ಬೆಂಗಳೂರು: ಕೆಎ 57 ಎಫ್ 2069 ನಂಬರಿನ ಸುಮ್ಮನಹಳ್ಳಿ ಡಿಪೋವಿನ ಬಿಎಂಟಿಸಿ ಬಸ್ ನಿನ್ನೆ ಬ್ಯಾಡರಹಳ್ಳಿ ಬಳಿ ಲಿಂಗಧೀರನಹಳ್ಳಿ ಬಸ್ ನಿಲ್ದಾಣಕ್ಕೆ ಬಂದಿದೆ. ಬಸ್ ನ ಚಾಲಕ ಪ್ರಕಾಶ್ ಎಂದಿನಂತೆ ಬಿಎಂಟಿಸಿ ಕೊಟ್ಟಿರೋ ಕೊಠಡಿಯಲ್ಲಿ ಮಲಗಿದ್ದಾರೆ.
ಆದ್ರೆ, ಬಳ್ಳಾರಿ ಮೂಲದ ಮುತ್ತಯ್ಯ ಸ್ವಾಮಿ ಬಸ್ ನಲ್ಲೇ ಮಲಗಿರ್ತಾನೆ. ಈ ವೇಳೆ ಬಸ್ ನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿಕಾಣಿಸಿಕೊಳ್ಳುತ್ತೆ. ಕ್ಷಣಮಾತ್ರದಲ್ಲಿ ಬೆಂಕಿಯಕೆನ್ನಾಲಿಗೆ ಇಡೀ ಬಸ್ಸನ್ನ ವ್ಯಾಪಿಸಿ ಬಸ್ ನಲ್ಲಿ ಗಾಢನಿದ್ರೆಗೆ ಜಾರಿದ್ದ ಮುತ್ತಯ್ಯಸ್ವಾಮಿ,
ಉಸಿರಾಟದ ಸಮಸ್ಯೆಯಿಂದ ಪ್ರಜ್ಞಾಹೀನ ಸ್ಥಿತಿಯನ್ನ ತಲುಪಿ ಬಸ್ ನಲ್ಲೇ ಸುಟ್ಟುಕರಕಲಾಗ್ತಾರೆ. ಇದೀಗ ಸ್ಥಳಕ್ಕೆ ಬ್ಯಾಡರಹಳ್ಳಿ ಪೊಲೀಸರು ದೌಡಾಯಿಸಿದ್ದಾರೆ. ಅದೇ ರೀತಿ ಬೆಂಕಿಹೊತ್ತಿಕೊಳ್ಳಲು ಕಾರಣವಾದ ಅಂಶವೇನು ಅನ್ನೋದನ್ನ ಅಗ್ನಿಶಾಮಕ ಅಧಿಕಾರಿಗಳು ಪತ್ತೆಹಚ್ಚುತ್ತಿದ್ದಾರೆ. ಇಂದು ಬೆಳಿಗ್ಗೆ 5 ಗಂಟೆಗೆ ಲಿಂಗಧೀರನಹಳ್ಳಿಯಿಂದ ಈ ಬಸ್ ಕೆ.ಆರ್ ಮಾರ್ಕೆಟ್ ಗೆ ತೆರಳಬೇಕಿತ್ತು. ಇಷ್ಟು ದಿನ ಮೆಜೆಸ್ಟಿಕ್ ಗೆ ತೆರಳ್ತಿದ್ದ ಬಸ್ಸು ಇವತ್ತಿನ ಮಟ್ಟಿಗೆ ಮಾರ್ಕೆಟ್ ಗೆ ರೂಟ್ ಬದಲಿಸಲಾಗಿತ್ತು.