕಿ ಮೀಟರ್ ನಲ್ಲಿ ಮೆಟ್ರೋ ಓಡಾಟ ನಡೆಸಲಿದ್ದು ಗರಿಷ್ಠ ದರ 60 ಇದ್ರೆ ಕಾರ್ಯಾಚರಣೆ ವೆಚ್ಚ ನಷ್ಟ ಆಗ್ತಿರೋ ಕಾರಣ ನೇರಳೆ ಹಾಗೂ ಹಸಿರು ಮಾರ್ಗದಲ್ಲಿ ಗರಿಷ್ಠ ದರ ಪರಿಷ್ಕರಣೆಗೆ ಪ್ರಸ್ತಾವನೆ ಸಿದ್ದಪಡಿಸಲಾಗಿದೆ.
ಒಟ್ನಲ್ಲಿ ದರ ಏರಿಕೆ ಬರೆಯಿಂದ ತತ್ತರಿಸಿ ಹೋಗಿರುವ ಸಿಲಿಕಾನ್ ಸಿಟಿಯ ಜನರಿಗೆ ವಿದ್ಯುತ್ ಬಿಲ್, ಹಾಲಿನ ದರ ಹೆಚ್ಚಳದ ಜೊತೆಗೆ ಮೆಟ್ರೋ ಟಿಕೆಟ್ ದರ ಹೊರೆಯಾಗಲಿದ್ದು, ಕಟ್ಟೋಕೆ ರೆಡಿಯಾಗಬೇಕಿದೆ..ಒಟ್ಟಿನಲ್ಲಿ ಒಂದು ಕಡೆ ಮೆಟ್ರೋ ಲೋಕಾರ್ಪಣೆ ಸಿಹಿಯಾದ್ರೆ ಸ್ವಲ್ಪ ಕಹಿ ಎಂಬುದಂತೂ ಸತ್ಯ..